ಡ್ರಾಪ್ ನೆಪ: ಹಳ್ಳಿ ಬಾಲಕನ ಮರ್ಮಾಂಗ ಕತ್ತರಿಸಿ, ಬಿಸಾಡಿ ಹೋದ ದುಷ್ಕರ್ಮಿಗಳು!
ಮಂಡ್ಯ: ಡ್ರಾಪ್ ಕೊಡುವ ನೆಪದಲ್ಲಿ ಬಾಲಕನ ಮರ್ಮಾಂಗಕ್ಕೆ ಕತ್ತರಿ ಹಾಕಿರುವ ಘಟನೆ ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದ ಬಳಿ ನಡೆದಿದೆ. ಕಾಲೇಜಿಗೆ ತೆರಳಲು ಬಸ್ಗಾಗಿ ಕಾಯುತ್ತಿದ್ದ ಬಾಲಕನನ್ನು ಡ್ರಾಪ್ ಕೊಡುವುದಾಗಿ ಹೇಳಿ ಕಾರಿಗೆ ಹತ್ತಿಸಿಕೊಂಡು ದುಷ್ಕರ್ಮಿಗಳು ನೀಚ ಕೃತ್ಯ ಎಸಗಿದ್ದಾರೆ. ಸೀತಾಪುರ ಗ್ರಾಮದ ಬಳಿ ಕಾಲೇಜಿಗೆ ತೆರಳಲು ಬಸ್ಗಾಗಿ ಅಪ್ರಾಪ್ತ ಬಾಲಕ ಕಾಯುತ್ತಿದ್ದ. ಒಬ್ಬನೇ ಕಾಯುತ್ತಿದ್ದನ್ನು ಗಮನಿಸಿದ ದುಷ್ಕರ್ಮಿಗಳು ಕಾರಿಗೆ ಹತ್ತಿಸಿಕೊಂಡು ತೆರಳಿದ್ದಾರೆ. 3-4 ಕಿಲೋ ಮೀಟರ್ ಕರೆದೊಯ್ದು ಮರ್ಮಾಂಗ ಕತ್ತರಿಸಿ ರಸ್ತೆ ಬದಿಗೆ ಬಾಲಕನನ್ನು ಬಿಸಾಡಿ […]
ಮಂಡ್ಯ: ಡ್ರಾಪ್ ಕೊಡುವ ನೆಪದಲ್ಲಿ ಬಾಲಕನ ಮರ್ಮಾಂಗಕ್ಕೆ ಕತ್ತರಿ ಹಾಕಿರುವ ಘಟನೆ ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದ ಬಳಿ ನಡೆದಿದೆ. ಕಾಲೇಜಿಗೆ ತೆರಳಲು ಬಸ್ಗಾಗಿ ಕಾಯುತ್ತಿದ್ದ ಬಾಲಕನನ್ನು ಡ್ರಾಪ್ ಕೊಡುವುದಾಗಿ ಹೇಳಿ ಕಾರಿಗೆ ಹತ್ತಿಸಿಕೊಂಡು ದುಷ್ಕರ್ಮಿಗಳು ನೀಚ ಕೃತ್ಯ ಎಸಗಿದ್ದಾರೆ.
ಸೀತಾಪುರ ಗ್ರಾಮದ ಬಳಿ ಕಾಲೇಜಿಗೆ ತೆರಳಲು ಬಸ್ಗಾಗಿ ಅಪ್ರಾಪ್ತ ಬಾಲಕ ಕಾಯುತ್ತಿದ್ದ. ಒಬ್ಬನೇ ಕಾಯುತ್ತಿದ್ದನ್ನು ಗಮನಿಸಿದ ದುಷ್ಕರ್ಮಿಗಳು ಕಾರಿಗೆ ಹತ್ತಿಸಿಕೊಂಡು ತೆರಳಿದ್ದಾರೆ. 3-4 ಕಿಲೋ ಮೀಟರ್ ಕರೆದೊಯ್ದು ಮರ್ಮಾಂಗ ಕತ್ತರಿಸಿ ರಸ್ತೆ ಬದಿಗೆ ಬಾಲಕನನ್ನು ಬಿಸಾಡಿ ಪರಾರಿಯಾಗಿದ್ದಾರೆ.
ಖಾಸಗಿ ಆಸ್ಪತ್ರೆಯ ICUನಲ್ಲಿ ಬಾಲಕನಿಗೆ ಚಿಕಿತ್ಸೆ: ದುಷ್ಕರ್ಮಿಗಳ ಕೃತ್ಯದಿಂದ ನರಳಾಡುತ್ತಿದ್ದ ಬಾಲಕನ ನೆರವಿಗೆ ಬಂದ ಸ್ಥಳೀಯರು, ಘಟನೆ ಬಗ್ಗೆ ಷೋಷಕರಿಗೆ ಮಾಹಿತಿ ನೀಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೈಸೂರಿನ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯಕ್ಕೆ ಬಾಲಕನಿಗೆ ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಈ ಬಗ್ಗೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.
Published On - 10:05 am, Sat, 15 February 20