ನಾಮ ಫಲಕ ಬಿದ್ದ ಪರಿಣಾಮ ನಾಲ್ವರು ಮಕ್ಕಳಿಗೆ ಗಂಭೀರ ಗಾಯ

|

Updated on: Aug 09, 2020 | 3:35 PM

ಬೀದರ್: ಆಟವಾಡುತ್ತಿದ್ದ ಮಕ್ಕಳ ಮೇಲೆ ಸಹಕಾರಿ ಸಂಘವೊಂದರ ನಾಮಫಲಕ ಬಿದ್ದ ಪರಿಣಾಮ ನಾಲ್ವರೂ ಮಕ್ಕಳು ಗಾಯಗೊಂಡ ದುರ್ಘಟನೆ ಬೀದರ್ ಜಿಲ್ಲೆಯಲ್ಲಿ ಸಂಭವಿಸಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮುಂಠಾಳ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ನಾಲ್ವರು ಚಿಕ್ಕ ಮಕ್ಕಳು ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಆಟವಾಡುತ್ತಾ ಕುಳಿತಿದ್ದರು. ಆಗ ಈ ಮಕ್ಕಳ ಮೇಲೆ ಸಹಕಾರಿ ಸಂಘದ ನಾಮಫಲಕ ಕುಸಿದು ಬಿದ್ದಿದೆ. ಪರಿಣಾಮ ನಾಲ್ವರೂ ಮಕ್ಕಳು ಗಾಯಗೊಂಡಿದ್ದಾರೆ. ತಕ್ಷಣವೇ ಗಾಯಗೊಂಡ ಈ ಮಕ್ಕಳನ್ನು ಚಿಕಿತ್ಸೆಗಾಗಿ ಬಸವಕಲ್ಯಾಣ ತಾಲೂಕು […]

ನಾಮ ಫಲಕ ಬಿದ್ದ ಪರಿಣಾಮ ನಾಲ್ವರು ಮಕ್ಕಳಿಗೆ ಗಂಭೀರ ಗಾಯ
Follow us on

ಬೀದರ್: ಆಟವಾಡುತ್ತಿದ್ದ ಮಕ್ಕಳ ಮೇಲೆ ಸಹಕಾರಿ ಸಂಘವೊಂದರ ನಾಮಫಲಕ ಬಿದ್ದ ಪರಿಣಾಮ ನಾಲ್ವರೂ ಮಕ್ಕಳು ಗಾಯಗೊಂಡ ದುರ್ಘಟನೆ ಬೀದರ್ ಜಿಲ್ಲೆಯಲ್ಲಿ ಸಂಭವಿಸಿದೆ.

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮುಂಠಾಳ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ನಾಲ್ವರು ಚಿಕ್ಕ ಮಕ್ಕಳು ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಆಟವಾಡುತ್ತಾ ಕುಳಿತಿದ್ದರು. ಆಗ ಈ ಮಕ್ಕಳ ಮೇಲೆ ಸಹಕಾರಿ ಸಂಘದ ನಾಮಫಲಕ ಕುಸಿದು ಬಿದ್ದಿದೆ. ಪರಿಣಾಮ ನಾಲ್ವರೂ ಮಕ್ಕಳು ಗಾಯಗೊಂಡಿದ್ದಾರೆ. ತಕ್ಷಣವೇ ಗಾಯಗೊಂಡ ಈ ಮಕ್ಕಳನ್ನು ಚಿಕಿತ್ಸೆಗಾಗಿ ಬಸವಕಲ್ಯಾಣ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಗೊಂಡವರನ್ನು 12 ವರ್ಷದ ಪ್ರಜ್ವಲ್, 10ವರ್ಷದ ಆಕಾಶ್, 12 ವರ್ಷದ ದಿನೇಶ್ ಹಾಗೂ 10 ವರ್ಷದ ಶರಣ್ ಎಂದು ಗುರುತಿಸಲಾಗಿದೆ. ಗಾಯಗೊಂಡ ನಾಲ್ವರು ಮಕ್ಕಳಲ್ಲಿ ಒರ್ವನ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಮುಂದುವರಿದಿದೆಯಂದು ತಿಳಿದು ಬಂದಿದೆ. ಘಟನೆ ಸಂಬಂಧ ಮುಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.