ವಸ್ತಾರೆ ಬಳಿಯ ಹಿರೇಕೆರೆಯಲ್ಲಿ ದುರಂತ: ಬೀಗರ ಔತಣಕ್ಕೆ ಬಂದ ಐವರು ಯುವಕರು ನೀರುಪಾಲು

| Updated By: guruganesh bhat

Updated on: Nov 25, 2020 | 3:52 PM

ಬೀಗರ ಔತಣಕ್ಕೆಂದು ಹೋದ ಐವರು ಯುವಕರು ನೀರುಪಾಲಾದ ಘಟನೆ ವಸ್ತಾರೆ ಬಳಿಯ ಹಿರೇಕೆರೆಯಲ್ಲಿ ನಡೆದಿದೆ.

ವಸ್ತಾರೆ ಬಳಿಯ ಹಿರೇಕೆರೆಯಲ್ಲಿ ದುರಂತ: ಬೀಗರ ಔತಣಕ್ಕೆ ಬಂದ ಐವರು ಯುವಕರು ನೀರುಪಾಲು
Follow us on

ಚಿಕ್ಕಮಗಳೂರು: ಬೀಗರ ಔತಣಕ್ಕೆಂದು ಹೋದ ಐವರು ಯುವಕರು ನೀರುಪಾಲಾದ ಘಟನೆ ವಸ್ತಾರೆ ಬಳಿಯ ಹಿರೇಕೆರೆಯಲ್ಲಿ ನಡೆದಿದೆ.

ರಘು(22), ದಿಲೀಪ್(24), ಸಂದೀಪ್(23), ದೀಪಕ್(25), ಸುದೀಪ್(22) ಹಿರೇಕೆರೆಗೆ ಈಜಲೆಂದು ಹೋಗಿದ್ದರು. ಆದರೆ ಎಲ್ಲರೂ ನೀರುಪಾಲಾಗಿದ್ದಾರೆ. ಅದರಲ್ಲಿ ಸಂದೀಪ್​ ಮೃತದೇಹ ಸಿಕ್ಕಿದೆ. ಉಳಿದವರಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಬೋಟ್​ ಬಳಸಿ ಹುಡುಕುತ್ತಿದ್ದಾರೆ.

ಇವರಿಬ್ಬರಲ್ಲಿ ಇಬ್ಬರು ಸ್ಥಳೀಯ ಯುವಕರಾಗಿದ್ದು, ಇನ್ನೂ ಮೂವರು ಬೀಗರ ಊಟಕ್ಕೆಂದು ಬಂದವರಾಗಿದ್ದರು. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 3:46 pm, Wed, 25 November 20