AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Accident ಕಂಟೇನರ್ ಲಾರಿ​ಗೆ ಕಾರು ಡಿಕ್ಕಿ: ಮದುವೆಗೆಂದು ಹೊರಟ ಅಬಕಾರಿ ಇಲಾಖೆ SI ತಲುಪಿದ್ದು ಮಾತ್ರ ಮಸಣಕ್ಕೆ

Accident: ಕಂಟೇನರ್ ಲಾರಿ​ಗೆ ಕಾರು ಡಿಕ್ಕಿಯಾದ ಪರಿಣಾಮ ಅಬಕಾರಿ ಇಲಾಖೆ SI ಸೇರಿದಂತೆ ನಾಲ್ವರು ಸ್ನೇಹಿತರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದ ಹೊರವಲಯದಲ್ಲಿ ನಡೆದಿದೆ. ಚಲಿಸುತ್ತಿದ್ದ ಕಂಟೇನರ್​ ಲಾರಿಗೆ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದೆ.

Accident ಕಂಟೇನರ್ ಲಾರಿ​ಗೆ ಕಾರು ಡಿಕ್ಕಿ: ಮದುವೆಗೆಂದು ಹೊರಟ ಅಬಕಾರಿ ಇಲಾಖೆ SI ತಲುಪಿದ್ದು ಮಾತ್ರ  ಮಸಣಕ್ಕೆ
ಅಪಘಾತದ ಭೀಕರ ದೃಶ್ಯ (ಎಡ); ಮೃತ ಅಬಕಾರಿ ಇಲಾಖೆ SI ಚೇತನ್​ (ಬಲ)
KUSHAL V
|

Updated on:Feb 13, 2021 | 9:22 PM

Share

ಹಾಸನ: ಕಂಟೇನರ್ ಲಾರಿ​ಗೆ ಕಾರು ಡಿಕ್ಕಿಯಾದ ಪರಿಣಾಮ ಅಬಕಾರಿ ಇಲಾಖೆ SI ಸೇರಿದಂತೆ ನಾಲ್ವರು ಸ್ನೇಹಿತರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದ ಹೊರವಲಯದಲ್ಲಿ ನಡೆದಿದೆ. ಚಲಿಸುತ್ತಿದ್ದ ಕಂಟೇನರ್​ ಲಾರಿಗೆ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದೆ. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮುಂಜಾನೆ 4ರ ಸುಮಾರಿಗೆ ದುರಂತ ಸಂಭವಿಸಿದೆ.

ಕಾರಿನಲ್ಲಿದ್ದ ನಾಲ್ವರು ಗೆಳೆಯರು ಬೆಂಗಳೂರು ಮೂಲದವರು. ಮೃತ ಸ್ನೇಹಿತರನ್ನು ಅಬಕಾರಿ ಇಲಾಖೆ SI ಚೇತನ್(29), ವಿಕ್ರಂ(28), ಮಂಜುನಾಥ(29) ಹಾಗೂ ಅಭಿಷೇಕ್(29) ಎಂದು ಗುರುತಿಸಲಾಗಿದೆ. ಮೃತರು ಬೆಂಗಳೂರಿಂದ ಚಿಕ್ಕಮಗಳೂರಿಗೆ ಮದುವೆಗೆಂದು ತೆರಳುತ್ತಿದ್ದರು. ಈ ವೇಳೆ, ಮಂಗಳೂರಿನತ್ತ ಹೊರಟಿದ್ದ ಕಂಟೇನರ್ ಲಾರಿ​ಗೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಚನ್ನರಾಯಪಟ್ಟಣ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

HSN ACCIDENT

ಅಪಘಾತದ ಭೀಕರ ದೃಶ್ಯ

HSN ACCIDENT

ಕಂಟೇನರ್ ಲಾರಿ​ಗೆ ಕಾರು ಡಿಕ್ಕಿ

ಮಗು ಜೊತೆ ಜಲಾಶಯಕ್ಕೆ ಹಾರಿ ಮಹಿಳೆ ಆತ್ಮಹತ್ಯೆಗೆ ಯತ್ನ ಇತ್ತ, ಮಗು ಜೊತೆ ಜಲಾಶಯಕ್ಕೆ ಹಾರಿ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆ ಮುಂಡಗೋಡು ತಾಲೂಕಿನ ಅತ್ತಿವೇರಿಯಲ್ಲಿ ನಡೆದಿದೆ. ದುರದೃಷ್ಟವಶಾತ್, ಘಟನೆಯಲ್ಲಿ 9 ತಿಂಗಳ ಮಗು ರಾಮು ಕಾಳು ಶಳಕೆ ಸಾವನ್ನಪ್ಪಿದೆ. ಆದರೆ, ಆತನ ತಾಯಿ ಚಂದ್ರಕಲಾರನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ಮಹಿಳೆ ಆತ್ಮಹತ್ಯೆಗೆ ಯತ್ನಿಸಲು ಕಾರಣವೇನು ಎಂದು ತಿಳಿದುಬಂದಿಲ್ಲ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಲಬಾಧೆಯಿಂದ ಬೇಸತ್ತು ಮನೆಯಲ್ಲಿ ರೈತ ನೇಣಿಗೆ ಶರಣು ಇತ್ತ, ಸಾಲಬಾಧೆಯಿಂದ ಬೇಸತ್ತು ಮನೆಯಲ್ಲಿ ರೈತ ನೇಣಿಗೆ ಶರಣಾಗಿರುವ ಘಟನೆ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಶಿರೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಸುಭಾಷ್ ಸಣ್ಣಮನಿ ಆತ್ಮಹತ್ಯೆಗೆ ಶರಣಾದ ರೈತ. ಸುಭಾಷ್​ ಬ್ಯಾಂಕ್ ಮತ್ತು ಖಾಸಗಿ ವ್ಯಕ್ತಿಗಳಿಂದ 17 ಲಕ್ಷ ಸಾಲಮಾಡಿದ್ದರು. ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಡ್ಡಹೊಳೆ ಬಳಿ KSRTC ಬಸ್, ಕಾರು ಮುಖಾಮುಖಿ ಡಿಕ್ಕಿ KSRTC ಬಸ್​​ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಅಡ್ಡಹೊಳೆ ಗ್ರಾಮದ ಬಳಿ ನಡೆದಿದೆ. ಕಾರಿನಲ್ಲಿದ್ದ ಮೂವರು ಮಕ್ಕಳು ಸೇರಿ ಐವರಿಗೆ ಗಂಭೀರ ಗಾಯಗಳಾಗಿದೆ. ಅಡ್ಡಹೊಳೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಗಾಯಾಳುಗಳು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬೈಕ್​ಗಳ ನಡುವೆ ಡಿಕ್ಕಿ: ಓರ್ವ ಸವಾರ ಸ್ಥಳದಲ್ಲೇ ಸಾವು ಎರಡು ಬೈಕ್​ಗಳು ಡಿಕ್ಕಿಯಾದ ಪರಿಣಾಮ ಓರ್ವ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಹೆಬ್ಬಾಕ ಬಳಿ ನಡೆದಿದೆ. ಜಿಲ್ಲೆಯ ಚಿಕ್ಕ ಬೆಳ್ಳಾವಿ ಗ್ರಾಮದ ಮಂಜುನಾಥ (24) ಮೃತ ದುರ್ದೈವಿ. ಬೆಳ್ಳಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Published On - 8:09 pm, Sat, 13 February 21