ಮಡಿಕೇರಿ ಹುಲಿ ಉಪಟಳ: 15ಕ್ಕೇರಿದ ಸಾವಿನ ಸಂಖ್ಯೆ.. ಇಂದು ಸಹ ಬಾಲಕ ಹುಲಿ ಬಾಯಿಗೆ ತುತ್ತು

|

Updated on: Mar 08, 2021 | 11:48 AM

ಈ ಹುಲಿ ದಾಳಿಯಿಂದಾಗಿ 12 ದಿನದಲ್ಲಿ 12 ಜಾನುವಾರು ಮತ್ತು ಇಬ್ಬರು ಮನುಷ್ಯರು ಬಲಿಯಾಗಿದ್ದರು. ಆದರೆ ಇಂದು ಸಹ ಹುಲಿ ದಾಳಿಯಿಂದಾಗಿ ಒಬ್ಬ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರ ಪರಿಸ್ಥಿತಿ ತೀರ ಗಂಭೀರವಾಗಿದೆ.

ಮಡಿಕೇರಿ ಹುಲಿ ಉಪಟಳ: 15ಕ್ಕೇರಿದ ಸಾವಿನ ಸಂಖ್ಯೆ.. ಇಂದು ಸಹ ಬಾಲಕ ಹುಲಿ ಬಾಯಿಗೆ ತುತ್ತು
ಆಸ್ಪತ್ರೆ ಎದುರು ಮಡಿಕೇರಿ ಪೊಲೀಸ್​
Follow us on

ಮಡಿಕೇರಿ: ಕೆಲವು ದಿನಗಳಿಂದ ಸಾರ್ವಜನಿಕರಿಗೆ ಭೀತಿ ಹುಟ್ಟಿಸಿದ್ದ ಹುಲಿಯನ್ನು ಸೆರೆ ಹಿಡಿಯುವ ಕಾರ್ಯಾಚರಣೆಯ ವೇಳೆ, ಹುಲಿ ದಾಳಿಯಿಂದಾಗಿ 10 ವರ್ಷದ ಬಾಲಕ ಸಾವನ್ನಪ್ಪಿದ್ದು, ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ನಡೆದಿದೆ. ಗಾಯಾಳು ವ್ಯಕ್ತಿಯನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ.

ಇದಕ್ಕೂ ಮೊದಲು ಇಂದು ಮುಂಜಾನೆ ಬೆಳ್ಳೂರು ಗ್ರಾಮದಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಒಂದು ಹಸು ಸಾವನ್ನಪ್ಪಿ, ಮತ್ತೊಂದು ಹಸುವಿನ ಸ್ಥಿತಿ ಗಂಭೀರವಾಗಿತ್ತು. ಈ ಹುಲಿ ದಾಳಿಯಿಂದಾಗಿ 12 ದಿನದಲ್ಲಿ 12 ಜಾನುವಾರು ಮತ್ತು ಇಬ್ಬರು ವ್ಯಕ್ತಿಗಳು ಬಲಿಯಾಗಿದ್ದರು.

ಆದರೆ ಇಂದು ಸಹ ಹುಲಿ ದಾಳಿಯಿಂದಾಗಿ ಒಬ್ಬ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರ ಪರಿಸ್ಥಿತಿ ತೀರ ಗಂಭೀರವಾಗಿದೆ. ಇಷ್ಟಾದರೂ ಹುಲಿ ಸೆರೆ ಹಿಡಿಯಲು ಸಾಧ್ಯವಾಗದ ಹಿನ್ನೆಲೆಯಿಂದಾಗಿ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕುತ್ತಿದ್ದಾರೆ.

ಹುಲಿ ಸೆರೆಗೆ ಕಾರ್ಯಾಚರಣೆ
ಹಲವು ಜೀವಗಳನ್ನು ಬಲಿ ಪಡೆದ ಹುಲಿಯ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಶುರು ಮಾಡಿಕೊಂಡಿತ್ತು. ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿಯಲ್ಲಿ ಕಾರ್ಯಾಚರಣೆಗೆ ಇಳಿದಿತ್ತು. ಮತ್ತಿಗೋಡು ಶಿಬಿರದಿಂದ ಸಾಕಾನೆಗಳನ್ನು ಕರೆಸಿಕೊಳ್ಳಲಾಗಿತ್ತು. ಅಭಿಮನ್ಯು, ಗೋಪಾಲಸ್ವಾಮಿ ಎಂಬ ಎರಡು ಸಾಕಾನೆಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು. ಆದರೆ ಆ ಕಾರ್ಯಾಚರಣೆಯ ವೇಳೆ ಇಂದು ಸಹ ಈ ಅವಘಡ ಸಂಭವಿಸಿದೆ.

ಇದನ್ನೂ ಓದಿ:Tiger Attack | ಹೆಚ್ಚುತ್ತಿದೆ ಹುಲಿ ದಾಳಿ ಭೀತಿ: ಬಲಿಯಾಗುತ್ತಿವೆ ರೈತರ ಸಾಕು ಪ್ರಾಣಿಗಳು

Published On - 11:47 am, Mon, 8 March 21