ಎರಡು ತಲೆ ಹಾವು ಮಾರಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದ ಖದೀಮರು

|

Updated on: Feb 13, 2020 | 2:30 PM

ಕೊಡಗು: ಎರಡು ತಲೆ ಹಾವು ಮಾರಾಟಕ್ಕೆ ಯತ್ನಿಸಿದ ಐವರನ್ನು ಅರಣ್ಯ ಸಂಚಾರಿದಳ ಪೊಲೀಸರು ಬಂಧಿಸಿದ್ದಾರೆ. 2 ಕೋಟಿ ಬೆಲೆ ಬಾಳುವ ಎರಡು ತಲೆ ಹಾವನ್ನು ಮಾರಾಟ ಮಾಡಲು ಆಂಧ್ರಪ್ರದೇಶದಿಂದ ಕೇರಳಕ್ಕೆ ಗೋಣಿಕೊಪ್ಪ ಮಾರ್ಗವಾಗಿ ಸಾಗಿಸುತ್ತಿದ್ದ ವೇಳೆ ವಿರಾಜಪೇಟೆ ತಾಲೂಕಿನ ಚೆನ್ನಂಗೊಲ್ಲಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ಮುಲ್ಲ ಮೆಹಬೂಬ್ ವಲೀ, ಶೇಕ್ ಮುಲ್ಲ ಚಾಂದ್ ಪಾಷ, ಎಸ್. ಫಯಾಜ್, ಬೋಯ ರಂಗಸ್ವಾಮಿ, ಶೇಕ್ ಪೆದ್ದಮೆಹಬೂಬ್ ಬಾಷ ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಎರಡು ತಲೆ ಹಾವು ಸೇರಿದಂತೆ ಮಾರುತಿ […]

ಎರಡು ತಲೆ ಹಾವು ಮಾರಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದ ಖದೀಮರು
Follow us on

ಕೊಡಗು: ಎರಡು ತಲೆ ಹಾವು ಮಾರಾಟಕ್ಕೆ ಯತ್ನಿಸಿದ ಐವರನ್ನು ಅರಣ್ಯ ಸಂಚಾರಿದಳ ಪೊಲೀಸರು ಬಂಧಿಸಿದ್ದಾರೆ. 2 ಕೋಟಿ ಬೆಲೆ ಬಾಳುವ ಎರಡು ತಲೆ ಹಾವನ್ನು ಮಾರಾಟ ಮಾಡಲು ಆಂಧ್ರಪ್ರದೇಶದಿಂದ ಕೇರಳಕ್ಕೆ ಗೋಣಿಕೊಪ್ಪ ಮಾರ್ಗವಾಗಿ ಸಾಗಿಸುತ್ತಿದ್ದ ವೇಳೆ ವಿರಾಜಪೇಟೆ ತಾಲೂಕಿನ ಚೆನ್ನಂಗೊಲ್ಲಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶ ಮೂಲದ ಮುಲ್ಲ ಮೆಹಬೂಬ್ ವಲೀ, ಶೇಕ್ ಮುಲ್ಲ ಚಾಂದ್ ಪಾಷ, ಎಸ್. ಫಯಾಜ್, ಬೋಯ ರಂಗಸ್ವಾಮಿ, ಶೇಕ್ ಪೆದ್ದಮೆಹಬೂಬ್ ಬಾಷ ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಎರಡು ತಲೆ ಹಾವು ಸೇರಿದಂತೆ ಮಾರುತಿ ಶಿಫ್ಟ್ ಡಿಸೈರ್ ಕಾರು ವಶಕ್ಕೆ ಪಡೆಯಲಾಗಿದೆ.