
ಬೆಳಗಾವಿ: ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2019ನೇ ಸಾಲಿನ ನಾಗರಿಕ ಸೇವೆ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ ನಾಲ್ವರು ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ.
ಹೌದು ಬೆಳಗಾವಿ ಜಿಲ್ಲೆ ಈ ಬಾರಿಯ ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ ಬಂಪರ್ ಹೊಡೆದಿದೆ. ಜಿಲ್ಲೆಯ ನಾಲ್ಕು ಜನ ಅಭ್ಯರ್ಥಿಗಳು ಆಯ್ಕೆಯಾಗುವ ಮೂಲಕ ಸ್ಳಳೀಯರಲ್ಲಿ ಸಂಚಲನ ಮೂಡಿಸಿದ್ದಾರೆ. ಇದರೊಂದಿಗೆ ಬೆಳಗಾವಿ ಜಿಲ್ಲೆಯಲ್ಲಿ ಸಂತಸದ ಹೊನಲೇ ಹರಿಯುತ್ತಿದೆ.
ಈ ಹಿಂದೆ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಱಂಕ್ ಪಡೆದು ಉಪವಿಭಾಗಾಧಿಕಾರಿಯಾಗಿ ಆಯ್ಕೆಯಾಗಿದ್ದ ಅಥಣಿಯ ಜಗದೀಶ ಅಡಹಳ್ಳಿ 440ನೇ ಱಂಕ್‌ನಲ್ಲಿ ತೇರ್ಗಡೆಯಾಗಿದ್ದಾರೆ. ಹುಕ್ಕೇರಿ ತಾಲೂಕಿನ ಯರನಾಳ ಗ್ರಾಮದ ಪ್ರಫುಲ್ ದೇಸಾಯಿ 532 ಱಂಕ್ ಪಡೆದರೆ, ರಾಯಬಾಗದ ಗಜಾನನ ಬಾಲೆ 663 ನೇ ಱಂಕ್ ಗಳಿಸಿದ್ದಾರೆ. ಚಿಕ್ಕೋಡಿಯ ಪ್ರಿಯಾಂಕಾ ಕಾಂಬಳೆ 670ನೇ ಱಂಕ್ ಗಳಿಸಿದ್ದಾಳೆ.
Published On - 5:32 pm, Tue, 4 August 20