ಕ್ವಾರಂಟೈನ್​ಗೆ ಒಪ್ಪದ ಯುವತಿಯಿಂದ ಹಲ್ಲೆ ಯತ್ನ, ಎಫ್‌ಐಆರ್ ದಾಖಲು

|

Updated on: May 29, 2020 | 3:09 PM

ಬೆಂಗಳೂರು: ಕ್ವಾರಂಟೈನ್ ಆಗಲು ಒಪ್ಪದ ಯುವತಿಯಿಂದ ಹೋಮ್‌ ಗಾರ್ಡ್ ಮೇಲೆ ಹಲ್ಲೆಗೆ ಯತ್ನ ನಡೆಸಿರುವ ಘಟನೆ ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಮೊನ್ನೆ ದೆಹಲಿಯಿಂದ ವಿಶೇಷ ರೈಲಿನಲ್ಲಿ ಬಂದಿದ್ದ ಕಾರಣ ಯುವತಿಯನ್ನು ಕ್ವಾರಂಟೈನ್ ಮಾಡಬೇಕಿತ್ತು. ಹೀಗಾಗಿ ಪೊಲೀಸರು ಆಕೆಯನ್ನು ಕ್ವಾರಂಟೈನ್ ಕೇಂದ್ರಕ್ಕೆ ಹೋಗಲು ಸೂಚಿಸಿದ್ದಾರೆ. ಇದಕ್ಕೆ ಒಪ್ಪದ ಯುವತಿ ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾಳೆ. ಸ್ಥಳದಲ್ಲೇ ಇದ್ದ ಇಬ್ಬರು ಹೋಮ್‌ ಗಾರ್ಡ್​ಗಳ ಮೇಲೆ ಹಲ್ಲೆಗೆ ಯತ್ನಿಸಿದ್ದಾಳೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಯುವತಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸದ್ಯ […]

ಕ್ವಾರಂಟೈನ್​ಗೆ ಒಪ್ಪದ ಯುವತಿಯಿಂದ ಹಲ್ಲೆ ಯತ್ನ, ಎಫ್‌ಐಆರ್ ದಾಖಲು
Follow us on

ಬೆಂಗಳೂರು: ಕ್ವಾರಂಟೈನ್ ಆಗಲು ಒಪ್ಪದ ಯುವತಿಯಿಂದ ಹೋಮ್‌ ಗಾರ್ಡ್ ಮೇಲೆ ಹಲ್ಲೆಗೆ ಯತ್ನ ನಡೆಸಿರುವ ಘಟನೆ ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಮೊನ್ನೆ ದೆಹಲಿಯಿಂದ ವಿಶೇಷ ರೈಲಿನಲ್ಲಿ ಬಂದಿದ್ದ ಕಾರಣ ಯುವತಿಯನ್ನು ಕ್ವಾರಂಟೈನ್ ಮಾಡಬೇಕಿತ್ತು.

ಹೀಗಾಗಿ ಪೊಲೀಸರು ಆಕೆಯನ್ನು ಕ್ವಾರಂಟೈನ್ ಕೇಂದ್ರಕ್ಕೆ ಹೋಗಲು ಸೂಚಿಸಿದ್ದಾರೆ. ಇದಕ್ಕೆ ಒಪ್ಪದ ಯುವತಿ ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾಳೆ. ಸ್ಥಳದಲ್ಲೇ ಇದ್ದ ಇಬ್ಬರು ಹೋಮ್‌ ಗಾರ್ಡ್​ಗಳ ಮೇಲೆ ಹಲ್ಲೆಗೆ ಯತ್ನಿಸಿದ್ದಾಳೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಯುವತಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸದ್ಯ ಯುವತಿಯನ್ನ ಹೋಟೆಲ್‌ನಲ್ಲಿ ಕ್ವಾರಂಟೈನ್‌ ಮಾಡಲಾಗಿದೆ.

Published On - 10:31 am, Fri, 29 May 20