ರಾಜಸ್ಥಾನದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ 5 ಲಕ್ಷ ರೂ. ಮೌಲ್ಯದ ಅಫೀಮು ವಶ

|

Updated on: Oct 10, 2020 | 12:19 PM

ವಿಜಯಪುರ: ಜಿಲ್ಲಾ ಅಬಕಾರಿ ಪೊಲೀಸರಿಂದ ಭರ್ಜರಿ ದಾಳಿ ನಡೆದಿದೆ. ಚಡಚಣ ತಾಲೂಕಿನ ಶಿರಾಡೋಣದಲ್ಲಿ 5 ಲಕ್ಷ ರೂ. ಮೌಲ್ಯದ ಅಫೀಮು ವಶಕ್ಕೆ ಪಡೆಯಲಾಗಿದೆ. ರಾಜಸ್ಥಾನ ನೋಂದಣಿಯ ಲಾರಿಯಲ್ಲಿ ಬೆಂಗಳೂರಿಗೆ 12.50 ಕೆಜಿ ಅಫೀಮು ಸಾಗಿಸ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ರಾಜಸ್ಥಾನ ಮೂಲದ ಲಾರಿ ಚಾಲಕ ಸತೀಶ್ ಚೌಧರಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ವಿಜಯಪುರ ಅಬಕಾರಿ ಡಿಸಿ ಕೆ.ಅರುಣಕುಮಾರ ಮಾಹಿತಿ ನೀಡಿದ್ದು, ರಾಜಸ್ಥಾನ, ಮಧ್ಯಪ್ರದೇಶದ ಅಧಿಕಾರಿಗಳಿಗೆ ಈ ಬಗ್ಗೆ ಪತ್ರ ಬರೆಯಲಾಗುವುದು. ಹಾಗೂ ಅಲ್ಲಿಯೂ ತನಿಖೆ ನಡೆಸುವಂತೆ […]

ರಾಜಸ್ಥಾನದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ 5 ಲಕ್ಷ ರೂ. ಮೌಲ್ಯದ ಅಫೀಮು ವಶ
ವಿಶ್ವದ ಶೇ 80ರಷ್ಟು ಒಪಿಯಂ ಬೆಳೆಯುವುದು ಅಫ್ಘಾನಿಸ್ತಾನದಲ್ಲೇ
Follow us on

ವಿಜಯಪುರ: ಜಿಲ್ಲಾ ಅಬಕಾರಿ ಪೊಲೀಸರಿಂದ ಭರ್ಜರಿ ದಾಳಿ ನಡೆದಿದೆ. ಚಡಚಣ ತಾಲೂಕಿನ ಶಿರಾಡೋಣದಲ್ಲಿ 5 ಲಕ್ಷ ರೂ. ಮೌಲ್ಯದ ಅಫೀಮು ವಶಕ್ಕೆ ಪಡೆಯಲಾಗಿದೆ.

ರಾಜಸ್ಥಾನ ನೋಂದಣಿಯ ಲಾರಿಯಲ್ಲಿ ಬೆಂಗಳೂರಿಗೆ 12.50 ಕೆಜಿ ಅಫೀಮು ಸಾಗಿಸ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ರಾಜಸ್ಥಾನ ಮೂಲದ ಲಾರಿ ಚಾಲಕ ಸತೀಶ್ ಚೌಧರಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ವಿಜಯಪುರ ಅಬಕಾರಿ ಡಿಸಿ ಕೆ.ಅರುಣಕುಮಾರ ಮಾಹಿತಿ ನೀಡಿದ್ದು, ರಾಜಸ್ಥಾನ, ಮಧ್ಯಪ್ರದೇಶದ ಅಧಿಕಾರಿಗಳಿಗೆ ಈ ಬಗ್ಗೆ ಪತ್ರ ಬರೆಯಲಾಗುವುದು. ಹಾಗೂ ಅಲ್ಲಿಯೂ ತನಿಖೆ ನಡೆಸುವಂತೆ ಸೂಚಿಸಲಾಗುತ್ತೆ ಎಂದು ತಿಳಿಸಿದ್ದಾರೆ.