ಚರಂಡಿ ವಿಚಾರಕ್ಕೆ ಎರಡು ಕುಂಟುಂಬಗಳ ನಡುವೆ ಕಲ್ಲು, ದೊಣ್ಣೆ ಮತ್ತು ಚಾಕುವಿನಿಂದ ಬಿಗ್ ಫೈಟ್.. ಮಹಿಳೆ ಕೈ‌ ಬೆರಳು ಕಟ್

|

Updated on: Nov 26, 2020 | 10:21 AM

ಗುಂಡುಮಗೆರೆ ಹೊಸಹಳ್ಳಿ ಗ್ರಾಮದಲ್ಲಿ ಚರಂಡಿ ವಿಚಾರಕ್ಕೆ ಎರಡು ಕುಟುಂಬಗಳು ಹೊಡೆದಾಡಿಕೊಂಡಿದ್ದು ಘಟನೆಯಲ್ಲಿ ಮಹಿಳೆಯ ಕೈ‌ ಬೆರಳು ಕಟ್ ಆಗಿದೆ.

ಚರಂಡಿ ವಿಚಾರಕ್ಕೆ ಎರಡು ಕುಂಟುಂಬಗಳ ನಡುವೆ ಕಲ್ಲು, ದೊಣ್ಣೆ ಮತ್ತು ಚಾಕುವಿನಿಂದ ಬಿಗ್ ಫೈಟ್.. ಮಹಿಳೆ ಕೈ‌ ಬೆರಳು ಕಟ್
ಕುಂಟುಂಬಗಳ ನಡುವೆ ಮಾರಾಮಾರಿ
Follow us on

ದೊಡ್ಡಬಳ್ಳಾಪುರ: ಚರಂಡಿ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಗುಂಡುಮಗೆರೆ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೋಪದ ಕೈಗೆ ಬುದ್ದಿ ಕೊಡಬಾರದು ಎಂಬ ಮಾತಿದೆ. ಆದ್ರೆ ಇಲ್ಲಿ ಆಗಿದ್ದೂ ಅದೇ. ಕೇವಲ ಮಾತಿನಿಂದ ಬಗೆ ಹರಿಯುತ್ತಿದ್ದ ಸಮಸ್ಯೆಯನ್ನು ಬೀದಿ ರಂಪಾಟವನ್ನಾಗಿ ಮಾಡಿಕೊಂಡಿದ್ದಾರೆ. ಎರಡೂ ಕುಟುಂಬಗಳು ಪರಸ್ಪರ ಕಲ್ಲು, ದೊಣ್ಣೆ ಮತ್ತು ಚಾಕುವಿನಿಂದ ಹೊಡೆದಾಡಿಕೊಂಡಿವೆ.

ಚರಂಡಿ ವಿಚಾರಕ್ಕೆ ಮೊದಲಿಗೆ ಸಿದ್ದಮ್ಮ ಮತ್ತು ಗಂಗಾದರ್ ಎಂಬುವರ ನಡುವೆ ಗಲಾಟೆ ಶುರುವಾಗಿ ಅದು ಭೀಕರ ಘಟನೆಗೆ ಕಾರಣವಾಗಿದೆ. ಕುಟುಂಬಗಳು ರಕ್ತ ಬರುವಂತೆ ಹೊಡೆದಾಡಿಕೊಂಡಿದ್ದು ಗಲಾಟೆಯಲ್ಲಿ ಸಿದ್ದಮ್ಮ ಎಂಬುವವರ ಕೈ‌ ಬೆರಳು ಕಟ್ ಆಗಿ ಆಸ್ವತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ಕುಟುಂಬಗಳ ಹೊಡೆದಾಟದ ದೃಶ್ಯ ಮೊಬೈಲ್​ನಲ್ಲಿ ಸೆರೆ ಹಿಡಿಯಲಾಗಿದೆ. ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‌ಘಟನೆ ನಡೆದಿದೆ.

Published On - 8:51 am, Thu, 26 November 20