
ದಕ್ಷಿಣ ಕನ್ನಡ: ದೇವಸ್ಥಾನದ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಮೊಯಿದ್ದೀನ್ ಬಾವಾಗೆ ಬೆದರಿಕೆ ಕರೆ ಬಂದಿದೆ. ಮುಂಬೈನಿಂದ ಯಾರು ಅಪರಿಚಿತರು ಕರೆ ಮಾಡಿ ಮೊಯಿದ್ದೀನ್ ಬಾವಾಗೆ ಬೆದರಿಕೆ ಒಡ್ಡಿದ್ದಾರೆ.
ಈ ಹಿನ್ನೆಲೆಯಲ್ಲಿ ಕೆಲ ಕಿಡಿಗೇಡಿಗಳು ಮುಬೈನಿಂದ ಕರೆ ಮಾಡಿ ಮೊಯಿದ್ದೀನ್ ಬಾವಾಗೆ ಬೆದರಿಕೆ ಹಾಕಿದ್ದಾರೆ. ದೇವಸ್ಥಾನದಲ್ಲಿ ನೀವು ಯಾಕೆ ಕೊಪ್ಪರಿಗೆ ಇಟ್ಟಿದ್ದು? ಇದು ನೆಹರೂ ದೇಶವಲ್ಲ, ಮೋದಿಯ ದೇಶ. ನಿನಗೆ ಎಚ್ಚರಿಕೆ ಎಂದು ಬೆದರಿಕೆ ಒಡ್ಡಿದ್ದಾರೆ. ಜೊತೆಗೆ, ದನ ತಿಂದು ಹೀಗೆಲ್ಲಾ ದೇವಸ್ಥಾನಕ್ಕೆ ಹೋದ್ರೆ ಹುಷಾರ್ ಎಂದು ಬಾವಾಗೆ ಕರೆ ಮಾಡಿ ಕಿಡಿಗೇಡಿಗಳು ತುಳುವಿನಲ್ಲಿ ಎಚ್ಚರಿಕೆ ನೀಡಿದ್ದಾರೆ.