ಚಿಕ್ಕನ್ ತಿಂದು ಮಲಗಿದ್ದ ಮಕ್ಕಳಿಬ್ಬರು ಮೃತ

ಚಿಕ್ಕನ್ ತಿಂದು ಮಲಗಿದ್ದ ಮಕ್ಕಳಿಬ್ಬರು ಮೃತ

ಚಿಕ್ಕಮಗಳೂರು: ಊಟ ಮಾಡಿ ಮಲಗಿದ್ದ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಶೀರಗೂರು ಗ್ರಾಮದಲ್ಲಿ ನಡೆದಿದೆ. ಕಳೆದ ರಾತ್ರಿ ಮಾಂಸದೂಟ ಮಾಡಿ ಮಲಗಿದ್ದ ಐದು ಮಕ್ಕಳ ಪೈಕಿ ಕೀರ್ತನಾ(11) ಮತ್ತು ಲಕ್ಷ್ಮಿ(6) ಮೃತಪಟ್ಟಿದ್ದಾರೆ.

ಮೃತಪಟ್ಟ ಇಬ್ಬರು ಮಕ್ಕಳು ಬಾಯಲ್ಲಿ ನೊರೆ ಹರಿದಿತ್ತು. ಉಳಿದ ಮೂವರು ಮಕ್ಕಳು ಮತ್ತು ಪೋಷಕರು ಅಸ್ವಸ್ಥಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ನಿಖರ ಮಾಹಿತಿ ಇನ್ನೂ ತಿಳಿದು ಬಂದಿಲ್ಲ.