ಗುಡಿಸಲು ತೆರವು ವೇಳೆ.. ಬಡಿಗೆ, ದೊಣ್ಣೆಗಳಿಂದ ಅರಣ್ಯ ಸಿಬ್ಬಂದಿ ಮೇಲೆ ಹಲ್ಲೆ ಯತ್ನ

| Updated By: ಸಾಧು ಶ್ರೀನಾಥ್​

Updated on: Oct 23, 2020 | 11:30 AM

ಚಿಕ್ಕಮಗಳೂರು: ಗುಡಿಸಲು ತೆರವು ವೇಳೆ ಅರಣ್ಯ ಸಿಬ್ಬಂದಿ ಮೇಲೆ ಬಡಿಗೆ ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಂದ ಹಾಗೆ, ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೂವೆ ಗ್ರಾಮದಲ್ಲಿ 2 ದಿನಗಳ ಹಿಂದೆ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಈ ಜಾಗ ತಮ್ಮದೆಂದು ಹಲ್ಲೆಗೆ ಯತ್ನಿಸಿರುವ ಕುಟುಂಬಸ್ಥರ ವಿರುದ್ಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುಡಿಸಲು ತೆರವು ಮಾಡುತ್ತಿದ್ದ ವೇಳೆ ಅರಣ್ಯ ಸಿಬ್ಬಂದಿಗಳ ಮೇಲೆ ಕುಟುಂಬಸ್ಥರು ಬಡಿಗೆ ಮತ್ತು ದೊಣ್ಣೆಯಿಂದ ಹಲ್ಲೆಗೆ ಯತ್ನ […]

ಗುಡಿಸಲು ತೆರವು ವೇಳೆ.. ಬಡಿಗೆ, ದೊಣ್ಣೆಗಳಿಂದ ಅರಣ್ಯ ಸಿಬ್ಬಂದಿ ಮೇಲೆ ಹಲ್ಲೆ ಯತ್ನ
Follow us on

ಚಿಕ್ಕಮಗಳೂರು: ಗುಡಿಸಲು ತೆರವು ವೇಳೆ ಅರಣ್ಯ ಸಿಬ್ಬಂದಿ ಮೇಲೆ ಬಡಿಗೆ ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಂದ ಹಾಗೆ, ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೂವೆ ಗ್ರಾಮದಲ್ಲಿ 2 ದಿನಗಳ ಹಿಂದೆ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಈ ಜಾಗ ತಮ್ಮದೆಂದು ಹಲ್ಲೆಗೆ ಯತ್ನಿಸಿರುವ ಕುಟುಂಬಸ್ಥರ ವಿರುದ್ಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುಡಿಸಲು ತೆರವು ಮಾಡುತ್ತಿದ್ದ ವೇಳೆ ಅರಣ್ಯ ಸಿಬ್ಬಂದಿಗಳ ಮೇಲೆ ಕುಟುಂಬಸ್ಥರು ಬಡಿಗೆ ಮತ್ತು ದೊಣ್ಣೆಯಿಂದ ಹಲ್ಲೆಗೆ ಯತ್ನ ನಡೆಸಿದರು ಎಂದು ಹೇಳಲಾಗಿದೆ. ಗುಡಿಸಲುಗು ಅಕ್ರಮವಾಗಿ ಅರಣ್ಯ ವ್ಯಾಪ್ತಿಯಲ್ಲಿವೆ ಎಂಬುದು ಅಧಿಕಾರಿಗಳ ವಾದವಾದರೆ, ಈ ಜಾಗ ನಮ್ಮದು ಅನ್ನೋದು ಮನೆಯವರ ಪ್ರತಿವಾದವಾಗಿದೆ. ಈ ಹಿನ್ನೆಲೆಯಲ್ಲಿ ಮಾತಿನ ಚಕಮಕಿ ಸಂಭವಿಸಿದ್ದು ಈ ನಡುವೆ ಹಲ್ಲೆಗೆ ಯತ್ನ ನಡೆದಿದೆ ಎಂದು ತಿಳಿದುಬಂದಿದೆ.