10 ಕಾಡಾನೆ ಓಡಿಸುವ ವೇಳೆ ಗುಂಡು ತಗುಲಿ ಫಾರೆಸ್ಟ್ ವಾಚರ್ ಸಾವು, ಎಲ್ಲಿ?

|

Updated on: Aug 07, 2020 | 7:29 AM

ಮಂಡ್ಯ: ಕಾಡಾನೆ ಓಡಿಸುವ ವೇಳೆ ಬಂದೂಕಿನಿಂದ ಹಾರಿದ ಗುಂಡು ತಗುಲಿ ಫಾರೆಸ್ಟ್ ವಾಚರ್ ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕೂನನಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಶಿವನಂಜಯ್ಯ(30) ಸಾವಿಗೀಡಾದ ವಾಚರ್. ಶಿಂಷಾ ಅರಣ್ಯ‌ ಪ್ರದೇಶದಿಂದ 10 ಕಾಡಾನೆ ಹಿಂಡು ಧುತ್ತನೇ ಎದುರಾದಾಗ.. ಫಾರೆಸ್ಟ್ ಗಾರ್ಡ್ ಪ್ರಕಾಶ್ ಅಡಚದ ಎಂಬುವರ ಬಂದೂಕಿನಿಂದ ಗುಂಡು ಆಕಸ್ಮಿಕವಾಗಿ ಹಾರಿದೆ. ಕೂನನಕೊಪ್ಪಲು ಗ್ರಾಮದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳ ಹಿಂಡನ್ನು ಓಡಿಸುವ ವೇಳೆ‌ ಈ ದುರ್ಘಟನೆ ನಡೆದಿದೆ. ಶಿಂಷಾ ಅರಣ್ಯ‌ ಪ್ರದೇಶದಿಂದ 10 ಕಾಡಾನೆಗಳ […]

10 ಕಾಡಾನೆ ಓಡಿಸುವ ವೇಳೆ ಗುಂಡು ತಗುಲಿ ಫಾರೆಸ್ಟ್ ವಾಚರ್ ಸಾವು, ಎಲ್ಲಿ?
Follow us on

ಮಂಡ್ಯ: ಕಾಡಾನೆ ಓಡಿಸುವ ವೇಳೆ ಬಂದೂಕಿನಿಂದ ಹಾರಿದ ಗುಂಡು ತಗುಲಿ ಫಾರೆಸ್ಟ್ ವಾಚರ್ ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕೂನನಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಶಿವನಂಜಯ್ಯ(30) ಸಾವಿಗೀಡಾದ ವಾಚರ್.

ಶಿಂಷಾ ಅರಣ್ಯ‌ ಪ್ರದೇಶದಿಂದ 10 ಕಾಡಾನೆ ಹಿಂಡು ಧುತ್ತನೇ ಎದುರಾದಾಗ..
ಫಾರೆಸ್ಟ್ ಗಾರ್ಡ್ ಪ್ರಕಾಶ್ ಅಡಚದ ಎಂಬುವರ ಬಂದೂಕಿನಿಂದ ಗುಂಡು ಆಕಸ್ಮಿಕವಾಗಿ ಹಾರಿದೆ. ಕೂನನಕೊಪ್ಪಲು ಗ್ರಾಮದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳ ಹಿಂಡನ್ನು ಓಡಿಸುವ ವೇಳೆ‌ ಈ ದುರ್ಘಟನೆ ನಡೆದಿದೆ. ಶಿಂಷಾ ಅರಣ್ಯ‌ ಪ್ರದೇಶದಿಂದ 10 ಕಾಡಾನೆಗಳ ಹಿಂಡು ಬಂದಿದ್ದವು.

ಆನೆಗಳನ್ನು ಬಂದೂಕು ಶಬ್ದದಿಂದ ಬೆದರಿಸಿ ವಾಪಾಸ್ ಕಾಡಿಗಟ್ಟಲು ಸಿಬ್ಬಂದಿ ಮುಂದಾದರು. ಜನರ ಕಿರುಚಾಟಕ್ಕೆ ಹೆದರಿದ ಆನೆಗಳು ಸಿಬ್ಬಂದಿಯ ಮೇಲೆ ದಾಳಿಗೆ ಮುಂದಾದವು. ಭಯದಿಂದ ಓಡುವ ವೇಳೆ ಫಾರೆಸ್ಟ್ ಗಾರ್ಡ್ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿದೆ. ಆಗ ಶಿವನಂಜಯ್ಯ ಬೆನ್ನಿಗೆ ಗುಂಡು ತಗುಲಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಳವಳ್ಳಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 7:29 am, Fri, 7 August 20