Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಹುಟ್ಟುಹಾಕಿದ ಚೀನಾದಲ್ಲಿ ಮತ್ತೆ ವೈರಸ್​ ಅಬ್ಬರ, ದಿನಕ್ಕೆ ನೂರಾರು ಸೋಂಕಿತರು

ಕೊರೊನಾ ವೈರಸ್​ ಹುಟ್ಟುಹಾಕಿದ ಚೀನಾದಲ್ಲಿ ಮತ್ತೆ ವೈರಸ್​ನ ಅಬ್ಬರ ಹೆಚ್ಚಾಗುತ್ತಿದೆ. ಕೇವಲ 24 ಗಂಟೆಗಳ ಅವಧಿಯಲ್ಲಿ ಸುಮಾರು 100ಕ್ಕು ಹೆಚ್ಚು ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಕ್ಸಿನ್​ಜಿಂಗ್ ನಲ್ಲಿ​ 89 ಜನರಿಗೆ ವೈರಸ್ ಹೊಕ್ಕಿದೆ. ಚೀನಾದಲ್ಲಿ ಈವರೆಗೂ ಸೋಂಕಿತರ ಸಂಖ್ಯೆ 4,634ಕ್ಕೆ ಏರಿಕೆಯಾಗಿದೆ. ಕೊರೊನಾ ಕೋಟಿ ಕ್ವಾಟ್ಲೆ ಜಗತ್ತಿನ ಜಂಘಾಬಲವನ್ನೇ ಉಡುಗಿಸಿರುವ ಕೊರೊನಾ ವೈರಸ್​ನ ಅಟ್ಟಹಾಸಕ್ಕೆ ಕೊನೆಯೇ ಇಲ್ಲದಂತಾಗಿದೆ. ವಿಶ್ವದಾದ್ಯಂತ ಸೋಂಕಿತರ ಸಂಖ್ಯೆ 1,68,93,527ಕ್ಕೇ ಏರಿಕೆಯಾಗಿದ್ದು, ಸೋಂಕಿನಿಂದ 6,63,476 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರಸ್ತುತ ಜಗತ್ತಿನಾದ್ಯಂತ 5,77,36,656 ಜನರು […]

ಕೊರೊನಾ ಹುಟ್ಟುಹಾಕಿದ ಚೀನಾದಲ್ಲಿ ಮತ್ತೆ ವೈರಸ್​ ಅಬ್ಬರ, ದಿನಕ್ಕೆ ನೂರಾರು ಸೋಂಕಿತರು
Follow us
ಆಯೇಷಾ ಬಾನು
| Updated By:

Updated on:Jul 30, 2020 | 9:47 PM

ಕೊರೊನಾ ವೈರಸ್​ ಹುಟ್ಟುಹಾಕಿದ ಚೀನಾದಲ್ಲಿ ಮತ್ತೆ ವೈರಸ್​ನ ಅಬ್ಬರ ಹೆಚ್ಚಾಗುತ್ತಿದೆ. ಕೇವಲ 24 ಗಂಟೆಗಳ ಅವಧಿಯಲ್ಲಿ ಸುಮಾರು 100ಕ್ಕು ಹೆಚ್ಚು ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಕ್ಸಿನ್​ಜಿಂಗ್ ನಲ್ಲಿ​ 89 ಜನರಿಗೆ ವೈರಸ್ ಹೊಕ್ಕಿದೆ. ಚೀನಾದಲ್ಲಿ ಈವರೆಗೂ ಸೋಂಕಿತರ ಸಂಖ್ಯೆ 4,634ಕ್ಕೆ ಏರಿಕೆಯಾಗಿದೆ.

ಕೊರೊನಾ ಕೋಟಿ ಕ್ವಾಟ್ಲೆ ಜಗತ್ತಿನ ಜಂಘಾಬಲವನ್ನೇ ಉಡುಗಿಸಿರುವ ಕೊರೊನಾ ವೈರಸ್​ನ ಅಟ್ಟಹಾಸಕ್ಕೆ ಕೊನೆಯೇ ಇಲ್ಲದಂತಾಗಿದೆ. ವಿಶ್ವದಾದ್ಯಂತ ಸೋಂಕಿತರ ಸಂಖ್ಯೆ 1,68,93,527ಕ್ಕೇ ಏರಿಕೆಯಾಗಿದ್ದು, ಸೋಂಕಿನಿಂದ 6,63,476 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರಸ್ತುತ ಜಗತ್ತಿನಾದ್ಯಂತ 5,77,36,656 ಜನರು ಸೋಂಕಿನಿಂದ ನರಳಾಡುತ್ತಿದ್ದು, 66 ಸಾವಿರ ಜನರ ಸ್ಥಿತಿ ಚಿಂತಾಜನಕವಾಗಿದೆ.

ವಿದೇಶಗಳಿಗೂ ವ್ಯಾಕ್ಸಿನ್ ಕೊರೊನಾದಿಂದಾಗಿ ಸಾಕಷ್ಟು ಹೊಡೆತ ತಿಂದಿರುವ ಅಮೆರಿಕದಲ್ಲಿ, ಮುಂದಿನ 2 ವಾರಗಳಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡುವ ಬಗ್ಗೆ ಗುಡ್ ನ್ಯೂಸ್ ನೀಡೋದಾಗಿ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ವ್ಯಾಕ್ಸಿನ್ ಪತ್ತೆಯಾದ ಬಳಿಕ ಕೇವಲ ಅಮೆರಿಕಕ್ಕೆ ಮಾತ್ರವಲ್ಲ, ಇತರೆ ದೇಶಗಳಿಗೂ ವ್ಯಾಕ್ಸಿನ್ ಸರಬರಾಜು ಮಾಡಲಿದೆ ಅಂತಾ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಲಿದ್ದಾರೆ. ​

ಬ್ರೆಜಿಲ್​ನಲ್ಲಿ 88 ಸಾವಿರ ಸಾವು ಬ್ರೆಜಿಲ್ ದೇಶದಲ್ಲಿ ಕೊರೊನಾ ಸೋಂಕಿನ ಅಬ್ಬರಕ್ಕೆ ಕೊನೆಯೇ ಇಲ್ಲದಂತಾಗಿದ್ದು, ಸೋಂಕಿತರ ಸಂಖ್ಯೆಯಲ್ಲಿ ದೇಶದ ವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ. ಇದ್ರ ಬೆನ್ನಲ್ಲೇ, ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗಿದ್ದು, ಕೇವಲ 24 ಗಂಟೆಗಳ ಅವಧಿಯಲ್ಲಿ 921 ಜನರು ಪ್ರಾಣ ಕಳೆದುಕೊಂಡಿದ್ದು, ದೇಶದಲ್ಲಿ ವೈರಸ್​ಗೆ ಬಲಿಯಾದವರ ಸಂಖ್ಯೆ 88 ಸಾವಿರಕ್ಕೆ ಏರಿಕೆಯಾಗಿದೆ.

ರಷ್ಯಾದಿಂದ ವ್ಯಾಕ್ಸಿನ್ ಪ್ರಯೋಗ ರಷ್ಯಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 8,23,515ಕ್ಕೆ ಏರಿಕೆಯಾಗಿದ್ದು, 13 ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದ್ರ ಬೆನ್ನಲ್ಲೇ, ರಷ್ಯಾ ವ್ಯಾಕ್ಸಿನ್ ಪ್ರಯೋಗಕ್ಕೆ ಮುಂದಾಗಿದೆ. ಕೊಲ್ಟಸೊವೊದಲ್ಲಿ ಮಾನವರ ಮೇಲೆ ವ್ಯಾಕ್ಸಿನ್ ಪ್ರಯೋಗಕ್ಕೆ ಮುಂದಾಗಿದ್ದು, ಸದ್ಯ ವೈರೋಲಜಿ ಇನ್​ಸ್ಟಿಟ್ಯೂಟ್​ನಲ್ಲಿ ಪ್ರಯೋಗ ಶುರುವಾಗಿದೆ.

ಸ್ಪೇನ್​ನಲ್ಲಿ ನಿರುದ್ಯೋಗ ಹೆಚ್ಚಳ ಕೊರೊನಾ ಸೋಂಕಿನ ಸುನಾಮಿಯಿಂದ ಸ್ಪೇನ್ ದೇಶ ಕಂಗೆಟ್ಟು ಹೋಗಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಈಗಾಗಲೇ 3,25,862ಕ್ಕೆ ಏರಿಕೆಯಾಗಿದ್ದು, 28 ಸಾವಿರಕ್ಕೂ ಅಧಿಕ ಜನರು ಉಸಿರು ಚೆಲ್ಲಿದ್ದಾರೆ. ವೈರಸ್ ನಿಯಂತ್ರಿಸುವ ಸಲುವಾಗಿ ದೇಶದಲ್ಲಿ ಹೇರಲಾಗಿದ್ದ ಲಾಕ್​ಡೌನ್​ನಿಂದಾಗಿ ಸುಮಾರು 1 ಮಿಲಿಯನ್ ಜನರು ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ಇದು ದೇಶದ ಆರ್ಥಿಕ ವ್ಯವಸ್ಥೆ ಮೇಲೂ ದುಷ್ಪರಿಣಾಮ ಬೀರಿದೆ.

ಕೊರೊನಾ ಸೀಸನ್ ರೋಗವಲ್ಲ! ಕ್ರೂರಿ ಕೊರೊನಾ ವೈರಸ್​ ಸೀಸನ್​ ರೋಗ ಅಂತಾ ಕೆಲವರು ಹೇಳುತ್ತಿದ್ದು, ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಅಲ್ಲಗಳೆದಿದೆ. ಕೊರೊನಾ ವೈರಸ್ ಚಳಿಗಾಲ, ಮಳೆಗಾಲ ಬೇಸಿಗೆಗಾಲವನ್ನ ನೋಡಿ ಬರಲ್ಲ. ಬೇಸಿಗೆಯಲ್ಲಿ ಕೊರೊನಾ ಹರಡಲ್ಲ ಅನ್ನೋ ಮಾಹಿತಿ ಎಲ್ಲವೂ ಸುಳ್ಳು. ವಿಶ್ವದೆಲ್ಲೆಡೆ ವಿಭಿನ್ನ ವಾತಾವರಣ ಹೊಂದಿರುವ ದೇಶಗಳಲ್ಲೂ ಕೊರೊನಾ ಸಮಾನ ಪ್ರಮಾಣದಲ್ಲೇ ಹರಡುತ್ತಿದೆ ಅಂತಾ WHOನ ವಕ್ತಾರೆ ಮಾರ್ಗರೇಟ್ ಹ್ಯಾರಿಸ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾಗೆ ತುರ್ತು ಸಾಲ! ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ವೈರಸ್​ ನಿಧಾನಕ್ಕೆ ದೇಶದಲ್ಲೆಡೆ ವ್ಯಾಪಿಸುತ್ತಲೇ ಇದೆ. ವಿಶ್ವದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಈಗಾಗಲೇ 5ನೇ ಸ್ಥಾನಕ್ಕೆ ಏರಿದೆ. ಹೀಗಾಗಿ, ಅಂತಾರಾಷ್ಟ್ರೀಯ ಹಣಕಾಸು ನಿಧಿ ಐಎಂಎಫ್, 4.3 ಬಿಲಿಯನ್ ಡಾಲರ್ ಹಣವನ್ನ ತುರ್ತು ಸಾಲವಾಗಿ ನೀಡಿದೆ. ಕೊರೊನಾ ಪರಿಸ್ಥಿತಿಯನ್ನ ನಿಭಾಯಿಸುವ ಸಲುವಾಗಿ ಐಎಂಎಫ್​ ಸಾಲ ನೀಡಿದೆ.

ಕೀನ್ಯಾದಲ್ಲಿ ‘ಮತ್ತು’ ಷರತ್ತು! ಕೀನ್ಯಾದಲ್ಲಿ ಕೊರೊನಾ ವೈರಸ್​ ಅಟ್ಟಹಾಸ ಮೆರೆಯುತ್ತಿದ್ದು, ಸೋಂಕಿತರ ಸಂಖ್ಯೆ 18 ಸಾವಿರದ ಗಡಿ ದಾಟಿದ್ದು, ವೈರಸ್​ನಿಂದಾಗಿ 285ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ, ವೈರಸ್ ನಿಗ್ರಹಿಸುವ ಸಲುವಾಗಿ, ಚೀನಾ ಅಧ್ಯಕ್ಷ ಉಹ್ರು ಕೆನ್ಯಾಟ್ಟಾ ನೈಟ್ ಕರ್ಫ್ಯೂವನ್ನ ಇನ್ನು 30 ದಿನಗಳ ಕಾಲ ಮುಂದುವರಿಸಿದ್ದು, ರೆಸ್ಟೋರೆಂಟ್​ಗಳಲ್ಲಿ ರಾತ್ರಿ ವೇಳೆ ಎಣ್ಣೆ ಮಾರಾಟಕ್ಕೂ ನಿಷೇಧ ಹೇರಿದ್ದಾರೆ.

Published On - 2:36 pm, Wed, 29 July 20

ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ರಾಮಲಿಂಗಾರೆಡ್ಡಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡುತ್ತಾರೆ
ರಾಮಲಿಂಗಾರೆಡ್ಡಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡುತ್ತಾರೆ