ದನ ಕಟ್ಟುವ ವಿಚಾರದಲ್ಲಿ ಸಿಟ್ಟಿಗೆದ್ದ ಮಾವ.. ಸೊಸೆ ಎದೆಗೆ ಗುಂಡು ಹಾರಿಸಿಯೇ ಬಿಡೋದಾ!

ಮಡಿಕೇರಿ: ಆಸ್ತಿ ವಿವಾದ ಹಿನ್ನೆಲೆಯಲ್ಲಿ ಮಾವ ಸೊಸೆ ಮೇಲೆ ಗುಂಡು ಹಾರಿಸಿರುವ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಬೆಟ್ಟದಕೊಪ್ಪ ಗ್ರಾಮದಲ್ಲಿ ನಡೆದಿದೆ. ಮಾವ ಐಯ್ಯಪ್ಪನಿಂದ ಸೊಸೆ ತೀರ್ಥ(36) ಮೇಲೆ ಫೈರಿಂಗ್ ಆಗಿದೆ. ಇಂದು ಬೆಳಿಗ್ಗೆ ಸುಮಾರು 10 ಗಂಟೆಗೆ ದನ ಕಟ್ಟುವ ವಿಚಾರಕ್ಕೆ ರಸ್ತೆಯಲ್ಲೇ ಮಾವ-ಸೊಸೆ ನಡುವೆ ಜಗಳ ಶುರುವಾಗಿತ್ತು. ಇವರಿಬ್ಬರ ನಡುವಿನ ಜಗಳ ಆಸ್ತಿ ವಿವಾದಕ್ಕೆ ತಿರುಗಿ ಕೊನೆಗೆ ಮಾವನಿಗೆ ಸಿಟ್ಟು ಹೆಚ್ಚಾಗಿ ಸೊಸೆ ಎಡಗೈ ಹಾಗೂ ಎದೆಯ ಭಾಗಕ್ಕೆ ಗುಂಡು ಹಾರಿಸಿದ್ದಾರೆ. ಗಾಯಾಳುವನ್ನು […]

ದನ ಕಟ್ಟುವ ವಿಚಾರದಲ್ಲಿ ಸಿಟ್ಟಿಗೆದ್ದ ಮಾವ.. ಸೊಸೆ ಎದೆಗೆ ಗುಂಡು ಹಾರಿಸಿಯೇ ಬಿಡೋದಾ!
Updated By: ಸಾಧು ಶ್ರೀನಾಥ್​

Updated on: Nov 05, 2020 | 2:26 PM

ಮಡಿಕೇರಿ: ಆಸ್ತಿ ವಿವಾದ ಹಿನ್ನೆಲೆಯಲ್ಲಿ ಮಾವ ಸೊಸೆ ಮೇಲೆ ಗುಂಡು ಹಾರಿಸಿರುವ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಬೆಟ್ಟದಕೊಪ್ಪ ಗ್ರಾಮದಲ್ಲಿ ನಡೆದಿದೆ. ಮಾವ ಐಯ್ಯಪ್ಪನಿಂದ ಸೊಸೆ ತೀರ್ಥ(36) ಮೇಲೆ ಫೈರಿಂಗ್ ಆಗಿದೆ.

ಇಂದು ಬೆಳಿಗ್ಗೆ ಸುಮಾರು 10 ಗಂಟೆಗೆ ದನ ಕಟ್ಟುವ ವಿಚಾರಕ್ಕೆ ರಸ್ತೆಯಲ್ಲೇ ಮಾವ-ಸೊಸೆ ನಡುವೆ ಜಗಳ ಶುರುವಾಗಿತ್ತು. ಇವರಿಬ್ಬರ ನಡುವಿನ ಜಗಳ ಆಸ್ತಿ ವಿವಾದಕ್ಕೆ ತಿರುಗಿ ಕೊನೆಗೆ ಮಾವನಿಗೆ ಸಿಟ್ಟು ಹೆಚ್ಚಾಗಿ ಸೊಸೆ ಎಡಗೈ ಹಾಗೂ ಎದೆಯ ಭಾಗಕ್ಕೆ ಗುಂಡು ಹಾರಿಸಿದ್ದಾರೆ. ಗಾಯಾಳುವನ್ನು ಮಡಿಕೇರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.