ವಿಜಯೇಂದ್ರ ಎಲ್ಲಿ ಮಲಗುತ್ತಾರೆ, ಎಲ್ಲಿ ಕುಡೀತಾರೆ, ಯಾರ ಮನೆಯಲ್ಲಿ ಇರ್ತಾರೆ ಅಂತಾ ನಮಗೂ ಗೊತ್ತು -ಕಾಶಪ್ಪನವರ್​ ಕೌಂಟರ್​

|

Updated on: Feb 13, 2021 | 8:46 PM

Vijayanand Kashappanavar: ನಾನೂ ಹಗುರವಾಗಿ ಮಾತನಾಡಬಹುದು ಎಂದ ಕಾಶಪ್ಪನವರ್​​ ನನಗೂ ಇವರು ಎಲ್ಲಿ ಮಲಗುತ್ತಾರೆ, ಎಲ್ಲಿ ಕುಡಿಯುತ್ತಾರೆ, ಯಾರ ಮನೆಯಲ್ಲಿ ಇರುತ್ತಾರೆ ಎಂದು ಗೊತ್ತು. ಆದರೆ, ನಾನು ಅವರಷ್ಟು ಕೆಳಮಟ್ಟಕ್ಕೆ ಇಳಿದು ಮಾತಾಡುವವನಲ್ಲ ಎಂದು ಹೇಳಿದರು.

ವಿಜಯೇಂದ್ರ ಎಲ್ಲಿ ಮಲಗುತ್ತಾರೆ, ಎಲ್ಲಿ ಕುಡೀತಾರೆ, ಯಾರ ಮನೆಯಲ್ಲಿ ಇರ್ತಾರೆ ಅಂತಾ ನಮಗೂ ಗೊತ್ತು -ಕಾಶಪ್ಪನವರ್​ ಕೌಂಟರ್​
ವಿಜಯಾನಂದ ಕಾಶಪ್ಪನವರ್​
Follow us on

ತುಮಕೂರು: ಬಾರಿನಲ್ಲಿ ಕುಳಿತು ಗಲಾಟೆ ಮಾಡಿಕೊಂಡನಲ್ಲ ಅವನಾ? ಎಂಬ ಸಿಎಂ ಪುತ್ರ ವಿಜಯೇಂದ್ರ ಹೇಳಿಕೆಗೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್​ ಕೌಂಟರ್​ ಕೊಟ್ಟಿದ್ದಾರೆ. ವೈಯಕ್ತಿಕ ವಿಚಾರಕ್ಕೆ ವ್ಯಂಗ್ಯವಾಗಿ ಮಾತಾಡಿ ದೊಡ್ಡವರಾಗಲ್ಲ. ಮುಖ್ಯಮಂತ್ರಿ ಮಗ ಬಿ.ವೈ.ವಿಜಯೇಂದ್ರ ಶಾಸಕರೂ ಆಗಿಲ್ಲ, ಇನ್ನೂ ಏನು ಆಗಿಲ್ಲ. ನನಗಾದರೂ ಸ್ಥಾನಮಾನ ವಿದೆ, ಇವರಿಗೆ ಏನಿದೆ ಯೋಗ್ಯತೆ? ಎಂದು ಜಿಲ್ಲೆಯ ನಂದಿಹಳ್ಳಿ ಬಳಿ ಕಾಶಪ್ಪನವರ್ ಖಾರವಾಗಿ ಪ್ರಶ್ನಿಸಿದ್ದಾರೆ.

ನಾನೂ ಹಗುರವಾಗಿ ಮಾತನಾಡಬಹುದು ಎಂದ ಕಾಶಪ್ಪನವರ್​​ ನನಗೂ ಇವರು ಎಲ್ಲಿ ಮಲಗುತ್ತಾರೆ, ಎಲ್ಲಿ ಕುಡಿಯುತ್ತಾರೆ, ಯಾರ ಮನೆಯಲ್ಲಿ ಇರುತ್ತಾರೆ ಎಂದು ಗೊತ್ತು. ಆದರೆ, ನಾನು ಅವರಷ್ಟು ಕೆಳಮಟ್ಟಕ್ಕೆ ಇಳಿದು ಮಾತಾಡುವವನಲ್ಲ ಎಂದು ಹೇಳಿದರು.

ಈ ರಾಜ್ಯದಲ್ಲಿ ಅವರಿಗೆಷ್ಟು ಗೌರವವಿದೆ, ಅದಕ್ಕಿಂತ ಹೆಚ್ಚು ನಮ್ಮ ಮನೆತನಕ್ಕಿದೆ. ಸಿಎಂಗೆ ನಾವು ಬೆಲೆ ಕೊಡ್ತಿವಿ. ನಮ್ಮ ಸಮುದಾಯದಿಂದ 15 ಶಾಸಕರು ಇದ್ದಾರೆ. ಯಡಿಯೂರಪ್ಪ ದೊಡ್ಡ ನಾಯಕರು, ಅವರ ಬಗ್ಗೆ ಗೌರವವಿದೆ. ನಾಳೆ ಬೆಳೆಯುವಂತ ನಾಯಕ ಈ ರೀತಿ ವ್ಯಂಗ್ಯವಾಗಿ ಹೇಳಿಕೆ ನೀಡಬಾರದು. ಈ ರಾಜ್ಯದಲ್ಲಿ ಕಾಶಪನವರ್ ಅಂದರೆ ಯಾರು ಅಂತಾ ಜನರನ್ನು ಕೇಳಿ ಹೇಳ್ತಾರೆ ವಿಜಯೇಂದ್ರವರೇ ಎಂದು ಮಾಜಿ ಶಾಸಕ ಜಬರ್​ದಸ್ತ್​ ಕೌಂಟರ್​ ಕೊಟ್ಟರು.

ಹಗುರವಾಗಿ ಮಾತನಾಡಿದ ತಕ್ಷಣ ಯಾರೂ ದೊಡ್ಡವರು ಆಗಲ್ಲ. ಹಗುರತನ ಮಾತಾಡಿ ನಿಮ್ಮ ಗೌರವ ಕಳೆದುಕೊಳ್ಳಬೇಡಿ. ನನಗೂ ನಿಮ್ಮ ವೈಯಕ್ತಿಕ ವಿಚಾರಗಳು ಬಹಳಷ್ಟು ಗೊತ್ತಿವೆ. ಆದರೆ, ನಾನು ಚಿಲ್ಲರೆಗಿರಿ ಮಾಡೋಕೆ ಹೋಗಲ್ಲ. ಸಮಯ ಬಂದಾಗ ಬಾಯಿಬಿಟ್ಟರೇ ಎಲ್ಲವನ್ನೂ ಬಿಚ್ಚಿಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ವಿಜಯಾನಂದ ಕಾಶಪ್ಪನವರ್ ಅಂದ್ರೆ ಯಾರು? ಬಾರಲ್ಲಿ ಗಲಾಟೆ ಮಾಡಿಕೊಂಡನಲ್ಲ ಅವನಾ? -ವಿಜಯೇಂದ್ರ ಟಾಂಗ್​