ಹೋಂ ಕ್ವಾರಂಟೈನಿಗಳ ವಿರುದ್ಧ ಎಫ್‌ಐಆರ್, ಎಸ್ಪಿ ವೇದಮೂರ್ತಿ ಖಡಕ್ ವಾರ್ನಿಂಗ್

|

Updated on: Jun 21, 2020 | 7:04 AM

ರಾಯಚೂರು: ಹೋಂ ಕ್ವಾರಂಟೈನ್ ಉಲ್ಲಂಘಿಸಿ ಹೊರಗಡೆ ಓಡಾಡುತ್ತಿದ್ದ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ 17 ಜನರ ವಿರುದ್ಧ FIR ದಾಖಲಾಗಿದೆ. ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದವರನ್ನು 7 ದಿನಗಳು ಕ್ವಾರಂಟೈನ್ ಮಾಡಲಾಗುತ್ತೆ. ನಂತರ ಅವರನ್ನು ಹೋಂ ಕ್ವಾರಂಟೈನ್​ಗೆ ಶಿಫ್ಟ್ ಮಾಡ್ತಾರೆ. ಕೈಗೆ ಸೀಲ್ ಹಾಕಿ ಮನ್ನೆಯಲ್ಲೇ ಇರುವಂತೆ ಸೂಚಿಸಲಾಗಿರುತ್ತೆ. 7ದಿನಗಳು ಅವರು ಯಾರನ್ನೂ ಭೇಟಿ ಮಾಡದೆ, ಯಾರ ಸಂಪರ್ಕಕ್ಕೂ ಬರಬಾರದು. ಆದ್ರೆ ರಾಯಚೂರಿನಲ್ಲಿ ಸೀಲ್ ಕೈಯಲ್ಲಿದ್ದರು ಆದೇಶವನ್ನು ಉಲ್ಲಂಘಿಸಿ ಮನೆಯಿಂದ ಆಚೆ ಬಂದು ಸುತ್ತಾಡಿದ್ದಾರೆ. ಹೀಗಾಗಿ 17 ಹೋಂ ಕ್ವಾರಂಟೈನಿಗಳ […]

ಹೋಂ ಕ್ವಾರಂಟೈನಿಗಳ ವಿರುದ್ಧ ಎಫ್‌ಐಆರ್, ಎಸ್ಪಿ ವೇದಮೂರ್ತಿ ಖಡಕ್ ವಾರ್ನಿಂಗ್
Follow us on

ರಾಯಚೂರು: ಹೋಂ ಕ್ವಾರಂಟೈನ್ ಉಲ್ಲಂಘಿಸಿ ಹೊರಗಡೆ ಓಡಾಡುತ್ತಿದ್ದ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ 17 ಜನರ ವಿರುದ್ಧ FIR ದಾಖಲಾಗಿದೆ. ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದವರನ್ನು 7 ದಿನಗಳು ಕ್ವಾರಂಟೈನ್ ಮಾಡಲಾಗುತ್ತೆ. ನಂತರ ಅವರನ್ನು ಹೋಂ ಕ್ವಾರಂಟೈನ್​ಗೆ ಶಿಫ್ಟ್ ಮಾಡ್ತಾರೆ.

ಕೈಗೆ ಸೀಲ್ ಹಾಕಿ ಮನ್ನೆಯಲ್ಲೇ ಇರುವಂತೆ ಸೂಚಿಸಲಾಗಿರುತ್ತೆ. 7ದಿನಗಳು ಅವರು ಯಾರನ್ನೂ ಭೇಟಿ ಮಾಡದೆ, ಯಾರ ಸಂಪರ್ಕಕ್ಕೂ ಬರಬಾರದು. ಆದ್ರೆ ರಾಯಚೂರಿನಲ್ಲಿ ಸೀಲ್ ಕೈಯಲ್ಲಿದ್ದರು ಆದೇಶವನ್ನು ಉಲ್ಲಂಘಿಸಿ ಮನೆಯಿಂದ ಆಚೆ ಬಂದು ಸುತ್ತಾಡಿದ್ದಾರೆ. ಹೀಗಾಗಿ 17 ಹೋಂ ಕ್ವಾರಂಟೈನಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮತ್ತೆ ಮನೆಯಿಂದ ಹೊರ ಬರದಂತೆ ಪೊಲೀಸ್ ಇಲಾಖೆ ಖಡಕ್ ವಾರ್ನಿಂಗ್ ಕೊಟ್ಟಿದೆ. ಹೋಂ ಕ್ವಾರಂಟೈನ್ ಆದವರು ಹೊರಗಡೆ ಕಂಡು ಬಂದಲ್ಲಿ ಮುಲಾಜಿಲ್ಲದೆ ಅವರ ವಿರುದ್ಧ ಕೇಸ್ ಹಾಕುವುದಾಗಿ ಎಸ್ಪಿ ವೇದಮೂರ್ತಿ ಎಚ್ಚರಿಕೆ ನೀಡಿದ್ದಾರೆ.