ನೀರಿನ ಒಲೆ ಹಚ್ಚುವ ವೇಳೆ ಬೆಂಕಿ: ಪೇದೆ, ಪತ್ನಿ, ಪುತ್ರನಿಗೆ ಗಾಯ
ಮೈಸೂರು: ತುಸು ಹೆಚ್ಚು ಜಾಗರೂಕತೆಯಿಂದ ಇರಬೇಕಾದ ಪೊಲೀಸರ ಮನೆಯಲ್ಲಿಯೇ ಬೆಂಕಿ ಅವಘಡ ಸಂಭವಿಸಿದೆ. ಮೈಸೂರಿನ ಸಿಎಆರ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ಪೇದೆ ರೇಣುಕಾ ಸ್ವಾಮಿ ಮನೆಯಲ್ಲಿ ಈ ಆಕಸ್ಮಿಕ ನಡೆದಿದೆ. ಘಟನೆಯಲ್ಲಿ ಕುಟುಂಬದ ಮೂವರಿಗೆ ಸುಟ್ಟಗಾಯಗಳಾಗಿವೆ. ಕೆ.ಆರ್. ನಗರದ ಈಶ್ವರನಗರ ಬಡಾವಣೆಯಲ್ಲಿ ಇಂದು ಬೆಳಗ್ಗೆ ನೀರಿನ ಒಲೆ ಹಚ್ಚುವ ವೇಳೆ ಹೀಗಾಗಿದೆ. ಪೇದೆ ರೇಣುಕಾ ಸ್ವಾಮಿ (೪೬), ಪತ್ನಿ ಪುಷ್ಪಲತಾ (೩೫) ಮತ್ತು ಪುತ್ರ ತೇಜಸ್ (೧೪) ಗೆ ಗಾಯಗಳಾಗಿವೆ. ಮೊದಲು ರೇಣುಕಾ ಸ್ವಾಮಿಗೆ ಬೆಂಕಿ […]
ಮೈಸೂರು: ತುಸು ಹೆಚ್ಚು ಜಾಗರೂಕತೆಯಿಂದ ಇರಬೇಕಾದ ಪೊಲೀಸರ ಮನೆಯಲ್ಲಿಯೇ ಬೆಂಕಿ ಅವಘಡ ಸಂಭವಿಸಿದೆ. ಮೈಸೂರಿನ ಸಿಎಆರ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ಪೇದೆ ರೇಣುಕಾ ಸ್ವಾಮಿ ಮನೆಯಲ್ಲಿ ಈ ಆಕಸ್ಮಿಕ ನಡೆದಿದೆ.
ಘಟನೆಯಲ್ಲಿ ಕುಟುಂಬದ ಮೂವರಿಗೆ ಸುಟ್ಟಗಾಯಗಳಾಗಿವೆ. ಕೆ.ಆರ್. ನಗರದ ಈಶ್ವರನಗರ ಬಡಾವಣೆಯಲ್ಲಿ ಇಂದು ಬೆಳಗ್ಗೆ ನೀರಿನ ಒಲೆ ಹಚ್ಚುವ ವೇಳೆ ಹೀಗಾಗಿದೆ.
ಪೇದೆ ರೇಣುಕಾ ಸ್ವಾಮಿ (೪೬), ಪತ್ನಿ ಪುಷ್ಪಲತಾ (೩೫) ಮತ್ತು ಪುತ್ರ ತೇಜಸ್ (೧೪) ಗೆ ಗಾಯಗಳಾಗಿವೆ. ಮೊದಲು ರೇಣುಕಾ ಸ್ವಾಮಿಗೆ ಬೆಂಕಿ ತಗುಲಿದೆ. ಅದನ್ನ ಆರಿಸಲು ಹೋದ ಪತ್ನಿ ಮತ್ತು ಮಗನಿಗೂ ಗಾಯಗಳಾಗಿವೆ.
ಮೈಸೂರಿನ ಕೆ.ಆರ್.ಆಸ್ಪತ್ರೆಯ ಸುಟ್ಟಗಾಯ ವಿಭಾಗದಲ್ಲಿ ಗಾಯಾಳುಗಳಿಗೆ ಮೊದಲು ಚಿಕಿತ್ಸೆ ನೀಡಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕೆ.ಆರ್.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Published On - 11:57 am, Thu, 13 February 20