AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತರ ಸಖತ್ ಐಡಿಯಾ! ಬೆಳೆಗಳಿಗೆ FM Radio ರಕ್ಷಣೆ.. ಎಲ್ಲಿ?

ಕೋಲಾರ: FM Radio​ ಅಂದ್ರೆ ಕೇವಲ ಮನೋರಂಜನೆ ಅಷ್ಟೆ ಅನ್ನೋ ಮಾತಿತ್ತು. ಜೊತೆಗೆ ಬಸ್​, ಆಟೋ, ಕಾರ್​ಗಳಲ್ಲಿ ಕೆಲವರು ಇದರಿಂದ ಮನೋರಂಜನೆ ಪಡೆಯುತ್ತಿದ್ರು. ರೈತರಿಗೆ ಒಂದಷ್ಟು ಮಾಹಿತಿ ಸಿಗುತ್ತಿತ್ತು ಅಷ್ಟೇಯಾ.. ಅಂದ್ಕೊಂಡಿದ್ರು! ಅದ್ರೆ ಈ ರೇಡಿಯೋದಿಂದ ರೈತರು ತಾವು ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳಬಹುದು ಅಂತಿದ್ದಾರೆ ಇಲ್ಲೊಬ್ಬ ರೈತ! ಯಾರು? ಮುಂದೆ ಓದಿ… ಕಾಡು ಪ್ರಾಣಿಗಳಿಂದ ರಕ್ಷಣೆಗೆ ರೇಡಿಯೋ ಗುಡ್​ ಐಡಿಯಾ! ವಿಶಾಲವಾದ ಹೊಲದಲ್ಲಿ ಪ್ರದೇಶದಲ್ಲಿ ಎಫ್​ಎಂ ಸಂಗೀತದ ಸದ್ದು, ಅಲ್ಲೇ ಹೊಲದ ಮೂಲೆಯಲ್ಲೆಲ್ಲೋ ಕೆಲಸ ಮಾಡುತ್ತಿರುವ ರೈತರು, […]

ರೈತರ ಸಖತ್ ಐಡಿಯಾ! ಬೆಳೆಗಳಿಗೆ FM Radio ರಕ್ಷಣೆ.. ಎಲ್ಲಿ?
ಸಾಧು ಶ್ರೀನಾಥ್​
|

Updated on: Aug 01, 2020 | 1:54 PM

Share

ಕೋಲಾರ: FM Radio​ ಅಂದ್ರೆ ಕೇವಲ ಮನೋರಂಜನೆ ಅಷ್ಟೆ ಅನ್ನೋ ಮಾತಿತ್ತು. ಜೊತೆಗೆ ಬಸ್​, ಆಟೋ, ಕಾರ್​ಗಳಲ್ಲಿ ಕೆಲವರು ಇದರಿಂದ ಮನೋರಂಜನೆ ಪಡೆಯುತ್ತಿದ್ರು. ರೈತರಿಗೆ ಒಂದಷ್ಟು ಮಾಹಿತಿ ಸಿಗುತ್ತಿತ್ತು ಅಷ್ಟೇಯಾ.. ಅಂದ್ಕೊಂಡಿದ್ರು! ಅದ್ರೆ ಈ ರೇಡಿಯೋದಿಂದ ರೈತರು ತಾವು ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳಬಹುದು ಅಂತಿದ್ದಾರೆ ಇಲ್ಲೊಬ್ಬ ರೈತ! ಯಾರು? ಮುಂದೆ ಓದಿ…

ಕಾಡು ಪ್ರಾಣಿಗಳಿಂದ ರಕ್ಷಣೆಗೆ ರೇಡಿಯೋ ಗುಡ್​ ಐಡಿಯಾ! ವಿಶಾಲವಾದ ಹೊಲದಲ್ಲಿ ಪ್ರದೇಶದಲ್ಲಿ ಎಫ್​ಎಂ ಸಂಗೀತದ ಸದ್ದು, ಅಲ್ಲೇ ಹೊಲದ ಮೂಲೆಯಲ್ಲೆಲ್ಲೋ ಕೆಲಸ ಮಾಡುತ್ತಿರುವ ರೈತರು, ಗಾಳಿಗೆ ಬಿಯರ್​ ಬಾಟಲು ಟಂ ಟಂ ಅಂಥ ಬರುತ್ತಿರುವ ಸದ್ದು, ಇದೆಲ್ಲಾ ಕಂಡು ಬಂದಿದ್ದು ಕೋಲಾರ ತಾಲ್ಲೂಕು ಹೋಳೂರು ಗ್ರಾಮದ ನಂಜುಂಡರೆಡ್ಡಿಯವರ ತೋಟದಲ್ಲಿ.

ಹೌದು ರಾತ್ರಿಯಾದ್ರೆ ಈ ಭಾಗದ ಬೆಳೆಗಳಿಗೆ ಕಾಡು ಪ್ರಾಣಿಗಳ ಕಾಟ, ಹಾಗಾಗಿ ಕಾಡು ಪ್ರಾಣಿಗಳನ್ನು ನಿಯಂತ್ರಿಸಲು ಈ ಭಾಗದ ರೈತರು ಹೊಸ ಐಡಿಯಾ ಮಾಡಿದ್ದಾರೆ. ರಾತ್ರಿ ಏನಾದ್ರು ನೀವು ಈ ಭಾಗದಲ್ಲಿ ಬಂದ್ರೆ ಎಫ್‌ಎಂ ರೇಡಿಯೋಗಳ ಸದ್ದು ಅದರಲ್ಲಿ ಆರ್​​​ಜೆ ಗಳ ಗದ್ದಲ ಕೇಳಿಸುತ್ತದೆ.

ರೇಡಿಯೋ ಮತ್ತು ಆರ್​​ಜೆ ಗಳ ಮಾತು ಕೇಳಿಸಿಕೊಂಡು ಮನುಷ್ಯರು ಮನರಂಜನೆ ಪಡೆದ್ರೆ, ಕಾಡುಪ್ರಾಣಿಗಳು ಹೆದರಿಕೊಂಡು ಹೊಲಗಳ ಕಡೆ ಸುಳಿಯೋದಿಲ್ಲವಂತೆ! ತಮಾಷೆ ಅಂದ್ರೂ ಇದು ನಿಜವೇ..

ಅಷ್ಟೇ ಅಲ್ಲದೆ ಬಿಯರ್​ ಬಾಟಲಿಗಳನ್ನು ಹೊಲದ ಸುತ್ತಮುತ್ತ ಕಟ್ಟಿ ಅದರ ಪಕ್ಕದಲ್ಲಿ ಕಲ್ಲು ಕಟ್ಟಲಾಗಿರುತ್ತದೆ, ಇದರಿಂದ ಗಾಳಿಗೆ ಬಾಟಲ್​ ಕಲ್ಲಿಗೆ ತಗುಲಿ ಸದ್ದು ಬರುತ್ತದೆ. ಈ ಶಬ್ದಕ್ಕೆ ಕಾಡು ಪ್ರಾಣಿಗಳು ಹೊಲಗಳತ್ತ ಬರೋದಿಲ್ಲ ಅನ್ನೋದು ರೈತರ ಮಾತು.

ಬೆಳೆದ ಬೆಳೆಗಳೆಲ್ಲಾ ಕಾಡು ಪ್ರಾಣಿಗಳ ಪಾಲಾಗ್ತಿದೆ..? ಇನ್ನು, ಈ ಹಿಂದೆ ನಮ್ಮ ರೈತ್ರು ತಾವು ಬೆಳೆದ ಬೆಳಗಳನ್ನ ರಕ್ಷಿಸಲು ಅಂತ ರಾತ್ರಿ ವೇಳೆ ಇನ್ನಿಲ್ಲದ ಸಾಹಸಗಳನ್ನ ಮಡ್ತಾ ಇದ್ರು. ಅದ್ರಲ್ಲಿ ರಾತ್ರಿಯಿಡೀ ತಾವೇ ನಿರ್ಮಿಸಿದ ಗುಡಿಸಿಲಿನಲ್ಲಿ ನಿದ್ದೆಗೆಟ್ಟು ಶಬ್ದ ಮಾಡುವುದು. ಬೆಂಕಿ ಹಾಕಿ ತಮಟೆ ಹೊಡೆಯುವುದು. ಮುಳ್ಳು ಕಂಬಿಯ ಬೇಲಿ ನಿರ್ಮಾಣ ಮಾಡುವುದು. ಬೆಳೆಯ ಸುತ್ತ ಬಟ್ಟೆ ಕಟ್ಟಿ ಕಾಡು ಪ್ರಾಣಿಗಳ ನಿಯಂತ್ರಣಕ್ಕೆ ಐಡಿಯಾಗಳನ್ನ ಮಾಡ್ತಾ ಇದ್ರು.

ಆದ್ರೆ ನೂತನವಾಗಿ ವಿದ್ಯುತ್ ದೀಪಗಳನ್ನ ಹಾಕಿ, 200 ರೂಪಾಯಿ ಕೊಟ್ಟು ಎಫ್‌ಎಂ ರೇಡಿಯೋಗಳನ್ನ ಅಳವಡಿಸಿರುವುದರಿಂದ ಕಾಡು ಪ್ರಾಣಿಗಳ ಕಾಟ ಕಡಿಮೆಯಾಗಿದೆ ಅನ್ನೋದು ರೈತರ ಮಾತು. ಆದ್ರೂ ಪ್ರಾಣಿಗಳನ್ನು ನಿಯಂತ್ರಣ ಮಾಡೋದು ಕಷ್ಟ, ಇದರಿಂದ ಲಕ್ಷಾಂತರ ರೂಪಾಯಿ ಆಲೂಗೆಡ್ಡೆ, ಟೊಮ್ಯಾಟೋ ಬೆಳೆ ಹಾಳಾಗುತ್ತಿದೆ. ಹಾಗಾಗಿ ಸಂಬಂಧಪಟ್ಟ ಇಲಾಖೆ ನಮ್ಮ ನೆರವಿಗೆ ಬರಬೇಕು ಅನ್ನೋದು ರೈತರ ಅಳಲು.

ಒಟ್ಟಾರೆ ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಅನ್ನೋ ರೀತಿ, ಸದಾ ಮಾತನಾಡುತ್ತಾ ಮಾತಿನ ಮಲ್ಲ, ಮಲ್ಲಿಯರು ಎನ್ನುವಂತಾಗಿದ್ದ ಆರ್​ಜೆಗಳಿಗೆ ತಮ್ಮ ಮಾತಿನಿಂದ, ರೈತರು ಬೆಳೆದ ಬೆಳೆಯನ್ನು ಕಾವಲು  ಕಾಯ್ತಿದೆ ಅನ್ನೋ ವಿಷಯ ಗೊತ್ತಾದ್ರೆ ಸಂತೋಷದಿಂದ ಮತ್ತಷ್ಟು ಹರಟೆ ಹೊಡೆಯುತ್ತಾ ಬೀಗೋದ್ರಲ್ಲಿ ಅನುಮಾನವಿಲ್ಲ! -ರಾಜೇಂದ್ರ ಸಿಂಹ