Kannada News Latest news ಪೊಲೀಸ್ ಅಧಿಕಾರಿ ಆಯ್ತು, ಈಗ ಕ್ಷೇತ್ರ ಶಿಕ್ಷಣಾಧಿಕಾರಿ ಹೆಸರಲ್ಲಿ ಪಂಗನಾಮಕ್ಕೆ ಸ್ಕೆಚ್, ಯಾವೂರಲ್ಲಿ?
ಪೊಲೀಸ್ ಅಧಿಕಾರಿ ಆಯ್ತು, ಈಗ ಕ್ಷೇತ್ರ ಶಿಕ್ಷಣಾಧಿಕಾರಿ ಹೆಸರಲ್ಲಿ ಪಂಗನಾಮಕ್ಕೆ ಸ್ಕೆಚ್, ಯಾವೂರಲ್ಲಿ?
ಆನೇಕಲ್: ಇಷ್ಟು ದಿನ ಪ್ರಭಾವಿ ಪೊಲೀಸ್ ಅಧಿಕಾರಿಗಳ ಹೆಸರು ಹೇಳಿಕೊಂಡು ಫೇಸ್‌ಬುಕ್ ಮೂಲಕ ದುಡ್ಡೆತ್ತುವ ಪ್ರೋಗ್ರಾಂ ಹಾಕಿಕೊಳ್ಳುತ್ತಿದ್ದ ಖದೀಮರು ಈಗ ಶಿಕ್ಷಣ ಕ್ಷೇತ್ರಕ್ಕೂ ಕಾಲಿರಿಸಿದ್ದಾರೆ. ಆನೇಕಲ್‌ನಲ್ಲಿ.. ಕ್ಷೇತ್ರ ಶಿಕ್ಷಣಾಧಿಕಾರಿ ಹೆಸರಲ್ಲಿ ಫೇಸ್ ಬುಕ್‌ನಲ್ಲಿ ಖದೀಮರು ಹಣಕ್ಕೆ ಬೇಡಿಕೆ ಇಡುತ್ತಿರುವ ಪ್ರಸಂಗ ನಡೆದಿದೆ. ಹೌದು.. ಕ್ಷೇತ್ರ ಶಿಕ್ಷಣಾಧಿಕಾರಿ ಹೆಸರಲ್ಲಿ ಫೇಸ್ ಬುಕ್ ಖಾತೆ ತೆರೆದಿರುವ ಖದೀಮರು ಶಿಕ್ಷಣಾಧಿಕಾರಿ ಗೆಳೆಯರ ಬಳಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಆನೇಕಲ್‌ನಲ್ಲಿ ಕೆಲಸ ಮಾಡಿ ಇದೀಗ ವರ್ಗಾವಣೆಯಾಗಿರುವ BEO ರಮೇಶ್ ಅವರ ಹೆಸರಲ್ಲಿ ಖದೀಮರು […]
Follow us on
ಆನೇಕಲ್: ಇಷ್ಟು ದಿನ ಪ್ರಭಾವಿ ಪೊಲೀಸ್ ಅಧಿಕಾರಿಗಳ ಹೆಸರು ಹೇಳಿಕೊಂಡು ಫೇಸ್‌ಬುಕ್ ಮೂಲಕ ದುಡ್ಡೆತ್ತುವ ಪ್ರೋಗ್ರಾಂ ಹಾಕಿಕೊಳ್ಳುತ್ತಿದ್ದ ಖದೀಮರು ಈಗ ಶಿಕ್ಷಣ ಕ್ಷೇತ್ರಕ್ಕೂ ಕಾಲಿರಿಸಿದ್ದಾರೆ. ಆನೇಕಲ್‌ನಲ್ಲಿ.. ಕ್ಷೇತ್ರ ಶಿಕ್ಷಣಾಧಿಕಾರಿ ಹೆಸರಲ್ಲಿ ಫೇಸ್ ಬುಕ್‌ನಲ್ಲಿ ಖದೀಮರು ಹಣಕ್ಕೆ ಬೇಡಿಕೆ ಇಡುತ್ತಿರುವ ಪ್ರಸಂಗ ನಡೆದಿದೆ.
ಹೌದು.. ಕ್ಷೇತ್ರ ಶಿಕ್ಷಣಾಧಿಕಾರಿ ಹೆಸರಲ್ಲಿ ಫೇಸ್ ಬುಕ್ ಖಾತೆ ತೆರೆದಿರುವ ಖದೀಮರು ಶಿಕ್ಷಣಾಧಿಕಾರಿ ಗೆಳೆಯರ ಬಳಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಆನೇಕಲ್‌ನಲ್ಲಿ ಕೆಲಸ ಮಾಡಿ ಇದೀಗ ವರ್ಗಾವಣೆಯಾಗಿರುವ BEO ರಮೇಶ್ ಅವರ ಹೆಸರಲ್ಲಿ ಖದೀಮರು ವಂಚಿಸುವ ಪ್ರಯತ್ನ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ಪೊಲೀಸ್ ಅಧಿಕಾರಿಯೊಬ್ಬರ ಖಾತೆಯಿಂದ ಇದೇ ರೀತಿ ವಂಚನೆ ಮಾಡಿದ್ದ ಖದೀಮರು ಇದೀಗ ಬಿಇಒ ಅವರ ಫೋಟೋ ಹಾಗೂ ಡಿಟೇಲ್ಸ್ ಅನ್ನು ಫೇಸ್ ಬುಕ್‌ನಲ್ಲಿ ಹಾಕಿ ವಂಚಿಸಲು ಯತ್ನಿಸಿದ್ದಾರೆ. ಫೋನ್ ಪೇ ಹಾಗೂ ಗೂಗಲ್ ಪೇನಲ್ಲಿ ಸ್ವಿಚ್ ಆಫ್ ಆಗಿರುವ ಫೋನ್ ನಂಬರ್ಗಳನ್ನು ಬಳಕೆ ಮಾಡಿಕೊಂಡಿರುವ ವಂಚಕರು, ವಿನಯ್ ಕುಮಾರ್ ಎಂಬುವವರ ಖಾತೆಗೆ ಹಣ ಜಮೆ ಮಾಡುವಂತೆ ಮನವಿ ಮಾಡಿದ್ದಾರೆ.