ಊಟ ಮಾಡಿ ಕೈ ತೊಳೆಯುವಷ್ಟರಲ್ಲಿ ಬೆಲೆ ಬಾಳುವ ಮೊಬೈಲ್ ಮಂಗಮಾಯ

ನೆಲಮಂಗಲ: ಊಟಕ್ಕೆಂದು ಹೋಟೆಲ್‌ಗೆ ಬಂದಿದ್ದ ತಂದೆ ಮತ್ತು ಮಗಳ ಮೊಬೈಲ್​ಗಳು ಕಳ್ಳತನವಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಬಿಲ್ಲಿನಕೋಟೆ ಬಳಿಯ ರಾಷ್ಟ್ರೀಯ ಹೆದ್ದಾರಿ4ರ ಕಾಮಧೇನು ಹೋಟೆಲ್‌ನಲ್ಲಿ ನಡೆದಿದೆ. ತಂದೆ ಲಕ್ಷ್ಮಣ ಮತ್ತು ಮಗಳು ಮೋನಿಕಾ ಇಬ್ಬರು ಹೋಟೆಲ್​ನಲ್ಲಿ ಊಟ ಮಾಡಲು ಬಂದಿದ್ದರು. ಊಟ ಮಾಡಿ ಕೈ ತೊಳೆದು ಹಿಂತಿರುಗುವಷ್ಟರಲ್ಲಿ ಇಬ್ಬರ ಬೆಲೆ ಬಾಳುವ ಮೊಬೈಲ್ ಕಳ್ಳತನವಾಗಿದೆ. ಹೋಟೆಲ್ ಸಿಬ್ಬಂದಿಯೇ ಕಳ್ಳತನ ಮಾಡಿರುವುದಾಗಿ ತಂದೆ, ಮಗಳು ಆರೋಪಿದ್ದಾರೆ. ಈ ಹಿಂದೆಯೂ ಈ ರೀತಿಯ ಘಟನೆಗಳು ಸಂಭವಿಸಿದ್ದರೂ […]

ಊಟ ಮಾಡಿ ಕೈ ತೊಳೆಯುವಷ್ಟರಲ್ಲಿ ಬೆಲೆ ಬಾಳುವ ಮೊಬೈಲ್ ಮಂಗಮಾಯ
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Sep 17, 2020 | 1:27 PM

ನೆಲಮಂಗಲ: ಊಟಕ್ಕೆಂದು ಹೋಟೆಲ್‌ಗೆ ಬಂದಿದ್ದ ತಂದೆ ಮತ್ತು ಮಗಳ ಮೊಬೈಲ್​ಗಳು ಕಳ್ಳತನವಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಬಿಲ್ಲಿನಕೋಟೆ ಬಳಿಯ ರಾಷ್ಟ್ರೀಯ ಹೆದ್ದಾರಿ4ರ ಕಾಮಧೇನು ಹೋಟೆಲ್‌ನಲ್ಲಿ ನಡೆದಿದೆ.

ತಂದೆ ಲಕ್ಷ್ಮಣ ಮತ್ತು ಮಗಳು ಮೋನಿಕಾ ಇಬ್ಬರು ಹೋಟೆಲ್​ನಲ್ಲಿ ಊಟ ಮಾಡಲು ಬಂದಿದ್ದರು. ಊಟ ಮಾಡಿ ಕೈ ತೊಳೆದು ಹಿಂತಿರುಗುವಷ್ಟರಲ್ಲಿ ಇಬ್ಬರ ಬೆಲೆ ಬಾಳುವ ಮೊಬೈಲ್ ಕಳ್ಳತನವಾಗಿದೆ. ಹೋಟೆಲ್ ಸಿಬ್ಬಂದಿಯೇ ಕಳ್ಳತನ ಮಾಡಿರುವುದಾಗಿ ತಂದೆ, ಮಗಳು ಆರೋಪಿದ್ದಾರೆ. ಈ ಹಿಂದೆಯೂ ಈ ರೀತಿಯ ಘಟನೆಗಳು ಸಂಭವಿಸಿದ್ದರೂ ಹೋಟೆಲ್ ಮಾಲೀಕ ಸಿಸಿಟಿವಿ ಅಳವಡಿಸದೆ ನಿರ್ಲಕ್ಷ್ಯವಹಿಸಿದ್ದಾನೆ ಎನ್ನಲಾಗಿದೆ. ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us