AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋವಿಡ್ ಸೋಂಕು ತಗುಲಿಸಿ, ನಂತರ ಲಸಿಕೆ ಪ್ರಯೋಗ: ಅಪಾಯಕಾರಿ ಪ್ರಯೋಗಕ್ಕೆ ಮುಂದಾದ ಬ್ರಿಟನ್​

ಇಡೀ ಜಗತ್ತು ಕೊರೊನಾದ ಆರ್ಭಟದಿಂದ ನಲುಗಿ ಹೋಗಿದ್ದರೆ ಇತ್ತ ಬ್ರಿಟಿಷ್ ವಿಜ್ಞಾನಿಗಳು ವೈರಸ್​ನ ಬಗ್ಗುಬಡಿಯಲು ಕೊರೊನಾ ಲಸಿಕೆ ಪ್ರಯೋಗಕ್ಕೆ ಮುಂದಾಗಿದ್ದಾರೆ. ಹೌದು, ಆರೋಗ್ಯವಂತ ವ್ಯಕ್ತಿಗಳಿಗೆ ಮೊದಲು ಕೊರೊನಾ ಸೋಂಕು ತಗುಲಿಸಿ ನಂತರ ಅವರ ಮೇಲೆ ಲಸಿಕೆ ಪ್ರಯೋಗ ಮಾಡಲು ವಿಜ್ಞಾನಿಗಳು ಮುಂದಾಗಿದ್ದಾರೆ. Human Challenge Covid Trial: ಜಗತ್ತಿನಲ್ಲಿ, ಇದೇ ಮೊದಲ ಬಾರಿ ಇಂಥ ಪ್ರಯತ್ನ ನಡೆಯುತ್ತಿದೆ. ಅಂದ ಹಾಗೆ, ಈ ಸೋಂಕು ತಗುಲಿಸಿ ಚಿಕಿತ್ಸೆ ಲಸಿಕೆ ಪರೀಕ್ಷೆ ನಡೆಸುವ ಪ್ರಯೋಗ ಜನವರಿಯಿಂದ ಆರಂಭಿಸಲು ಯೋಜನೆ ರೂಪಿಸಲಾಗುತ್ತಿದೆ. […]

ಕೋವಿಡ್ ಸೋಂಕು ತಗುಲಿಸಿ, ನಂತರ ಲಸಿಕೆ ಪ್ರಯೋಗ: ಅಪಾಯಕಾರಿ ಪ್ರಯೋಗಕ್ಕೆ ಮುಂದಾದ ಬ್ರಿಟನ್​
KUSHAL V
| Edited By: ಸಾಧು ಶ್ರೀನಾಥ್​|

Updated on: Oct 21, 2020 | 12:37 PM

Share

ಇಡೀ ಜಗತ್ತು ಕೊರೊನಾದ ಆರ್ಭಟದಿಂದ ನಲುಗಿ ಹೋಗಿದ್ದರೆ ಇತ್ತ ಬ್ರಿಟಿಷ್ ವಿಜ್ಞಾನಿಗಳು ವೈರಸ್​ನ ಬಗ್ಗುಬಡಿಯಲು ಕೊರೊನಾ ಲಸಿಕೆ ಪ್ರಯೋಗಕ್ಕೆ ಮುಂದಾಗಿದ್ದಾರೆ. ಹೌದು, ಆರೋಗ್ಯವಂತ ವ್ಯಕ್ತಿಗಳಿಗೆ ಮೊದಲು ಕೊರೊನಾ ಸೋಂಕು ತಗುಲಿಸಿ ನಂತರ ಅವರ ಮೇಲೆ ಲಸಿಕೆ ಪ್ರಯೋಗ ಮಾಡಲು ವಿಜ್ಞಾನಿಗಳು ಮುಂದಾಗಿದ್ದಾರೆ.

Human Challenge Covid Trial: ಜಗತ್ತಿನಲ್ಲಿ, ಇದೇ ಮೊದಲ ಬಾರಿ ಇಂಥ ಪ್ರಯತ್ನ ನಡೆಯುತ್ತಿದೆ. ಅಂದ ಹಾಗೆ, ಈ ಸೋಂಕು ತಗುಲಿಸಿ ಚಿಕಿತ್ಸೆ ಲಸಿಕೆ ಪರೀಕ್ಷೆ ನಡೆಸುವ ಪ್ರಯೋಗ ಜನವರಿಯಿಂದ ಆರಂಭಿಸಲು ಯೋಜನೆ ರೂಪಿಸಲಾಗುತ್ತಿದೆ. ಇದರ ಅಂಗವಾಗಿ, ಪ್ರಯೋಗಕ್ಕೆ ಒಳಗಾಗುವ ವ್ಯಕ್ತಿಗಳ ಮೂಗಿನೊಳಗೆ ವೈರಸ್ ಹರಿಯ ಬಿಡಲಾಗುತ್ತದೆ. ಬಳಿಕ, ಸೋಂಕಿತರನ್ನು ಲಂಡನ್‌ನ ರಾಯಲ್‌ ಫ್ರೀ ಹಾಸ್ಪಿಟಲ್‌ನಲ್ಲಿ ಕ್ವಾರಂಟೈನ್‌ ಮಾಡಲಾಗುತ್ತದೆ. ಜೊತೆಗೆ, ನಿತ್ಯವೂ ಕೆಲವು ಗಂಟೆಗಳ ಅಂತರದಲ್ಲಿ ಸೋಂಕಿತರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ಇದೇ ರೀತಿ, ಎರಡರಿಂದ ಮೂರು ವಾರಗಳವರೆಗೂ ಪರೀಕ್ಷೆ ಮುಂದುವರಿಸಲಾಗುತ್ತದೆ. ಬಳಿಕ ಲಸಿಕೆ ಬೀರುವ ಪರಿಣಾಮ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ ಎಂಬ ಮಾಹಿತಿ ಸಿಕ್ಕಿದೆ. ಈ ‘ಹ್ಯೂಮನ್ ಚಾಲೆಂಜ್‌ ಟ್ರಯಲ್‌’ ಬಗ್ಗೆ ಅಮೇರಿಕಾ ಆತಂಕ ವ್ಯಕ್ತಪಡಿಸಿದೆ. ಇದೊಂದು ಅತ್ಯಂತ ಅಪಾಯಕಾರಿ ಪ್ರಯೋಗ ಎಂದು ಅಮೆರಿಕದ ಸಂಶೋಧಕರು ಹೇಳಿದ್ದಾರೆ.

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ