ವಸ್ತಾರೆ ಬಳಿಯ ಹಿರೇಕೆರೆಯಲ್ಲಿ ದುರಂತ: ಬೀಗರ ಔತಣಕ್ಕೆ ಬಂದ ಐವರು ಯುವಕರು ನೀರುಪಾಲು
ಬೀಗರ ಔತಣಕ್ಕೆಂದು ಹೋದ ಐವರು ಯುವಕರು ನೀರುಪಾಲಾದ ಘಟನೆ ವಸ್ತಾರೆ ಬಳಿಯ ಹಿರೇಕೆರೆಯಲ್ಲಿ ನಡೆದಿದೆ.
ಚಿಕ್ಕಮಗಳೂರು: ಬೀಗರ ಔತಣಕ್ಕೆಂದು ಹೋದ ಐವರು ಯುವಕರು ನೀರುಪಾಲಾದ ಘಟನೆ ವಸ್ತಾರೆ ಬಳಿಯ ಹಿರೇಕೆರೆಯಲ್ಲಿ ನಡೆದಿದೆ.
ರಘು(22), ದಿಲೀಪ್(24), ಸಂದೀಪ್(23), ದೀಪಕ್(25), ಸುದೀಪ್(22) ಹಿರೇಕೆರೆಗೆ ಈಜಲೆಂದು ಹೋಗಿದ್ದರು. ಆದರೆ ಎಲ್ಲರೂ ನೀರುಪಾಲಾಗಿದ್ದಾರೆ. ಅದರಲ್ಲಿ ಸಂದೀಪ್ ಮೃತದೇಹ ಸಿಕ್ಕಿದೆ. ಉಳಿದವರಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಬೋಟ್ ಬಳಸಿ ಹುಡುಕುತ್ತಿದ್ದಾರೆ.
ಇವರಿಬ್ಬರಲ್ಲಿ ಇಬ್ಬರು ಸ್ಥಳೀಯ ಯುವಕರಾಗಿದ್ದು, ಇನ್ನೂ ಮೂವರು ಬೀಗರ ಊಟಕ್ಕೆಂದು ಬಂದವರಾಗಿದ್ದರು. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 3:46 pm, Wed, 25 November 20