Tricolour Flag 24×7: ಇನ್ನು ತ್ರಿವರ್ಣ ಧ್ವಜವನ್ನು ಹಗಲು ರಾತ್ರಿ ಯಾವಾಗ ಬೇಕಾದರೂ ಹಾರಿಸಬಹುದು

| Updated By: ಸಾಧು ಶ್ರೀನಾಥ್​

Updated on: Jul 23, 2022 | 10:34 PM

Flag Code relaxed : ಆಜಾದಿಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಪ್ರಧಾನಿ ನ್ರೇಂದ್ರ ಮೋದಿ ನೇತೃತ್ವದ ಸರ್ಕಾರವು ಆಗಸ್ಟ್ 13 ರಿಂದ 15 ರವರೆಗೆ ಹರ್ ಘರ್‌ನಲ್ಲಿ ತ್ರಿವರ್ಣ ಕಾರ್ಯಕ್ರಮವನ್ನು ಪ್ರಾರಂಭಿಸಲಿದೆ. ಈ ನಿಟ್ಟಿನಲ್ಲಿ ಇದೀಗ ತ್ರಿವರ್ಣ ಧ್ವಜ ಹಗಲು ರಾತ್ರಿ ಯಾವಾಗ ಬೇಕಾದರೂ ಹಾರಿಸಬಹುದು.

Tricolour Flag  24x7: ಇನ್ನು ತ್ರಿವರ್ಣ ಧ್ವಜವನ್ನು ಹಗಲು ರಾತ್ರಿ ಯಾವಾಗ ಬೇಕಾದರೂ ಹಾರಿಸಬಹುದು
ತ್ರಿವರ್ಣ ಧ್ವಜ
Follow us on

ಮೋದಿ ಸರ್ಕಾರವು ದೇಶದ ಧ್ವಜ ಸಂಹಿತೆಯಲ್ಲಿ (Flag Code relaxed) ಬದಲಾವಣೆಗಳನ್ನು ಮಾಡಿದ್ದು, ಅದರ ಅಡಿ ಈಗ ತ್ರಿವರ್ಣ ಧ್ವಜವನ್ನು ಹಗಲು ರಾತ್ರಿ ಹಾರಿಸಲು ಅನುಮತಿಸಲಾಗಿದೆ. ಅಲ್ಲದೆ, ಈಗ ಪಾಲಿಯೆಸ್ಟರ್ ಮತ್ತು ಯಂತ್ರ ನಿರ್ಮಿತ ರಾಷ್ಟ್ರಧ್ವಜವನ್ನು ಸಹ ಬಳಸಬಹುದು. ಈ ಹಿಂದೆ ತ್ರಿವರ್ಣ ಧ್ವಜವನ್ನು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾತ್ರ ಹಾರಿಸಲು ಅನುಮತಿ ನೀಡಲಾಗಿದೆ. ‘ಆಜಾದಿ ಕಾ ಅಮೃತ್ ಮಹೋತ್ಸವ’ದಡಿ (Azadi Ka Amrit Mahotsav) ಆಗಸ್ಟ್ 13 ರಿಂದ 15 ರವರೆಗೆ ‘ಹರ್ ಘರ್ ತ್ರಿವರ್ಣ’ ಕಾರ್ಯಕ್ರಮವನ್ನು ಸರ್ಕಾರ ಆರಂಭಿಸಲಿದ್ದು, ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ (Tricolour Flag 24X7).

ತ್ರಿವರ್ಣ ಧ್ವಜವನ್ನು ಹಗಲು ಅಥವಾ ರಾತ್ರಿ ಯಾವುದೇ ಸಮಯದಲ್ಲಿ ಹಾರಿಸಬಹುದು:

ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಭಾರತೀಯ ರಾಷ್ಟ್ರೀಯ ಧ್ವಜದ ಪ್ರದರ್ಶನ, ಹಾರಾಟ ಮತ್ತು ಬಳಕೆಯನ್ನು ಭಾರತದ ಧ್ವಜ ಸಂಹಿತೆ, 2002 ಮತ್ತು 1971 ರಾಷ್ಟ್ರೀಯ ಹೆಮ್ಮೆಗೆ ಅವಮಾನಗಳ ತಡೆ ಕಾಯಿದೆಯಡಿಯಲ್ಲಿ ತಿಳಿಸಿದ್ದಾರೆ.

ಪತ್ರದ ಪ್ರಕಾರ, ಭಾರತದ ಧ್ವಜ ಸಂಹಿತೆ 2002 ಅನ್ನು ಜುಲೈ 20, 2022 ದಿನಾಂಕದ ಆದೇಶದ ಮೂಲಕ ತಿದ್ದುಪಡಿ ಮಾಡಲಾಗಿದೆ ಮತ್ತು ಈಗ ಭಾರತದ ಧ್ವಜ ಸಂಹಿತೆ, 2002 ರ ಭಾಗ II ರ ಪ್ಯಾರಾ 2.2 ರ ಷರತ್ತು (11) ಅನ್ನು ಸಡಿಸಲಾಗಿದ್ದು ‘ಧ್ವಜವನ್ನು ಸಾರ್ವಜನಿಕ ಸ್ಥಳದಲ್ಲಿ ಪ್ರದರ್ಶಿಸಬಹದು ಅಥವಾ ನಾಗರಿಕರ ನಿವಾಸದಲ್ಲಿ ಪ್ರದರ್ಶಿಸಲಾಗುತ್ತದೆ. ಅದನ್ನು ಹಗಲೂ ರಾತ್ರಿಯೂ ಹಾರಿಸಬಹುದು.