ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ 582ನೇ ಱಂಕ್ ಗಳಿಸಿದ ಶಿವಮೊಗ್ಗದ ಹುಡುಗ
ಶಿವಮೊಗ್ಗ: ಕೇಂದ್ರ ಲೋಕ ಸೇವಾ ಆಯೋಗ ನಡೆಸಿದ ನಾಗರಿಕ ಸೇವೆ ಪರೀಕ್ಷೆಯಲ್ಲಿ ಶಿವಮೊಗ್ಗದ ಹುಡುಗ ದೇಶಕ್ಕೆ 582ನೇ ಱಂಕ್ ಗಳಿಸುವ ಮೂಲಕ ಜಿಲ್ಲೆಯ ಕೀರ್ತಿ ಪತಾಕೆ ಮೆರೆದಿದ್ದಾನೆ. ಹೌದು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಶಿವಮೊಗ್ಗದ ಯುವಕ ಪೃಥ್ವಿ ದೇಶಕ್ಕೆ 582 ನೇ ಱಂಕ್ ಪಡೆದಿದ್ದಾನೆ. ಶಿವಮೊಗ್ಗದ ಸಂತೆಕಡೂರಿನವನಾದ ಪೃಥ್ವಿ ಕೃಷಿಕ ಕುಟುಂಬದ ಹಿನ್ನಲೆಯವನಾಗಿದ್ದಾನೆ. ಪರೀಕ್ಷೆಗೆ ಹಾಜರಾದ ಎರಡನೇ ಪ್ರಯತ್ನದಲ್ಲಿಯೇ 582ನೇ ಱಂಕ್ ಗಳಿಸುವ ಮೂಲಕ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾನೆ. ಮೂಲತಃ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ಪೃಥ್ವಿ, ಪ್ರಾಥಮಿಕ […]

ಶಿವಮೊಗ್ಗ: ಕೇಂದ್ರ ಲೋಕ ಸೇವಾ ಆಯೋಗ ನಡೆಸಿದ ನಾಗರಿಕ ಸೇವೆ ಪರೀಕ್ಷೆಯಲ್ಲಿ ಶಿವಮೊಗ್ಗದ ಹುಡುಗ ದೇಶಕ್ಕೆ 582ನೇ ಱಂಕ್ ಗಳಿಸುವ ಮೂಲಕ ಜಿಲ್ಲೆಯ ಕೀರ್ತಿ ಪತಾಕೆ ಮೆರೆದಿದ್ದಾನೆ.
ಹೌದು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಶಿವಮೊಗ್ಗದ ಯುವಕ ಪೃಥ್ವಿ ದೇಶಕ್ಕೆ 582 ನೇ ಱಂಕ್ ಪಡೆದಿದ್ದಾನೆ. ಶಿವಮೊಗ್ಗದ ಸಂತೆಕಡೂರಿನವನಾದ ಪೃಥ್ವಿ ಕೃಷಿಕ ಕುಟುಂಬದ ಹಿನ್ನಲೆಯವನಾಗಿದ್ದಾನೆ. ಪರೀಕ್ಷೆಗೆ ಹಾಜರಾದ ಎರಡನೇ ಪ್ರಯತ್ನದಲ್ಲಿಯೇ 582ನೇ ಱಂಕ್ ಗಳಿಸುವ ಮೂಲಕ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾನೆ.
ಮೂಲತಃ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ಪೃಥ್ವಿ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಶಿವಮೊಗ್ಗದ ಆದಿಚುಂಚಗಿರಿ ಶಾಲೆಯಲ್ಲಿ ಮುಗಿಸಿದ್ದಾನೆ. ನಂತರ ಶಿವಮೊಗ್ಗದ ಅರಬಿಂದೋ ಜ್ಞಾನದೀಪ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದು, ಜೆಎನ್‌ಎನ್‌ಸಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದಾನೆ.



