ಹುಲ್ಲು ತರಲು ಅಡವಿಗೆ ಕರೆದೊಯ್ದು ಅಪ್ರಾಪ್ತೆ ಮೇಲೆ ಅತ್ಯಾಚಾರ?
ದಾವಣಗೆರೆ: ಅಪ್ರಾಪ್ತೆಯೊಬ್ಬಳ ಮೇಲೆ ಆಕೆಯ ಸಂಬಂಧಿಕನೇ ಅತ್ಯಾಚಾರ ಎಸಗಿರುವ ಆರೋಪ ಜಿಲ್ಲೆಯ ಜಗಳೂರು ಠಾಣಾ ವ್ಯಾಪ್ತಿಯಲ್ಲಿ ಕೇಳಿಬಂದಿದೆ. ಹುಲ್ಲು ತರಲು ಅಪ್ರಾಪ್ತೆಯನ್ನು ಅಡವಿಗೆ ಕರೆದುಕೊಂಡು ಹೋದ ಆಕೆಯ ಸಂಬಂಧಿಕ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ಈ ವಿಷಯ ಮನೆಯಲ್ಲಿ ಹೇಳದಂತೆ ಆರೋಪಿ ಅಪ್ರಾಪ್ತೆಗೆ ಬೆದರಿಕೆ ಸಹ ಒಡ್ಡಿದ್ದಾನೆ ಎಂದು ಹೇಳಲಾಗಿದೆ. ಈ ನಡುವೆ, ಬಾಲಕಿ ಅನಾರೋಗ್ಯದಿಂದ ಬಳಲಿದ್ದ ಹಿನ್ನೆಲೆಯಲ್ಲಿ ಆಕೆಯ ಪೋಷಕರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಈ ವೇಳೆ ಪ್ರಕರಣ ಬೆಳಕಿಗೆ […]
ದಾವಣಗೆರೆ: ಅಪ್ರಾಪ್ತೆಯೊಬ್ಬಳ ಮೇಲೆ ಆಕೆಯ ಸಂಬಂಧಿಕನೇ ಅತ್ಯಾಚಾರ ಎಸಗಿರುವ ಆರೋಪ ಜಿಲ್ಲೆಯ ಜಗಳೂರು ಠಾಣಾ ವ್ಯಾಪ್ತಿಯಲ್ಲಿ ಕೇಳಿಬಂದಿದೆ.
ಹುಲ್ಲು ತರಲು ಅಪ್ರಾಪ್ತೆಯನ್ನು ಅಡವಿಗೆ ಕರೆದುಕೊಂಡು ಹೋದ ಆಕೆಯ ಸಂಬಂಧಿಕ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ಈ ವಿಷಯ ಮನೆಯಲ್ಲಿ ಹೇಳದಂತೆ ಆರೋಪಿ ಅಪ್ರಾಪ್ತೆಗೆ ಬೆದರಿಕೆ ಸಹ ಒಡ್ಡಿದ್ದಾನೆ ಎಂದು ಹೇಳಲಾಗಿದೆ.
ಈ ನಡುವೆ, ಬಾಲಕಿ ಅನಾರೋಗ್ಯದಿಂದ ಬಳಲಿದ್ದ ಹಿನ್ನೆಲೆಯಲ್ಲಿ ಆಕೆಯ ಪೋಷಕರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಜಗಳೂರು ಪೊಲೀಸರು ದೂರು ದಾಖಲಿಸಿಕೊಂಡು 23 ವರ್ಷದ ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ.