ಚಿಕ್ಕಮಗಳೂರು: ಕೆರೆಯಲ್ಲಿ ಈಜಲು ಹೋದ ಐವರು ನೀರಲ್ಲಿ ಮುಳುಗಿ ಸಾವನಪ್ಪಿರುವ ಕರುಣಾಜನಕ ಘಟನೆ ಚಿಕ್ಕಮಗಳೂರು ತಾಲೂಕಿನ ವಸ್ತಾರೆಯಲ್ಲಿ ನಡೆದಿದೆ. ವಸ್ತಾರೆ ಗ್ರಾಮದ ಹಿರೇಕೆರೆ ಎಂಬಲ್ಲಿ ಐವರು ಜಲ ಸಮಾಧಿಯಾಗಿದ್ದಾರೆ. ಸಂದೀಪ್, ರಾಘವೇಂದ್ರ, ಸುದೀಪ್, ದಿಲೀಪ್, ದೀಪಕ್ ಮೃತ ದುರ್ದೈವಿಗಳು.
ಅಕ್ಕ-ಭಾವನನ್ನ ಮನೆಯಿಂದ ಕಳುಹಿಸಿ ಕೆರೆ ದಾರಿ ಹಿಡಿದ ಸಹೋದರ:
ಕಳೆದ ಶುಕ್ರವಾರವಷ್ಟೇ ಮೃತ ಸಂದೀಪ್ ಸಹೋದರಿಯ ಮದುವೆ ನೆರವೇರಿದೆ. ಈ ಹಿನ್ನೆಲೆಯಲ್ಲಿ ನ.24ರಂದು ವಸ್ತಾರೆಯ ಸಂದೀಪ್ ಮನೆಯಲ್ಲಿ ಬೀಗರ ಔತಣ ಕೂಟಕ್ಕಾಗಿ ಸಂಬಂಧಿಕರು ಆಗಮಿಸಿದ್ದರು. ನ.24ರಂದು ಕಾರ್ಯಕ್ರಮ ಮುಗಿದ ಬಳಿಕ ನ.25ರ ಬೆಳಿಗ್ಗೆ ಸಂದೀಪ್ ತನ್ನ ಅಕ್ಕ-ಭಾವನನ್ನ ವಸ್ತಾರೆ ಗ್ರಾಮದಿಂದ ಕಳುಹಿಸಿ ಕೊಟ್ಟಿದ್ದಾರೆ. ಆ ಬಳಿಕ ಉಳಿದ ನಾಲ್ವರು ಸಂಬಂಧಿ ಯುವಕರ ಜೊತೆ ಕೆರೆಯಲ್ಲಿ ಈಜಲು ಸಂದೀಪ್ ಬಂದಿದ್ದಾನೆ.
ಮುಳುಗಿದವನನ್ನು ಬದುಕಿಸಲು ಹೋಗಿ ನಾಲ್ವರು ಮುಳುಗಿದ್ರು:
ಸಾವಿನ ಸುದ್ದಿ ಕೇಳಿ ಇಡೀ ಊರೇ ಮಿಡಿಯಿತು ಕಂಬನಿ:
ಈ ವೇಳೆ ಕೆಲವರು ಕೆರೆಯಲ್ಲಿ ಮುಳಗುತ್ತಿದ್ದ ಯುವಕರನ್ನು ಕಂಡು ರಕ್ಷಿಸಲು ಒಡೋಡಿ ಬಂದ್ರೂ ಪ್ರಯೋಜನವಾಗಿಲ್ಲ. ನೋಡು ನೋಡ್ತಿದಂತೆ ಐವರು ನೀರಿನಲ್ಲಿ ಕಣ್ಮರೆಯಾದರು. ಈಜಲು ಹೋಗಿದ್ದ ಐವರು ಯುವಕರು ಸಾವನ್ನಪ್ಪಿದ್ದ ಸುದ್ದಿ ಕೇಳಿ ಕೆರೆಯ ದಡದಲ್ಲಿ ಪೋಷಕರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು.
ಮೂವರು ಮಕ್ಕಳು ಸಾವು, ಮುಗಿಲು ಮುಟ್ಟಿದ ದಂಪತಿಯ ಆಕ್ರಂದನ:
ವಸ್ತಾರೆ ಗ್ರಾಮದ ಸಂದೀಪ್, ರಾಘವೇಂದ್ರ ಸೇರಿದಂತೆ ಹಂಚರವಳ್ಳಿ ಗ್ರಾಮದ ಕುಸುಮಾ-ಕೃಷ್ಣಮೂರ್ತಿ ದಂಪತಿ ಮಕ್ಕಳಾದ ದೀಪಕ್, ದಿಲೀಪ್, ಸುದೀಪ್ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೂವರು ಮಕ್ಕಳನ್ನ ಕಳೆದುಕೊಂಡ ದಂಪತಿಯ ಆಕ್ರಂದನವಂತೂ ಮುಗಿಲು ಮುಟ್ಟಿತ್ತು. ಮೂವರು ಮಕ್ಕಳು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಓದಿ ಉತ್ತಮ ಭವಿಷ್ಯ ಕಟ್ಟಿಕೊಂಡು ತಂದೆ-ತಾಯಿಗೆ ಆಸರೆಯಾಗಬೇಕು ಅಂತಾ ಕನಸು ಕಂಡಿದ್ದರು. ಆದರೆ ವಿಧಿಯಾಟ ಎಲ್ಲವನ್ನು ನುಚ್ಚುನೂರು ಮಾಡಿದೆ.
ಯಜಮಾನನನ್ನು ಕಳೆದುಕೊಂಡು “ಡ್ಯಾನಿ” ಕಣ್ಣೀರು:
ದೊಡ್ಡ ದುರಂತಕ್ಕೆ ಸಾಕ್ಷಿಯಾಯ್ತು ಹಿರೇ”ಕೆರೆ”
ವಸ್ತಾರೆ ಗ್ರಾಮದ ಬೃಹತ್ ಕೆರೆ ಇದಾಗಿರೋದ್ರಿಂದ ಇದನ್ನ ಹಿರೆಕೆರೆ ಅಂತಾಲೇ ಗ್ರಾಮಸ್ಥರು ಕರೆಯುತ್ತಾರೆ. ಇದೇ ಮೊದಲ ಬಾರಿಗೆ ಈ ಕೆರೆಯಲ್ಲಿ ದೊಡ್ಡ ಅನಾಹುತ ಸಂಭವಿಸಿದೆ. ಎದೆಮಟ್ಟಕ್ಕೆ ಬೆಳೆದ ಮಕ್ಕಳನ್ನ ಕಳೆದುಕೊಂಡ ಪೋಷಕರು, ಸಂಬಂಧಿಕರು, ಸ್ನೇಹಿತರೆಲ್ಲರೂ ಆಕ್ರಂದನ ಇಡೀ ಊರನ್ನೇ ದುಃಖದ ಮಡುವಿನಲ್ಲಿ ಮುಳುಗಿಸಿದೆ. ಒಟ್ಟಿನಲ್ಲಿ ಮದುವೆ ಮಾಡಿ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ನೋವು ಶಾಶ್ವತವಾಗಿ ಉಳಿಯುವಂತೆ ಆಗಿದ್ದು ಮಾತ್ರ ನಿಜಕ್ಕೂ ದುರಂತ.
ಇದನ್ನೂ ಓದಿ: ಮದುವೆಗೆ ಹೋಗಿದ್ದ ಮೂವರು ಯುವಕರು, ಓರ್ವ ಯುವತಿ ಜಲಸಮಾಧಿ..
ವಸ್ತಾರೆ ಬಳಿಯ ಹಿರೇಕೆರೆಯಲ್ಲಿ ದುರಂತ: ಬೀಗರ ಔತಣಕ್ಕೆ ಬಂದ ಐವರು ಯುವಕರು ನೀರುಪಾಲು
Published On - 7:20 am, Thu, 26 November 20