ಗೃಹ ಪ್ರವೇಶಕ್ಕೆಂದು ಹೊರಟವ.. ಮರಳಿ ಬಾರದ ಊರಿಗೆ ತೆರಳಿಬಿಟ್ಟ, ಎಲ್ಲಿ?
ಗದಗ: Cruiser ಜೀಪ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಕ್ರಾಸ್ ಬಳಿ ನಡೆದಿದೆ. ಮಂಜುನಾಥ ಈರಪ್ಪ ನಾವಳ್ಳಿ (40) ಮೃತ ಬೈಕ್ ಸವಾರ. ಹರ್ತಿ ಗ್ರಾಮದಿಂದ ಗೃಹ ಪ್ರವೇಶಕ್ಕೆಂದು ಮೊರನಾಳ ಗ್ರಾಮಕ್ಕೆ ತೆರಳುತ್ತಿದ್ದ ಮಂಜುನಾಥ ದೋಣಿ ಕ್ರಾಸ್ ಬಳಿ ಹೋಗುವಾಗ Cruiser ಜೀಪ್ಗೆ ಮುಖಾ ಮುಖಿ ಡಿಕ್ಕಿಯಾಗಿದೆ. ಅಪಘಾತದ ಪರಿಣಾಮ ಮಂಜುನಾಥ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಜೊತೆಗೆ, ಕ್ರೂಸರ್ ವಾಹನದಲ್ಲಿದ್ದ ಹಲವು ಪ್ರಯಾಣಿಕರಿಗೆ ಚಿಕ್ಕಪುಟ್ಟ […]
ಗದಗ: Cruiser ಜೀಪ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಕ್ರಾಸ್ ಬಳಿ ನಡೆದಿದೆ. ಮಂಜುನಾಥ ಈರಪ್ಪ ನಾವಳ್ಳಿ (40) ಮೃತ ಬೈಕ್ ಸವಾರ.
ಹರ್ತಿ ಗ್ರಾಮದಿಂದ ಗೃಹ ಪ್ರವೇಶಕ್ಕೆಂದು ಮೊರನಾಳ ಗ್ರಾಮಕ್ಕೆ ತೆರಳುತ್ತಿದ್ದ ಮಂಜುನಾಥ ದೋಣಿ ಕ್ರಾಸ್ ಬಳಿ ಹೋಗುವಾಗ Cruiser ಜೀಪ್ಗೆ ಮುಖಾ ಮುಖಿ ಡಿಕ್ಕಿಯಾಗಿದೆ. ಅಪಘಾತದ ಪರಿಣಾಮ ಮಂಜುನಾಥ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಜೊತೆಗೆ, ಕ್ರೂಸರ್ ವಾಹನದಲ್ಲಿದ್ದ ಹಲವು ಪ್ರಯಾಣಿಕರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ.