ದಸರಾ: ಚಾಮುಂಡಿ ಬೆಟ್ಟ, ಅರಮನೆಯಲ್ಲಿ ಪೂಜೆ ಮಾಡಿ.. ಬೇರೇನೂ ಬೇಡ -ಸಿದ್ದರಾಮಯ್ಯ ಸಲಹೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2020ರ ಭಾಗವಾಗಿ ಬರೀ ಚಾಮುಂಡಿ ಬೆಟ್ಟ ಮತ್ತು ಅರಮನೆಯಲ್ಲಿ ಪೂಜೆ ಮಾಡಿ. ಬೇರೆ ಏನೂ ಮಾಡುವುದು ಬೇಡ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಲಹೆ ಕೊಟ್ಟಿದ್ದಾರೆ. ಸರ್ಕಾರವೇ ತುಪ್ಪು ಸುರಿದಂತೆ ಆಗುತ್ತೆ.. ನನ್ನ ಪ್ರಕಾರ ಈ ವರ್ಷ ಯಾವುದೇ ಕಾರ್ಯಕ್ರಮ ಮಾಡಬಾರದು. ಅರಮನೆ ಹಾಗೂ ಚಾಮುಂಡಿ ಬೆಟ್ಟದಲ್ಲಿ ಪುರೋಹಿತರಿಂದ ಪೂಜೆ ಮಾಡಿಸಬೇಕು. ಯಾಕೆಂದರೆ, ಜನರನ್ನು ಕಂಟ್ರೋಲ್ ಮಾಡೋದು ಕಷ್ಟ. ಜೊತೆಗೆ, ಜಂಬೂ ಸವಾರಿಯೂ ಇರಬಾರದು ಎಂದು ಹೇಳಿದರು. ದಸರಾ ವೇಳೆ […]

ದಸರಾ: ಚಾಮುಂಡಿ ಬೆಟ್ಟ, ಅರಮನೆಯಲ್ಲಿ ಪೂಜೆ ಮಾಡಿ.. ಬೇರೇನೂ ಬೇಡ -ಸಿದ್ದರಾಮಯ್ಯ ಸಲಹೆ
Edited By:

Updated on: Oct 16, 2020 | 4:55 PM

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2020ರ ಭಾಗವಾಗಿ ಬರೀ ಚಾಮುಂಡಿ ಬೆಟ್ಟ ಮತ್ತು ಅರಮನೆಯಲ್ಲಿ ಪೂಜೆ ಮಾಡಿ. ಬೇರೆ ಏನೂ ಮಾಡುವುದು ಬೇಡ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಲಹೆ ಕೊಟ್ಟಿದ್ದಾರೆ.

ಸರ್ಕಾರವೇ ತುಪ್ಪು ಸುರಿದಂತೆ ಆಗುತ್ತೆ..
ನನ್ನ ಪ್ರಕಾರ ಈ ವರ್ಷ ಯಾವುದೇ ಕಾರ್ಯಕ್ರಮ ಮಾಡಬಾರದು. ಅರಮನೆ ಹಾಗೂ ಚಾಮುಂಡಿ ಬೆಟ್ಟದಲ್ಲಿ ಪುರೋಹಿತರಿಂದ ಪೂಜೆ ಮಾಡಿಸಬೇಕು. ಯಾಕೆಂದರೆ, ಜನರನ್ನು ಕಂಟ್ರೋಲ್ ಮಾಡೋದು ಕಷ್ಟ. ಜೊತೆಗೆ, ಜಂಬೂ ಸವಾರಿಯೂ ಇರಬಾರದು ಎಂದು ಹೇಳಿದರು.

ದಸರಾ ವೇಳೆ ಜನರನ್ನು ಸೇರಿಸಿದರೆ ಮೈಸೂರಿನಲ್ಲಿ ಉರಿಯುತ್ತಿರುವ ಕೊರೊನಾ ಬೆಂಕಿಗೆ ಸರ್ಕಾರವೇ ತುಪ್ಪು ಸುರಿದಂತೆ ಆಗುತ್ತೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

Published On - 4:31 pm, Tue, 6 October 20