ಬೆಂಗಳೂರು: ಪೀಠೋಪಕರಣವಿದ್ದ ಗೋದಾಮಿನಲ್ಲಿ ಬೆಂಕಿ ಅವಘಡ

|

Updated on: Feb 14, 2020 | 9:08 AM

ಬೆಂಗಳೂರು: ಶಾರ್ಟ್ ಸರ್ಕ್ಯೂಟ್ ನಿಂದ ಪೀಠೋಪಕರಣವಿದ್ದ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ನಗರದ ಹೆಗಡೆನಗರದಲ್ಲಿ ನಡೆದಿದೆ. ತಡರಾತ್ರಿ 2.30ರ ಸುಮಾರಿಗೆ ದಾಮೋದರ್‌ ಎಂಬುವವರಿಗೆ ಸೇರಿದ ಫರ್ನೀಚರ್ ತುಂಬಿದ್ದ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಗೋದಾಮು ಸಂಪೂರ್ಣ ಸುಟ್ಟು ಕರಕಲಾಗಿದೆ. ಗೋದಾಮಿನ ಹೊರಗಿರುವ ಕಸದ ರಾಶಿಗೆ ಹೊತ್ತಿಕೊಂಡಿರುವ ಬೆಂಕಿ ಬಳಿಕ ಒಳಗಡೆ ವ್ಯಾಪಿಸಿರುವ ಶಂಕೆ ವ್ಯಕ್ತವಾಗಿದೆ. ಘಟನೆ ವೇಳೆ ಫರ್ನೀಚರ್ ಗೋದಾಮಿನಲ್ಲಿ 12 ಮಂದಿ ಮಲಗಿದ್ದರು. ಒಳಗೆ ಮಲಗಿದ್ದ ಫರಾನ್ ಎಂಬ ಕಾರ್ಮಿಕನಿಗೆ ಎಚ್ಚರವಾಗಿದೆ. ತಕ್ಷಣವೇ ಇನ್ನುಳಿದ 11 ಮಂದಿ […]

ಬೆಂಗಳೂರು: ಪೀಠೋಪಕರಣವಿದ್ದ ಗೋದಾಮಿನಲ್ಲಿ ಬೆಂಕಿ ಅವಘಡ
Follow us on

ಬೆಂಗಳೂರು: ಶಾರ್ಟ್ ಸರ್ಕ್ಯೂಟ್ ನಿಂದ ಪೀಠೋಪಕರಣವಿದ್ದ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ನಗರದ ಹೆಗಡೆನಗರದಲ್ಲಿ ನಡೆದಿದೆ. ತಡರಾತ್ರಿ 2.30ರ ಸುಮಾರಿಗೆ ದಾಮೋದರ್‌ ಎಂಬುವವರಿಗೆ ಸೇರಿದ ಫರ್ನೀಚರ್ ತುಂಬಿದ್ದ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಗೋದಾಮು ಸಂಪೂರ್ಣ ಸುಟ್ಟು ಕರಕಲಾಗಿದೆ.

ಗೋದಾಮಿನ ಹೊರಗಿರುವ ಕಸದ ರಾಶಿಗೆ ಹೊತ್ತಿಕೊಂಡಿರುವ ಬೆಂಕಿ ಬಳಿಕ ಒಳಗಡೆ ವ್ಯಾಪಿಸಿರುವ ಶಂಕೆ ವ್ಯಕ್ತವಾಗಿದೆ. ಘಟನೆ ವೇಳೆ ಫರ್ನೀಚರ್ ಗೋದಾಮಿನಲ್ಲಿ 12 ಮಂದಿ ಮಲಗಿದ್ದರು. ಒಳಗೆ ಮಲಗಿದ್ದ ಫರಾನ್ ಎಂಬ ಕಾರ್ಮಿಕನಿಗೆ ಎಚ್ಚರವಾಗಿದೆ. ತಕ್ಷಣವೇ ಇನ್ನುಳಿದ 11 ಮಂದಿ ಕಾರ್ಮಿಕರನ್ನ ಎಬ್ಬಿಸಿ ಹೊರ ಕರೆದುಕೊಂಡು ಹೋಗಿದ್ದಾನೆ. ಸ್ವಲ್ಪದರಲ್ಲೇ ಭಾರಿ ದುರಂತ ತಪ್ಪಿದೆ. ಫರಾನ್​ನ ಸಮಯ ಪ್ರಜ್ನೆಯಿಂದ ಕಾರ್ಮಿಕರ ಪ್ರಾಣ ಉಳಿದಿದೆ. ಸದ್ಯ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.