ನಾಲೆಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವವನ್ನ ಆರೇ ನಿಮಿಷದಲ್ಲಿ ಪತ್ತೆಹಚ್ಚಿದ ಮೀನುಗಾರರು
ಬೆಳಗಾವಿ: ಮಳೆ ಹೆಚ್ಚಾಗಿದ್ದರಿಂದ ತನ್ನ ಜಮೀನಿನಲ್ಲಿದ್ದ ಬೋರ್ವೆಲ್ ಸ್ಟಾರ್ಟರ್ನನ್ನ ಬಿಚ್ಚಿಕೊಂಡು ಬರಲು ತೆರಳಿದ್ದ ಯುವಕನೊಬ್ಬ ಕಾಲುಜಾರಿ ಬಳ್ಳಾರಿ ನಾಲೆಗೆ ಬಿದ್ದಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಯುವಕನ ಮೃತದೇಹವನ್ನು ಪತ್ತೆಯಾಗಿದೆ. ಜಿಲ್ಲೆಯ ಗೋಕಾಕ್ ತಾಲೂಕಿನ ಡುಮ್ಮಉರುಬಿನಹಟ್ಟಿ ಗ್ರಾಮದ ನಿವಾಸಿ ನಾಗರಾಜ್ ಹುಬ್ಬಳ್ಳಿ (18) ಮೃತ ದುರ್ದೈವಿ. ನಾಗರಾಜ್ ನಿನ್ನೆ ಬೋರ್ವೆಲ್ ಸ್ಟಾರ್ಟರ್ ಬಿಚ್ಚಿಕೊಂಡು ಬರಲು ತೆರಳಿದ್ದಾಗ ಕಾಲುಜಾರಿ ಬಳ್ಳಾರಿ ನಾಲೆಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದ. ಇಂದು NDRF ತಂಡ ಹಾಗೂ ನುರಿತ ಮೀನುಗಾರರಿಂದ ಹುಡುಗನ ಮೃತದೇಹಕ್ಕಾಗಿ ಹುಡುಕಾಟ ನಡೆದಿತ್ತು. NDRF […]

ಬೆಳಗಾವಿ: ಮಳೆ ಹೆಚ್ಚಾಗಿದ್ದರಿಂದ ತನ್ನ ಜಮೀನಿನಲ್ಲಿದ್ದ ಬೋರ್ವೆಲ್ ಸ್ಟಾರ್ಟರ್ನನ್ನ ಬಿಚ್ಚಿಕೊಂಡು ಬರಲು ತೆರಳಿದ್ದ ಯುವಕನೊಬ್ಬ ಕಾಲುಜಾರಿ ಬಳ್ಳಾರಿ ನಾಲೆಗೆ ಬಿದ್ದಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಯುವಕನ ಮೃತದೇಹವನ್ನು ಪತ್ತೆಯಾಗಿದೆ. ಜಿಲ್ಲೆಯ ಗೋಕಾಕ್ ತಾಲೂಕಿನ ಡುಮ್ಮಉರುಬಿನಹಟ್ಟಿ ಗ್ರಾಮದ ನಿವಾಸಿ ನಾಗರಾಜ್ ಹುಬ್ಬಳ್ಳಿ (18) ಮೃತ ದುರ್ದೈವಿ.
ನಾಗರಾಜ್ ನಿನ್ನೆ ಬೋರ್ವೆಲ್ ಸ್ಟಾರ್ಟರ್ ಬಿಚ್ಚಿಕೊಂಡು ಬರಲು ತೆರಳಿದ್ದಾಗ ಕಾಲುಜಾರಿ ಬಳ್ಳಾರಿ ನಾಲೆಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದ. ಇಂದು NDRF ತಂಡ ಹಾಗೂ ನುರಿತ ಮೀನುಗಾರರಿಂದ ಹುಡುಗನ ಮೃತದೇಹಕ್ಕಾಗಿ ಹುಡುಕಾಟ ನಡೆದಿತ್ತು. NDRF ತಂಡ ಹಾಗೂ ಮೀನುಗಾರರು ಕಾರ್ಯಾಚರಣೆ ಆರಂಭಿಸಿದ ಕೇವಲ ಆರು ನಿಮಿಷದಲ್ಲಿ ಯುವಕನ ಶವ ಪತ್ತೆಮಾಡಿದ್ದಾರೆ. ಹುಡುಗನ ಮೃತದೇಹ ನಾಲೆಗೆ ಬಿದ್ದ ಜಾಗದಿಂದ 300 ಮೀಟರ್ ದೂರದಲ್ಲಿ ದೊರಕಿದೆ.