ಬೆಂಗಳೂರು: ರಾಜ ಭವನದ ಬಳಿ ಚಲಿಸುತ್ತಿದ್ದ ಕಾರಿನ ಇಂಜಿನ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕ ಮತ್ತು ರಿಸರ್ವ್ ಪೊಲೀಸ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದೆ.
ಬೆಂಕಿ ಕಾಣಿಸುತ್ತಿದ್ದಂತೆ ಚಾಲಕ ತನ್ನ ಕಾರನ್ನು ರಸ್ತೆ ಬದಿ ನಿಲ್ಲಿಸಿದ್ದಾನೆ. ಬದಿಗೆ ನಿಲ್ಲಿಸಿ, ತಕ್ಷಣ ಕಾರಿನಲ್ಲಿದ್ದವರನ್ನು ಇಳಿಯಲು ಸೂಚಿಸಿದ್ದಾನೆ. ಅದೇ ವೇಳೆಗೆ ಸಮೀಪದಲ್ಲೇ ಇದ್ದ ರಾಜ ಭವನದ ರಿಸರ್ವ್ ಪೊಲೀಸ್ ಸಿಬ್ಬಂದಿಯ ಕೂಡಲೇ ಬೆಂಕಿಯನ್ನು ನಂದಿಸಿದ್ದಾರೆ.
ರಾಜ ಭವನ ಎದುರು ಹಾದುಹೋಗುತ್ತಿದ್ದಾಗ ಕಾರಿನ ಎಂಜಿನ್ನಲ್ಲಿ ಬೆಂಕಿ, ಹೊಗೆ ಕಾಣಿಸಿಕೊಂಡಿದೆ. ಡ್ರೈವರ್ ಕಾರನ್ನು ಸೈಡ್ ಗೆ ನಿಲ್ಲಿಸುತ್ತಿದ್ದಂತೆ ರಿಸರ್ವ್ ಪೊಲೀಸ್ ವಾಹನದಲ್ಲಿದ್ದ ಪೊಲೀಸ್ ಸಿಬ್ಬಂದಿಯು ಹೊತ್ತಿ ಉರಿಯುತ್ತಿದ್ದ ಕಾರಿನತ್ತ ದೌಡಾಯಿಸಿದ್ದಾರೆ. ಅಗ್ನಿ ನಿರೋಧಕ ಉಪಕರಣ ಬಳಸಿ ಬೆಂಕಿ ಆರಿಸಿದ್ದಾರೆ. ಕಾರಿನಲ್ಲಿದ್ದ ಓರ್ವ ಯುವಕ ಹಾಗೂ ಯುವತಿ ಸೇಫ್ ಆಗಿದ್ದಾರೆ.