ಮೈಸೂರು: ಕಬಿನಿ ಜಲಾಶಯದಲ್ಲೀಗ ಫಾರಿನ್ ಗೆಸ್ಟ್ಗಳ ಮೋಡಿ ಜೋರಾಗಿದೆ. ತಿಳಿನೀರಲ್ಲಿ ಆಡ್ತಾ, ಬಾನಲ್ಲಿ ಹಾರಾಡ್ತಾ, ನೀರಲ್ಲಿ ಮುಳುಗೇಳ್ತಾ ಮಸ್ತಿ ಮಾಡ್ತಿದ್ದಾರೆ. ಅವ್ರ ಚೆಲ್ಲಾಟ ನೋಡೋಕಂತ್ಲೇ ಪ್ರವಾಸಿಗರು ಸಹ ಬರ್ತಿದ್ದಾರೆ. ತಿಳಿಗಾಳಿಗೆ ಮೆಲ್ಲನೆ ಅಪ್ಪಳಿಸೋ ಅಲೆ.. ತಂಗಾಳಿಯ ಸ್ಪರ್ಶ.. ತಮ್ಮದೇ ಲೋಕದಲ್ಲಿ ತೇಲಾಡೋ ಬಾನಾಡಿಗಳು. ಒಮ್ಮೆ ದಡದಲ್ಲಿ, ಮತ್ತೊಮ್ಮೆ ನೀರಲ್ಲಿ, ಮಗದೊಮ್ಮೆ ಬಾನಲ್ಲಿ. ಎಲ್ಲೆಲ್ಲೂ ಈ ಚಿಲಿಪಿಲಿಗಳದ್ದೇ ಕಲರವ. ಪಕ್ಷಿಲೋಕದ್ದೇ ತುಂಟಾಟ.
ಬಾನಾಡಿಗಳ ಕಲರವ ಜೋರು:
ಪಕ್ಷಿಲೋಕದ ನೋಟವೇ ಬಲುಚೆಂದ:
ಇನ್ನು ಈ ಬಾರ್ ಹೆಡ್ ಗೂಸ್ ಪಕ್ಷಿಗಳು ವಲಸೆ ಹಕ್ಕಿಗಳಾಗಿದ್ದು ನೇಪಾಳ, ಮಂಗೋಲಿಯಾ, ಸೈಬಿರಿಯಾ ದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಇವುಗಳು ಸಂತಾನೋತ್ಪತ್ತಿಗಾಗಿ ನದಿಗಳು ಹಾಗೂ ಜಲಾಶಯದ ಹಿನ್ನೀರನ್ನ ಆಯ್ಕೆ ಮಾಡಿಕೊಳ್ಳುತ್ತವೆ. ಮೂರ್ನಾಲ್ಕು ತಿಂಗಳು ಕಾಲ ವಲಸೆ ಬಂದು ಕಬಿನಿ ಡ್ಯಾಂ ಬಳಿಯೇ ಬೀಡು ಬಿಟ್ಟಿರುತ್ತವೆ. ಹೊಲ ಗದ್ದೆಗಳಲ್ಲಿ ಆಹಾರ ಸೇವಿಸಿ ಸಂತಾನೋತ್ಪತ್ತಿ ಮುಗಿಸಿ ವಾಪಸ್ಸಾಗುತ್ತವೆ. ಪಕ್ಷಿಲೋಕದ ನೋಟವೇ ಬಲುಚೆಂದ. ಅದ್ರಲ್ಲೂ ದೂರದೂರಿಂದ ಹಿಂಡು ಹಿಂಡಾಗಿ ಬರೋ ಈ ಪಕ್ಷಿಗಳು ನೋಡೋ ಕಂಗಳಿಗೆ ಖುಷಿ ಕೊಡುತ್ತವೆ. ಹಾಗೇ ಪ್ರಕೃತಿ ಅಂದವನ್ನ ಮತ್ತಷ್ಟು ಹೆಚ್ಚಿಸುತ್ತವೆ.
Published On - 1:33 pm, Sun, 19 January 20