ಮೈಸೂರು: ಗುಡಿಸಿಲಿಗೆ ಬೆಂಕಿ ತಗುಲಿ ದವಸ ಧಾನ್ಯ ಸುಟ್ಟು ಭಸ್ಮ

|

Updated on: Feb 07, 2021 | 10:30 AM

ಅಡುಗೆ ಮಾಡುವ ವೇಳೆ ಬೆಂಕಿ ಕಿಡಿ ಗುಡಿಸಿಲಿನ ಮೇಲ್ಛಾವಣಿಗೆ ತಾಗಿದ ಪರಿಣಾಮ ಗುಡಿಸಲು ನಾಶವಾಗಿದೆ. ಈ ಘಟನೆ ಹುಣಸೂರು ತಾಲೂಕಿನ ತೆಕ್ಕಲು ಹಾಡಿಯಲ್ಲಿ ನಡೆದಿದೆ.  

ಮೈಸೂರು: ಗುಡಿಸಿಲಿಗೆ ಬೆಂಕಿ ತಗುಲಿ ದವಸ ಧಾನ್ಯ ಸುಟ್ಟು ಭಸ್ಮ
ಗುಡಿಸಲು ಬೆಂಕಿಗೆ ಆಹುತಿ
Follow us on

ಮೈಸೂರು: ಅಡುಗೆ ಮಾಡುವ ವೇಳೆ ಬೆಂಕಿ ಕಿಡಿ ಗುಡಿಸಿಲಿನ ಮೇಲ್ಛಾವಣಿಗೆ ತಾಗಿ ಗುಡಿಸಲು ನಾಶವಾಗಿದೆ. ಈ ಘಟನೆ ಹುಣಸೂರು ತಾಲೂಕಿನ ತೆಕ್ಕಲು ಹಾಡಿಯಲ್ಲಿ ನಡೆದಿದೆ.

ತೆಕ್ಕಲು ಹಾಡಿಯ ಜಯಮ್ಮರಿಗೆ ಸೇರಿದ ಗುಡಿಸಲು ಎಂದು ತಿಳಿದು ಬಂದಿದೆ. ಹೊಸ ಮನೆಯನ್ನು ಕಟ್ಟುತ್ತಿದ್ದರಿಂದ ಗುಡಿಸಿಲಿನಲ್ಲಿ ವಾಸವಾಗಿದ್ದರು. ಅಡುಗೆ ಮಾಡುವ ವೇಳೆ ಗುಡಿಸಿಲಿನ ಮೇಲ್ಚಾವಣಿಗೆ ಹಾಕಿದ್ದ ತೆಂಗಿನ ಗರಿಗೆ ಬೆಂಕಿ ಕಿಡಿ ತಗುಲಿ ಅವಘಡ ಸಂಭವಿಸಿದ್ದು, ಗುಡಿಸಲು ಪೂರ್ತಿ ಬೆಂಕಿಗೆ ಆಹುತಿಯಾಗಿದ್ದು, ಒಳಗಿದ್ದ ದವಸ ಧಾನ್ಯಗಳೆಲ್ಲ ಬೆಂಕಿಗೆ ಭಸ್ಮವಾಗಿದೆ. ಘಟನೆಯಲ್ಲಿ ಮನೆಯೊಳಗಿದ್ದ ಮಂದಿಗೆ ಯಾವುದೇ ಹಾನಿಯಾಗದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

‘ಬೆಂಕಿ ಬಿದ್ದಿದ್ದು ಅಂಗಡಿಗಲ್ಲ, ನನ್ನ ಬದುಕಿಗೆ: 20 ವರ್ಷದ ದುಡಿಮೆ.. ಒಂದೇ ರಾತ್ರಿಯಲ್ಲಿ ಸರ್ವನಾಶ’