ಬೆಂಗಳೂರಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಟೆಕ್ಕಿ ಪತ್ನಿ ಶವ ಪತ್ತೆ!
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನವ ವಿವಾಹಿತೆಯ ಮೃತದೇಹ ಪತ್ತೆಯಾಗಿದೆ. ಬ್ಯಾಡರಹಳ್ಳಿಯ ಭಾರತ್ ನಗರದ ಮನೆಯ ರೂಮ್ನಲ್ಲಿ ಟೆಕ್ಕಿ ಪತ್ನಿ ವಿನುತಾ (25) ಶವ ಪತ್ತೆಯಾಗಿದೆ. 7 ತಿಂಗಳ ಹಿಂದಷ್ಟೇ ವಿವಾಹ: 7 ತಿಂಗಳ ಹಿಂದಷ್ಟೇ ನಾಗಮಂಗಲ ಮೂಲದ ವಿನುತಾರನ್ನು ಟೆಕ್ಕಿ ಕಿರಣ್ ಕುಮಾರ್ ವಿವಾಹವಾಗಿದ್ದ. ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿರುವ ಕಿರಣ್, ಮದುವೆಯಾದ ದಿನದಿಂದ ಪತ್ನಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಅಲ್ಲದೆ, ವಿನುತಾಗೆ ಪತಿ ಕಿರಣ್, ಅತ್ತೆ […]
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನವ ವಿವಾಹಿತೆಯ ಮೃತದೇಹ ಪತ್ತೆಯಾಗಿದೆ. ಬ್ಯಾಡರಹಳ್ಳಿಯ ಭಾರತ್ ನಗರದ ಮನೆಯ ರೂಮ್ನಲ್ಲಿ ಟೆಕ್ಕಿ ಪತ್ನಿ ವಿನುತಾ (25) ಶವ ಪತ್ತೆಯಾಗಿದೆ.
7 ತಿಂಗಳ ಹಿಂದಷ್ಟೇ ವಿವಾಹ: 7 ತಿಂಗಳ ಹಿಂದಷ್ಟೇ ನಾಗಮಂಗಲ ಮೂಲದ ವಿನುತಾರನ್ನು ಟೆಕ್ಕಿ ಕಿರಣ್ ಕುಮಾರ್ ವಿವಾಹವಾಗಿದ್ದ. ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿರುವ ಕಿರಣ್, ಮದುವೆಯಾದ ದಿನದಿಂದ ಪತ್ನಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ಅಲ್ಲದೆ, ವಿನುತಾಗೆ ಪತಿ ಕಿರಣ್, ಅತ್ತೆ ಮಂಜುಳಾ ಹಾಗೂ ಮಾವ ಶ್ರೀನಿವಾಸ್ ಸಹ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಮೂರು ಬಾರಿ ವನಿತಾ ಸಹಾಯವಾಣಿಯಲ್ಲಿ ಕೌನ್ಸೆಲಿಂಗ್ ಮಾಡಿದ್ರೂ, ಕಿರುಕುಳವನ್ನು ಟೆಕ್ಕಿ ನಿಲ್ಲಿಸಿರಲಿಲ್ಲ. ವರದಕ್ಷಿಣೆಗಾಗಿ ಪ್ರತಿದಿನ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದರು. ಈಗ ವಿನುತಾರನ್ನು ಹೊಡೆದು ಅವರೇ ನೇಣುಹಾಕಿದ್ದಾರೆಂದು ಮೃತ ವಿನುತಾ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ, ವರದಕ್ಷಿಣೆ ಕಿರುಕುಳ ಆರೋಪದಡಿ ಪ್ರಕರಣ ದಾಖಲಾಗಿದೆ.
https://www.facebook.com/Tv9Kannada/videos/2453997918248985/
Published On - 6:00 pm, Fri, 14 February 20