ಕೊರೊನಾ ಸಂಕಷ್ಟವಿದ್ದರೂ ದೊಡ್ಡ ಬಂಗಲೆಯನ್ನೇ ಖರೀದಿಸಿದ ನಟಿ ಕಂಗನಾ!

ನಿನ್ನೆ ಆ ನಟ ಕಾರು ಮಾರಿದ್ದರೆ ಮತ್ತೊಬ್ಬ ನಟಿ ಭಾರೀ ಬಂಗಲೆಯನ್ನೇ ಖರೀದಿಸಿಳು! ಇದಕ್ಕೆ ಎಲ್ಲ ಅವರವರ ನಸೀಬು ಅನ್ನಬಹುದು. ಆದ್ರೆ ಕೊರೊನಾ ಕಾಲದಲ್ಲಿ ಯಾವ ನಸೀಬು ಅಲ್ವಾ? ಎಲ್ಲಾರಾ ಹಣೆಬರಹವೂ ಒಂದೇ ಅಂತಾಗಿದೆ. ಆದರೂ ತನ್ನ ಕನಸಿನ ಬಂಗಲೆಯನ್ನು ಖರೀದಿಸಿರುವ ಈ ನಟಿಯ ಸಾಹಸದ ಬಗ್ಗೆ ನೀವು ಓದಲೇಬೇಕು. ಕೊರೊನಾ ಸೋಂಕು ಭಾರತಕ್ಕೆ ಕಾಲಿಟ್ಟಿದಾಗಿನಿಂದ ಜನರ ಕೈಯಲ್ಲಿ ಹಣವಿಲ್ಲದಂತಾಗಿದೆ. ವ್ಯವಹಾರ, ವ್ಯಾಪಾರ ಎಲ್ಲವೂ ಕುಸಿದಿದೆ. ಆದರೆ ಬಾಲಿವುಡ್ ನಟಿ ಕಂಗನಾ ರಣಾವತ್ ಈ ಸಂಕಷ್ಟದ ಸಮಯದಲ್ಲೂ […]

ಕೊರೊನಾ ಸಂಕಷ್ಟವಿದ್ದರೂ ದೊಡ್ಡ ಬಂಗಲೆಯನ್ನೇ ಖರೀದಿಸಿದ ನಟಿ ಕಂಗನಾ!
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:May 30, 2020 | 1:35 PM

ನಿನ್ನೆ ಆ ನಟ ಕಾರು ಮಾರಿದ್ದರೆ ಮತ್ತೊಬ್ಬ ನಟಿ ಭಾರೀ ಬಂಗಲೆಯನ್ನೇ ಖರೀದಿಸಿಳು! ಇದಕ್ಕೆ ಎಲ್ಲ ಅವರವರ ನಸೀಬು ಅನ್ನಬಹುದು. ಆದ್ರೆ ಕೊರೊನಾ ಕಾಲದಲ್ಲಿ ಯಾವ ನಸೀಬು ಅಲ್ವಾ? ಎಲ್ಲಾರಾ ಹಣೆಬರಹವೂ ಒಂದೇ ಅಂತಾಗಿದೆ. ಆದರೂ ತನ್ನ ಕನಸಿನ ಬಂಗಲೆಯನ್ನು ಖರೀದಿಸಿರುವ ಈ ನಟಿಯ ಸಾಹಸದ ಬಗ್ಗೆ ನೀವು ಓದಲೇಬೇಕು.

ಕೊರೊನಾ ಸೋಂಕು ಭಾರತಕ್ಕೆ ಕಾಲಿಟ್ಟಿದಾಗಿನಿಂದ ಜನರ ಕೈಯಲ್ಲಿ ಹಣವಿಲ್ಲದಂತಾಗಿದೆ. ವ್ಯವಹಾರ, ವ್ಯಾಪಾರ ಎಲ್ಲವೂ ಕುಸಿದಿದೆ. ಆದರೆ ಬಾಲಿವುಡ್ ನಟಿ ಕಂಗನಾ ರಣಾವತ್ ಈ ಸಂಕಷ್ಟದ ಸಮಯದಲ್ಲೂ 48 ಕೋಟಿ ವೆಚ್ಚದಲ್ಲಿ ಪರಿಸರ ಸ್ನೇಹಿ ಪ್ಲಾಸ್ಟಿಕ್ ಮುಕ್ತ ಬಂಗಲೆ ಖರೀದಿಸಿದ್ದಾರೆ. ಈ ಬಗ್ಗೆ ಕಂಗನಾ ಕುಟುಂಬ ಯಾವ ರೀತಿ ಪ್ರತಿಕ್ರಿಯಿಸಿದ್ದಾರೆ ಎಂಬುದನ್ನೂ ನೋಡೋಣ.

ಇದನ್ನೂ ಓದಿ: ಕಾರು ಸಾಲ ತೀರಿಸೋಕ್ಕೆ ಆಯ್ತಿಲ್ಲ ಅಂತಾ ಕಾರನ್ನು ಮಾರಿಬಿಟ್ಟ ನಟ!

1500 ಸಂಭಾವನೆಯಿಂದ 48 ಕೋಟಿ ಬಂಗಲೆಯ ಹಾದಿ: ಬಾಲಿವುಡ್‌ನಲ್ಲಿ ಪ್ರಯಾಣ ಆರಂಭಿಸಿದಾಗ ಕಂಗನಾ ರಣಾವತ್ 1,500 ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಆದರೆ ಇಂದು ಅವರು ತನ್ನದೇ ಆದ ಸಾಮ್ರಾಜ್ಯವನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬೈನಲ್ಲಿ ಹಣವಿಲ್ಲದೆ ಜೀವನ ಸಾಗಿಸೋದೆ ಕಷ್ಟ. ಅಂತಹ ದೊಡ್ಡ ಜಾಗದಲ್ಲೇ ಇತ್ತೀಚೆಗೆ ಮುಂಬೈನ ಬಾಂದ್ರಾ ಬಳಿಯ ಪಾಲಿ ಹಿಲ್‌ನಲ್ಲಿ 48 ಕೋಟಿ ವೆಚ್ಚದ ಸುಂದರವಾದ ಕಚೇರಿಯನ್ನು ಖರೀದಿಸಿದ್ದಾರೆ. ಅದು ಮೂರು ಅಂತಸ್ತಿನ ವಿಶಾಲವಾದ ಬಂಗಲೆ!

ತಮ್ಮ ಅಭಿರುಚಿ, ಸೃಜನಶೀಲ ಪ್ರತಿಭೆಗೆ ಅನುಗುಣವಾಗಿ ಈ ಬಂಗಲೆಯನ್ನು ತಮ್ಮ ಕಚೇರಿಗಾಗಿ ನವೀಕರಿಸಿದ್ದಾರೆ. ಈ ಬಂಗಲೆಯಲ್ಲಿ ತಾವು ಹೊಸದಾಗಿ ಪ್ರಾರಂಭಿಸಿದ ಪ್ರೊಡಕ್ಷನ್ ಹೌಸ್ ಮತ್ತು ಮಣಿಕರ್ಣಿಕಾ ಫಿಲ್ಮ್ ಸ್ಟುಡಿಯೋನ ಕೆಲಸಕ್ಕೆ ಬಳಸಿಕೊಳ್ಳಲಿದ್ದಾರೆ. ಅಲ್ಲದೆ ಲಾಕ್‌ಡೌನ್​ಗೂ ಮುನ್ನ ಅವರು ಇಲ್ಲಿ ತಮ್ಮ ಜೀವನಶೈಲಿಗೆ ತಕ್ಕಂತಹ ಮತ್ತು ಅಲಂಕಾರಿಕ ನಿಯತಕಾಲಿಕೆಗಾಗಿ ಫೋಟೋ ಶೂಟ್ ಮಾಡಿಸಿದ್ದರು.

https://www.instagram.com/p/CAo3co2AorA/?utm_source=ig_web_copy_link

ಮನಾಲಿಯಲ್ಲಿದೆ ಮನೆ, ಇದು ಸ್ವಂತ ಸ್ಟುಡಿಯೋ! ಪ್ರಸ್ತುತ ನಟಿ ಕಂಗನಾ ತನ್ನ ಕುಟುಂಬದೊಂದಿಗೆ ಮನಾಲಿಯಲ್ಲಿರುವ ಮನೆಯಲ್ಲಿ ಕಳೆಯುತ್ತಿದ್ದಾರೆ. ನನ್ನ ಸ್ವಂತ ಸ್ಟುಡಿಯೋವನ್ನು ನಿರ್ಮಿಸುವ ಆಲೋಚನೆ ಇತ್ತು. ಆದರೆ ಈ ಮಧ್ಯೆ, ನನ್ನ ಕೆಲವು ಚಲನಚಿತ್ರಗಳು ಅಂದ್ರೆ ರಂಗೂನ್ ಮತ್ತು ಸಿಮ್ರಾನ್ ಚಿತ್ರಗಳು ಕೈಹಿಡಿಯಲಿಲ್ಲ. ಈಗ ಖರೀದಿಸಿರುವ ಆಸ್ತಿ ಮುಂಬೈನ ಹೃದಯ ಭಾಗದಲ್ಲಿದೆ. ಇದು ಕೇವಲ ಬಂಗಲೆ, ಫ್ಲಾಟ್ ಅಲ್ಲ. ಮಣಿಕರ್ಣಿಕಾ ಚಿತ್ರದ ನಂತರ ಎಲ್ಲವೂ ಬದಲಾಯಿತು. ನಾನು ಬಯಸಿದ ರೀತಿಯಲ್ಲಿ ಬಂಗಲೆಯನ್ನು ನವೀಕರಿಸಿಕೊಂಡಿದ್ದೇನೆ ಎಂದು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ:

ಇಷ್ಟು ದುಬಾರಿ ಮೌಲ್ಯದ ಬಂಗಲೆ ಖರೀದಿಗೆ ಮನೆಯಲ್ಲಿ ಒಪ್ಪಲಿಲ್ಲ. ಪೋಷಕರು ಮತ್ತು ಸಹೋದರಿ ನಿನ್ನ ಪ್ರೊಡಕ್ಷನ್ ಹೌಸ್ ಕೆಲಸವನ್ನು ಬೇರೆಯಲ್ಲಿಯಾದರೂ ಮಾಡಬಹುದು. ಅಪಾರ್ಟ್​ಮೆಂಟ್ ಬಾಡಿಗೆ ತಗೂಬಹುದು ಎಂದಿದ್ದರು. ಆದರೆ ನನಗೆ ಜೀವವಿಲ್ಲದ ಗಾಜಿನ ಕೋಣೆಗಳಲ್ಲಿ ಕೆಲಸ ಮಾಡಲು ಇಷ್ಟವಿಲ್ಲ ಎಂದಿದ್ದೆ. ನನಗೆ ಸುತ್ತಮುತ್ತ ಗಿಡಗಳು ಸ್ವಚ್ಛ ಪರಿಸರ ಇಷ್ಟ. ನೀನು ಇಷ್ಟೊಂದು ಆಸೆಗಳನ್ನು ಹೊತ್ತು ನಿರ್ದೇಶನ ರಂಗದಲ್ಲಿ ಹೋರಾಟ ಮಾಡೋಕೆ ಹೋಗುತ್ತಿದ್ದೀಯಾ ಅಂತ ನನ್ನ ತಂಗಿ ಕಾಲೆಳೆದಿದ್ದರು.

Published On - 12:13 pm, Fri, 29 May 20

ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ