ಸಿಖ್‌ ಗುರುದ್ವಾರ ಕೆಡವಿ.. ಮಸೀದಿ ನಿರ್ಮಾಣಕ್ಕೆ ಮುಂದಾದ ಪಾಪಿ ಪಾಕಿಸ್ತಾನ

ಸಿಖ್‌ ಗುರುದ್ವಾರ ಕೆಡವಿ.. ಮಸೀದಿ ನಿರ್ಮಾಣಕ್ಕೆ ಮುಂದಾದ ಪಾಪಿ ಪಾಕಿಸ್ತಾನ

ಲಾಹೋರ್‌: ಪಾಕಿಸ್ತಾನದಲ್ಲಿರುವ ಐತಿಹಾಸಿಕ ಸಿಖ್‌ ಗುರುದ್ವಾರವನ್ನ ಮಸೀದಿಯನ್ನಾಗಿ ಪರಿವರ್ತಿಸಲು ಮುಂದಾಗಿರುವ ಪಾಕಿಸ್ತಾನದ ಕ್ರಮವನ್ನ ಭಾರತ ಕಟುವಾಗಿ ವಿರೋಧಿಸಿದೆ. ಈ ಸಂಬಂಧ ಪಾಕಿಸ್ತಾನಕ್ಕೆ ತನ್ನ ವಿರೋಧ ಮತ್ತು ಕಳವಳವನ್ನ ತಿಳಿಸಿದೆ. ಹೌದು ಪಾಕಿಸ್ತಾನದ ಲಾಹೋರ್‌ನಲ್ಲಿರುವ ನೌಲಖ್‌ ಬಜಾರ್‌ನಲ್ಲಿನ ಶಾಹಿದಿ ಆಸ್ಥಾನ ಭಾಯಿ ತರುಜಿ ಗುರುದ್ವಾರವನ್ನು ಪಾಕಿಸ್ತಾನ ಶಹೀದ್‌ ಗಂಜ್‌ ಮಸೀದಿಯನ್ನಾಗಿ ಪರಿವರ್ತಿಸಲು ಮುಂದಾಗಿದೆ. ಇದಕ್ಕೆ ಪಾಕಿಸ್ತಾನದಲ್ಲಿರುವ ಸಿಖ್‌ ಅಲ್ಪಸಂಖ್ಯಾತರು ತೀವ್ರವಾಗಿ ವಿರೋಧಿಸಿದ್ದಾರೆ. ಈ ಸಂಬಂಧ ಪಾಕಿಸ್ತಾನ ಸರ್ಕಾರಕ್ಕೆ ಗುರುದ್ವಾರವನ್ನ ಮಸೀದಿಯನ್ನಾಗಿ ಪರಿವರ್ತಿಸದಂತೆ ಮನವಿ ಮಾಡಿದ್ದಾರೆ. 1745ರಲ್ಲಿ ಕಟ್ಟಲಾದ ಗುರುದ್ವಾರ […]

Guru

| Edited By:

Jul 31, 2020 | 12:23 AM

ಲಾಹೋರ್‌: ಪಾಕಿಸ್ತಾನದಲ್ಲಿರುವ ಐತಿಹಾಸಿಕ ಸಿಖ್‌ ಗುರುದ್ವಾರವನ್ನ ಮಸೀದಿಯನ್ನಾಗಿ ಪರಿವರ್ತಿಸಲು ಮುಂದಾಗಿರುವ ಪಾಕಿಸ್ತಾನದ ಕ್ರಮವನ್ನ ಭಾರತ ಕಟುವಾಗಿ ವಿರೋಧಿಸಿದೆ. ಈ ಸಂಬಂಧ ಪಾಕಿಸ್ತಾನಕ್ಕೆ ತನ್ನ ವಿರೋಧ ಮತ್ತು ಕಳವಳವನ್ನ ತಿಳಿಸಿದೆ.

ಹೌದು ಪಾಕಿಸ್ತಾನದ ಲಾಹೋರ್‌ನಲ್ಲಿರುವ ನೌಲಖ್‌ ಬಜಾರ್‌ನಲ್ಲಿನ ಶಾಹಿದಿ ಆಸ್ಥಾನ ಭಾಯಿ ತರುಜಿ ಗುರುದ್ವಾರವನ್ನು ಪಾಕಿಸ್ತಾನ ಶಹೀದ್‌ ಗಂಜ್‌ ಮಸೀದಿಯನ್ನಾಗಿ ಪರಿವರ್ತಿಸಲು ಮುಂದಾಗಿದೆ. ಇದಕ್ಕೆ ಪಾಕಿಸ್ತಾನದಲ್ಲಿರುವ ಸಿಖ್‌ ಅಲ್ಪಸಂಖ್ಯಾತರು ತೀವ್ರವಾಗಿ ವಿರೋಧಿಸಿದ್ದಾರೆ. ಈ ಸಂಬಂಧ ಪಾಕಿಸ್ತಾನ ಸರ್ಕಾರಕ್ಕೆ ಗುರುದ್ವಾರವನ್ನ ಮಸೀದಿಯನ್ನಾಗಿ ಪರಿವರ್ತಿಸದಂತೆ ಮನವಿ ಮಾಡಿದ್ದಾರೆ.

1745ರಲ್ಲಿ ಕಟ್ಟಲಾದ ಗುರುದ್ವಾರ 1745ರಲ್ಲಿ ಸ್ಥಾಪಿತವಾದ ಈ ಗುರುದ್ವಾರ ಸಿಖ್‌ರ ಪಾಲಿಗೆ ಐತಿಹಾಸಿಕ ಮತ್ತು ಧಾರ್ಮಿಕವಾಗಿ ಭಾವನಾತ್ಮಕವಾಗಿ ಬೆಸೆದುಕೊಂಡಿದೆ. ಜೀವವನ್ನಾದರೂ ಬಿಟ್ಟೇನು ನನ್ನ ಪಗಡಿಯನ್ನ ಬಿಡೆನು ಎಂದು ಭಾಯೀ ತರುಜಿ ಸಿಖ್‌ ಧರ್ಮವನ್ನು ಎತ್ತಿ ಹಿಡಿಯಲು ತಮ್ಮ ಜೀವವನ್ನೇ ತ್ಯಾಗ ಮಾಡಿದ್ದರು. ಅವರು ಜೀವತ್ಯಾಗ ಮಾಡಿದ ಈ ಸ್ಥಳದಲ್ಲಿಯೇ 1745ರಲ್ಲಿ ಈ ಗುರುದ್ವಾರವನ್ನು ಕಟ್ಟಲಾಗಿದೆ.

ಈಗ ಲಾಹೋರ್‌ನಲ್ಲಿರುವ ಕೆಲ ಮತೀಯವಾದಿಗಳು ಈ ಗುರುದ್ವಾರವನ್ನು ಮಸೀದಿಯನ್ನಾಗಿ ಪರಿವರ್ತಿಸಲು ಮುಂದಾಗಿದ್ದಾರೆ. ಇದು ವಿಶ್ವಾದ್ಯಂತ ಸಿಖ್‌ ಧರ್ಮೀಯರಲ್ಲಿ ಆಕ್ರೋಶ ತರಿಸಿದೆ. ಈ ಸಂಬಂಧ ಭಾರತ ಸರ್ಕಾರ ಕೂಡಾ ಕಟುವಾಗಿ ಪಾಕಿಸ್ತಾನ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, ಗುರುದ್ವಾರನ್ನು ಮಸೀದಿಯನ್ನಾಗಿ ಪರಿವರ್ತಿಸುವ ಯಾವುದೇ ಕ್ರಮವನ್ನು ವಿರೋಧಿಸುವುದಾಗಿ ತಿಳಿಸಿದೆ.

Follow us on

Related Stories

Most Read Stories

Click on your DTH Provider to Add TV9 Kannada