ಶರತ್‌ ಬಚ್ಚೆಗೌಡ ಕಾಂಗ್ರೆಸ್‌ಗೆ ಬರೋದಾದ್ರೆ ಹೆಗಲ ಮೇಲೆ ಕೂರಿಸಿಕೊಂಡು ಹೋಗುತ್ತೇನೆ

| Updated By:

Updated on: Jul 31, 2020 | 12:29 AM

ದೆವನಹಳ್ಳಿ: ಹೊಸಕೋಟೆಯ ಪಕ್ಷೇತರ ಶಾಸಕ ಶರತ್‌ ಬಚ್ಚೆಗೌಡ ನನ್ನ ಮಗನಿದ್ದ ಹಾಗೆ. ಆತ ಕಾಂಗ್ರೆಸ್‌ ಪಕ್ಷಕ್ಕೆ ಬರುವುದಾದರೇ ಆತನನ್ನು ನನ್ನ ಹೆಗಲ ಮೇಲೆ ಕೂರಿಸಿಕೊಂಡು ಕರೆದುಕೊಂಡು ಹೋಗುತ್ತೇನೆ ಎನ್ನುವ ಮೂಲಕ ಮಾಜಿ ಸ್ಪೀಕರ್‌ ಹಾಗೂ ಕಾಂಗ್ರೆಸ್‌ ನಾಯಕ ರಮೇಶ್‌ಕುಮಾರ್‌ ರಾಜಕೀಯ ಬಾಂಬ್‌ ಹಾಕಿದ್ದಾರೆ. ದೇವನಹಳ್ಳಿಯ ಕಾರ್ಯಕ್ರಮವೊಂದರಲ್ಲಿ ಶರತ್‌ ಬಚ್ಚೆಗೌಡ ಜತೆ ವೇದಿಕೆ ಹಂಚಿಕೊಂಡು ಮಾತನಾಡಿದ ರಮೇಶ್‌ಕುಮಾರ್‌, ದೇವಸ್ಥಾನಕ್ಕೆ ಹೋಗಲು ಯಾವುದೇ ಆಹ್ವಾನ ಬೇಕಾಗಿಲ್ಲ, ಹೋಗುವವರು ಹೋಗ್ತಾಯಿರ್ತಾರೆ ಬರುವವರು ಬರ್ತಾ ಇರ್ತಾರೆ. ಕಾಂಗ್ರೇಸ್ ಸಮುದ್ರ ಇದ್ದ ಹಾಗೆ, ಎಲ್ಲವೂ […]

ಶರತ್‌ ಬಚ್ಚೆಗೌಡ ಕಾಂಗ್ರೆಸ್‌ಗೆ ಬರೋದಾದ್ರೆ ಹೆಗಲ ಮೇಲೆ ಕೂರಿಸಿಕೊಂಡು ಹೋಗುತ್ತೇನೆ
Follow us on

ದೆವನಹಳ್ಳಿ: ಹೊಸಕೋಟೆಯ ಪಕ್ಷೇತರ ಶಾಸಕ ಶರತ್‌ ಬಚ್ಚೆಗೌಡ ನನ್ನ ಮಗನಿದ್ದ ಹಾಗೆ. ಆತ ಕಾಂಗ್ರೆಸ್‌ ಪಕ್ಷಕ್ಕೆ ಬರುವುದಾದರೇ ಆತನನ್ನು ನನ್ನ ಹೆಗಲ ಮೇಲೆ ಕೂರಿಸಿಕೊಂಡು ಕರೆದುಕೊಂಡು ಹೋಗುತ್ತೇನೆ ಎನ್ನುವ ಮೂಲಕ ಮಾಜಿ ಸ್ಪೀಕರ್‌ ಹಾಗೂ ಕಾಂಗ್ರೆಸ್‌ ನಾಯಕ ರಮೇಶ್‌ಕುಮಾರ್‌ ರಾಜಕೀಯ ಬಾಂಬ್‌ ಹಾಕಿದ್ದಾರೆ.

ದೇವನಹಳ್ಳಿಯ ಕಾರ್ಯಕ್ರಮವೊಂದರಲ್ಲಿ ಶರತ್‌ ಬಚ್ಚೆಗೌಡ ಜತೆ ವೇದಿಕೆ ಹಂಚಿಕೊಂಡು ಮಾತನಾಡಿದ ರಮೇಶ್‌ಕುಮಾರ್‌, ದೇವಸ್ಥಾನಕ್ಕೆ ಹೋಗಲು ಯಾವುದೇ ಆಹ್ವಾನ ಬೇಕಾಗಿಲ್ಲ, ಹೋಗುವವರು ಹೋಗ್ತಾಯಿರ್ತಾರೆ ಬರುವವರು ಬರ್ತಾ ಇರ್ತಾರೆ. ಕಾಂಗ್ರೇಸ್ ಸಮುದ್ರ ಇದ್ದ ಹಾಗೆ, ಎಲ್ಲವೂ ಸ್ವಾಭಾವಿಕವಾಗಿ ಆಗ್ತಾ ಇರುತ್ತೆ ಎಂದು ಶರತ್‌ ಕಾಂಗ್ರೆಸ್‌ನತ್ತ ಮುಖ ಮಾಡಿರುವುದರ ಬಗ್ಗೆ ಸುಳಿವು ಬಿಟ್ಟುಕೊಟ್ಟರು.

ಈ ಬಗ್ಗೆ ಶರತ್‌ ಬಚ್ಚೇಗೌಡ ಅವರ ನಿಲುವು ಏನು ಎಂಬುದು ತಿಳಿದಿಲ್ಲ. ಅವರ ಹಿತೈಶಿಗಳ ಜೊತೆ ಚರ್ಚಿಸಿ ಒಳ್ಳೆ ತೀರ್ಮಾನ ತಗೋತಾರೆ ಎನ್ನುವ ಮೂಲಕ ಶರತ್‌ ಬಚ್ಚೆಗೌಡ ಕಾಂಗ್ರೆಸ್‌ಗೆ ಬರುವುದಾದರೇ ಬರಲಿ ಕಾಂಗ್ರೆಸ್‌ ದ್ವಾರ ತೆರೆದಿದೆ ಎಂದು ಶರತ್‌ ಕಾಂಗ್ರೆಸ್‌ನತ್ತ ಮುಖ ಮಾಡಿರುವ ಬಗ್ಗೆ ಪರೋಕ್ಷ ಸಂದೇಶ ರವಾನಿಸಿದರು.

ಆದ್ರೆ ಶರತ್‌ ತಂದೆ ಬಚ್ಚೆಗೌಡ ಬಿಜೆಪಿಯ ಸಂಸದ. ಹೀಗಾಗಿ ರಮೇಶ್‌ ಕುಮಾರ್‌ ಅವರ ಈ ಕಲ್ಲು ಒಗೆದು ಆಳ ನೋಡುವ ತಂತ್ರ ಕಾಂಗ್ರೆಸ್‌ ಮತ್ತು ಬಿಜೆಪಿ ವಲಯಗಳಲ್ಲಿ ಭಾರೀ ಕೂತೂಹಲ ಮೂಡಿಸಿದೆ.

Published On - 7:30 pm, Wed, 29 July 20