AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಗಾನಗರ CBI ಕಚೇರಿಗೆ ಬಂದ ಡಿಕೆಶಿ.. ನಾಳೆ ವಡೋದರಾಗೆ ಹೋಗೋಕೆ ಸಿಗುತ್ತಾ ಅವಕಾಶ?

ಅಕ್ರಮ ಆಸ್ತಿ ಗಳಿಕೆ ತನಿಖೆಗಾಗಿ ಅಕ್ಟೋಬರ್ 5 ರಂದು ಸಿಬಿಐ ಡಿ.ಕೆ.ಶಿವಕುಮಾರ್​ ಅವರಿಗೆ ಸೇರಿದ ವಿವಿಧ ಮನೆಗಳ ಮೇಲೆ ನಡೆಸಿತ್ತು. ಸೂಕ್ತ ದಾಖಲೆಗಳನ್ನು ಒದಗಿಸದಿದ್ದರೆ ಆದಾಯ ತೆರಿಗೆ ಕಾಯ್ದೆಯನ್ವಯ ಶಿಕ್ಷಾರ್ಹವಾಗುತ್ತದೆ.

ಗಂಗಾನಗರ CBI ಕಚೇರಿಗೆ ಬಂದ ಡಿಕೆಶಿ.. ನಾಳೆ ವಡೋದರಾಗೆ ಹೋಗೋಕೆ ಸಿಗುತ್ತಾ ಅವಕಾಶ?
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
Ghanashyam D M | ಡಿ.ಎಂ.ಘನಶ್ಯಾಮ
| Updated By: ಸಾಧು ಶ್ರೀನಾಥ್​|

Updated on:Nov 25, 2020 | 4:59 PM

Share

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಆರೋಪ ಎದುರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಚಾರಣೆಗಾಗಿ ಬುಧವಾರ (ನ. 25) ಸಿಬಿಐ ಕಚೇರಿಗೆ ಆಗಮಿಸಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಡಿ.ಕೆ.ಶಿವಕುಮಾರ್ ಅವರಿಗೆ ಸಿಬಿಐ ನೊಟೀಸ್ ನೀಡಿತ್ತು.

ಅಕ್ರಮ ಆಸ್ತಿ ಗಳಿಕೆ ತನಿಖೆಗಾಗಿ ಅಕ್ಟೋಬರ್ 5 ರಂದು ಸಿಬಿಐ ಡಿ.ಕೆ.ಶಿವಕುಮಾರ್​ ಅವರಿಗೆ ಸೇರಿದ ವಿವಿಧ ಮನೆಗಳ ಮೇಲೆ ನಡೆಸಿತ್ತು. 14 ಕಡೆ ದಾಳಿ ನಡೆಸಿ ₹ 57 ಲಕ್ಷ ಮೌಲ್ಯದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು.

ವಡೋದರಾಗೆ ತೆರಳಲು ಸಿಗುತ್ತಾ ಅವಕಾಶ ಬುಧವಾರ ನಸುಕಿನಲ್ಲಿ ನಿಧನರಾದ ಕಾಂಗ್ರೆಸ್​ ನಾಯಕ ಅಹ್ಮದ್ ಪಟೇಲ್ ಅವರ ಅಂತ್ಯಸಂಸ್ಕಾರ ಗುಜರಾತ್​ನ ವಡೋದರಾದಲ್ಲಿ ನಡೆಯಲಿದೆ.

ಅಗಲಿದ ನಾಯಕ ಅಹ್ಮದ್ ಪಟೇಲ್​ ಅವರಿಗೆ ಡಿ.ಕೆ.ಶಿವಕುಮಾರ್ ಅತ್ಯಾಪ್ತರಾಗಿದ್ದರು. ಪಟೇಲ್ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲೆಂದು ವಡೋದರಾಗೆ ತೆರಳಬೇಕೆಂಬ ಇಚ್ಛೆ ಡಿಕೆಶಿಗೆ ಇದೆ. ಆದರೆ ಸಿಬಿಐ ಇದಕ್ಕೆ ಅವಕಾಶ ಮಾಡಿಕೊಡುತ್ತಾ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಒಂದು ವೇಳೆ ಡಿ.ಕೆ.ಶಿವಕುಮಾರ್ ನೀಡುವ ಉತ್ತರಗಳಿಂದ ಸಿಬಿಐಗೆ ತೃಪ್ತಿಯಾಗದಿದ್ದಲ್ಲಿ ಅವರ ಬಂಧನವಾಗುವ ಸಾಧ್ಯತೆಯಿರುತ್ತದೆ ಎನ್ನಲಾಗಿದೆ.

ಡಿಕೆಶಿ ವಿರುದ್ಧ ಸಿಬಿಐ ತನಿಖೆ ಏಕೆ? ಐಟಿ ದಾಳಿ ವೇಳೆ ಡಿ.ಕೆ.ಶಿವಕುಮಾರ್ ಅವರ ನಿವಾಸದಲ್ಲಿ ಜಪ್ತಿಯಾದ ಹಣದ ಮೂಲ ಈವರೆಗೂ ಪತ್ತೆಯಾಗಿಲ್ಲ. ಅಕ್ರಮ ಹಣ ವರ್ಗಾವಣೆ ಬಗ್ಗೆ ಜಾರಿ ನಿರ್ದೇಶನಾಲಯದ (ಇಡಿ) ತನಿಖೆಯನ್ನೂ ಡಿ.ಕೆ.ಶಿವಕುಮಾರ್ ಎದುರಿಸಿದ್ದರು. ಈ ಸಂದರ್ಭದಲ್ಲಿಯೂ ಕೆಲ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲು ಶಿವಕುಮಾರ್ ಅವರಿಗೆ ಸಾಧ್ಯವಾಗಲಿಲ್ಲ.

ಸಹೋದರ ಡಿ.ಕೆ.ಸುರೇಶ್, ಪತ್ನಿ, ತಾಯಿ, ಮಕ್ಕಳ ಹೆಸರಿನಲ್ಲಿಯೂ ಡಿಕೆಶಿ ಆಸ್ತಿ ಸಂಪಾದಿಸಿದ್ದಾರೆ. ಆಪ್ತರಾದ ಆಂಜನೇಯ, ಹನುಮಂತರಾಯ, ಶಶಿಕುಮಾರ್ ರಿಂದ ಅಕ್ರಮ ಸಂಪಾದನೆಗೆ ನೆರವು ಸಿಕ್ಕಿರುವ ಅನುಮಾನಗಳಿವೆ.

ಐಟಿ ದಾಳಿ ವೇಳೆ ಆದಾಯ ತೆರಿಗೆ ವಂಚಿಸಿರುವುದು ಸಹ ಸಾಬೀತಾಗಿದೆ. ಸೂಕ್ತ ದಾಖಲೆಗಳನ್ನು ಒದಗಿಸದಿದ್ದರೆ ಆದಾಯ ತೆರಿಗೆ ಕಾಯ್ದೆಯ ಹಲವು ಪರಿಚ್ಛೇದಗಳ ಅನ್ವಯ ಡಿ.ಕೆ.ಶಿವಕುಮಾರ್​ ಶಿಕ್ಷಾರ್ಹರಾಗುತ್ತಾರೆ.

Published On - 4:58 pm, Wed, 25 November 20