ನೀವು ನನ್ನ ವಾರ್ಡ್‌ನಲ್ಲಿ ಇದ್ದಿದ್ರೆ ಚಪ್ಪಲಿ ಹಾರ ಹಾಕುತ್ತಿದ್ರು -ಮೇಯರ್

ಬೆಂಗಳೂರು: ನೀವು ನನ್ನ ವಾರ್ಡ್‌ನಲ್ಲಿ ಇದ್ದಿದ್ರೆ ಚಪ್ಪಲಿ ಹಾರ ಹಾಕುತ್ತಿದ್ರು ಎಂದು ಮೇಯರ್ ಗೌತಮ್‌ ಕುಮಾರ್ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ. ಇಂದು ಮೇಯರ್ ಬಿಬಿಎಂಪಿ ವಾರ್ಡ್ ಸಂಖ್ಯೆ 109ರಲ್ಲಿ ಅನಿರೀಕ್ಷಿತ ತಪಾಸಣೆ ಹಮ್ಮಿಕೊಂಡಿದ್ದರು. ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ತಪಾಸಣೆ ವೇಳೆ ರಸ್ತೆ ಬದಿ ಕಸ, ಗಲೀಜು ಇದ್ದ ಹಿನ್ನೆಲೆ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಮೇಯರ್ ಆಕ್ರೋಶಗೊಂಡಿದ್ದಾರೆ. ಅಲ್ಲದೆ ದೇವ್ರಾನೆಗೂ ನೀವೇನಾದರೂ ನನ್ನ ವಾರ್ಡ್‌ನಲ್ಲಿ ಇದಿದ್ದರೆ ಜನ ನಿಮಗೆ ಚಪ್ಪಲಿ ಹಾರ ಹಾಕಿಬಿಡ್ತಿದ್ರು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. […]

ನೀವು ನನ್ನ ವಾರ್ಡ್‌ನಲ್ಲಿ ಇದ್ದಿದ್ರೆ ಚಪ್ಪಲಿ ಹಾರ ಹಾಕುತ್ತಿದ್ರು -ಮೇಯರ್
sadhu srinath

|

Feb 14, 2020 | 1:37 PM

ಬೆಂಗಳೂರು: ನೀವು ನನ್ನ ವಾರ್ಡ್‌ನಲ್ಲಿ ಇದ್ದಿದ್ರೆ ಚಪ್ಪಲಿ ಹಾರ ಹಾಕುತ್ತಿದ್ರು ಎಂದು ಮೇಯರ್ ಗೌತಮ್‌ ಕುಮಾರ್ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ. ಇಂದು ಮೇಯರ್ ಬಿಬಿಎಂಪಿ ವಾರ್ಡ್ ಸಂಖ್ಯೆ 109ರಲ್ಲಿ ಅನಿರೀಕ್ಷಿತ ತಪಾಸಣೆ ಹಮ್ಮಿಕೊಂಡಿದ್ದರು.

ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ತಪಾಸಣೆ ವೇಳೆ ರಸ್ತೆ ಬದಿ ಕಸ, ಗಲೀಜು ಇದ್ದ ಹಿನ್ನೆಲೆ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಮೇಯರ್ ಆಕ್ರೋಶಗೊಂಡಿದ್ದಾರೆ. ಅಲ್ಲದೆ ದೇವ್ರಾನೆಗೂ ನೀವೇನಾದರೂ ನನ್ನ ವಾರ್ಡ್‌ನಲ್ಲಿ ಇದಿದ್ದರೆ ಜನ ನಿಮಗೆ ಚಪ್ಪಲಿ ಹಾರ ಹಾಕಿಬಿಡ್ತಿದ್ರು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಶೇಷ ಆಯುಕ್ತನ ಮೇಲೂ ಗರಂ: ಇದೇ ವೇಳೆ ಮೇಯರ್ ಪಶ್ಚಿಮ ವಿಭಾಗದ ವಿಶೇಷ ಆಯುಕ್ತ ಬಸವರಾಜುನನ್ನು ಕೇಳುತ್ತಾರೆ ಆದ್ರೆ ಅವರು ತಪಾಸಣೆಗೆ ಗೈರಾಗಿರುತ್ತಾರೆ. ಸ್ಪೇಷಲ್ ಕಮೀಷನರ್ ಯಾಕೆ ಬಂದಿಲ್ಲ ಎಂದು ಮೇಯರ್ ಪ್ರಶ್ನೆಸಿದಾಗ ಸ್ಥಳದಲ್ಲೇ ಇದ್ದ ಜಂಟಿ ಆಯುಕ್ತರು ಸ್ಪೇಷಲ್ ಕಮಿಷನರ್​ಗೆ 10 ಗಂಟೆಗೆ ಮೀಟಿಂಗ್ ಹೋಗಿದ್ದಾರೆ ಎಂದು ತಿಳಿಸಿದ್ದಾರೆ ಇದಕ್ಕೆ ಮೇಯರ್ ಗರಂ ಆಗಿದ್ದು, ನನ್ನಗೂ 10 ಗಂಟೆಗೆ ಮೀಟಿಂಗ್ ಇದೆ. ಬೆಳಗ್ಗೆ ಏಳು ಗಂಟೆಗೆ ಬರೋಕ್ಕೆ ಹೇಳಿದ್ವಿ, ಮೀಟಿಂಗ್ ಇದೆ ಅಂತಾ ವಾರ್ಡ್ ಸಮಸ್ಯೆ ಕೇಳ್ಬಾರ್ದಾ‌ ಎಂದು ರೇಗಾಡಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada