ಮಂಗಳೂರು: ಸಸ್ಯ ರಾಶಿಗಳ ನಡುವೆ ಅರಳಿ ನಿಂತಿರುವ ಹೂವುಗಳ ಲೋಕ. ಒಂದಕ್ಕಿಂತ ಒಂದು ಚಂದ, ಅಂದ, ಭಿನ್ನ ವಿಭಿನ್ನ. ಹೂವುಗಳಲ್ಲಿ ಅರಳಿದ ಸ್ವಾಮಿ ವಿವೇಕಾನಂದರು ಶಾಂತವಾಗಿ ಕುಳಿತಿದ್ರೆ, ರೆಕ್ಕಿ ಬಿಚ್ಚಿ ನಿಂತಿರುವ ಹಕ್ಕಿ. ನೋಡುಗರಿಗೆ ಸಖತ್ ಕಿಕ್ ನೀಡುತ್ತಿರುವ ತರಕಾರಿ, ಹಣ್ಣುಗಳಲ್ಲಿ ರಚನೆಯಾದ ಪ್ರಾಣಿ ಪಕ್ಷಿಗಳು.
ಕದ್ರಿ ಪಾರ್ಕ್‌ನಲ್ಲಿ ಅರಳಿ ನಿಂತ ಹೂವಿನ ಲೋಕ:
ಇನ್ನು ಅಲಂಕಾರಿಕ ಹೂವಿನಿಂದ ವಿವಿಧ ಆಕೃತಿಗಳನ್ನ ಕದ್ರಿಯ ಹೊರಾಂಗಣದ ಹುಲ್ಲುಹಾಸಿನ ಮೇಲೆ ನಿರ್ಮಿಸಲಾಗಿದೆ. ಸೇವಂತಿಗೆ ಹೊವಿನ ಸ್ವಾಮಿ ವಿವೇಕಾನಂದರು, ರೆಕ್ಕಿ ಬಿಚ್ಚಿ ಹಾರುತ್ತಿರುವ ಪಕ್ಷಿಗಳು, ತರಕಾರಿ ಮತ್ತು ಹಣ್ಣುಗಳಿಂದ ರಚಿತವಾದ ವಿವಿಧ ಆಕೃತಿಗಳು ನೋಡುಗರನ್ನ ತನ್ನತ್ತ ಸೆಳೆಯುತ್ತಿವೆ. ಮಕ್ಕಳು ಕಲರ್‌ಫುಲ್ ಹೂವು, ವಿವಿಧ ರೀತಿಯ ಸಸ್ಯಗಳ ನೋಡಿ ಖುಷಿ ಪಟ್ಟರೆ, ವ್ಯಾಪಾರಿಗಳ ವ್ಯಾಪರ ಬಲು ಜೋರಾಗಿದೆ. ಒಟ್ನಲ್ಲಿ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರ ಗಮನ ಸೆಳೆಯೋ ಈ ಫ್ಲವರ್ ಶೋ ಈ ಬಾರಿ ಇನ್ನೂ ಹಲವಾರು ವಿಶೇಷತೆಗಳನ್ನು ಹೊಂದಿದೆ.