ಬಾಗಲಕೋಟೆ: ಬಾಡಿಗೆ ರೂಮ್‌ನಲ್ಲಿ ಅಪ್ರಾಪ್ತೆ, ಯುವಕ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಮುಧೋಳ ನಗರದ ಬಸವ ನಗರದಲ್ಲಿ ನಡೆದಿದೆ. 23 ವರ್ಷದ ಆನಂದ್, 15 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡವರು.
ಆನಂದ್ ಮುಧೋಳ ನಗರದ ರನ್ನ ವೃತ್ತದ ಬಳಿಯ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ. ಅಪ್ರಾಪ್ತೆ ಮತ್ತು ಯುವಕ ಇಬ್ಬರೂ ಒಂದೇ ಗ್ರಾಮದವರು. ಬಸವ ನಗರದ ಬಾಡಿಗೆ ರೂಮ್ ನಲ್ಲಿ ಅಪ್ರಾಪ್ತೆ ಮತ್ತು ಯುವಕ ಇಬ್ಬರೂ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವಕ ಸಾಯುವ ಮುನ್ನ ವಾಟ್ಸಾಪ್ನಲ್ಲಿ ಆಲ್ ಪ್ರೆಂಡ್ಸ್ ಮಿಸ್ ಯು, ಅವ್ವ ಅಪ್ಪ ಮಿಸ್ ಯು ಎಂದು ಸ್ಟೇಟಸ್ ಹಾಕಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ. ಮುಧೋಳ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Published On - 1:00 pm, Sun, 4 October 20