Ram Temple Construction Fund ರಾಮ ಮಂದಿರ ನಿರ್ಮಾಣ ನಿಧಿ ಅಭಿಯಾನ: RSSಗೆ ಸಾಥ್ ನೀಡಿದ ಸುಮಲತಾ

ಸಂಸದೆ ಸುಮಲತಾ ಅಂಬರೀಷ್ RSS ಜಿಲ್ಲಾ ಪ್ರಚಾರಕ್ ಉಮೇಶ್​ರನ್ನು ಭೇಟಿ ಮಾಡಿದ್ದು ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ. ಕಾರ್ಯಕ್ರಮದ ನಂತರ ಮಾತನಾಡಿದ ಸಂಸದೆ ಸುಮಲತಾ "ರಾಮಮಂದಿರ ನಿರ್ಮಾಣ ಅಭಿಯಾನದಲ್ಲಿ ಭಾಗವಹಿಸಲು ಬಂದಿದ್ದೇನೆ. ನನ್ನ ಭೇಟಿ ಹಿಂದೆ ಯಾವ ರಾಜಕೀಯವೂ ಇಲ್ಲ. ನಂಬಿಕೆ, ಸಂಪ್ರದಾಯಗಳಿಗೆ ರಾಜಕೀಯ ಬಣ್ಣ ನೀಡುವುದು ತಪ್ಪು" ಎಂದು ಹೇಳಿದ್ರು.

Ram Temple Construction Fund ರಾಮ ಮಂದಿರ ನಿರ್ಮಾಣ ನಿಧಿ ಅಭಿಯಾನ: RSSಗೆ ಸಾಥ್ ನೀಡಿದ ಸುಮಲತಾ
ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಸಂಸದೆ ಸುಮಲತಾ ಅಂಬರೀಷ್ ಸಾಥ್
Updated By: ಸಾಧು ಶ್ರೀನಾಥ್​

Updated on: Jan 15, 2021 | 3:08 PM

ಮಂಡ್ಯ: ಸಂಸದರಾದ ಸುಮಲತಾ ಅಂಬರೀಷ್ RSS ಜಿಲ್ಲಾ ಪ್ರಚಾರಕ್ ಉಮೇಶ್​ರನ್ನು ಜಿಲ್ಲೆಯ RSS ಕಚೇರಿಯಲ್ಲಿ ಭೇಟಿ ಮಾಡಿದ್ದು ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ. ಬಳಿಕ ಅಭಿಯಾನಕ್ಕೆ ಹಣ ಸಮರ್ಪಿಸಿದ್ದಾರೆ.

ಕಾರ್ಯಕ್ರಮದ ನಂತರ ಮಾತನಾಡಿದ ಸಂಸದೆ ಸುಮಲತಾ “ರಾಮಮಂದಿರ ನಿರ್ಮಾಣ ಅಭಿಯಾನದಲ್ಲಿ ಭಾಗವಹಿಸಲು ಬಂದಿದ್ದೇನೆ. ನನ್ನ ಭೇಟಿ ಹಿಂದೆ ಯಾವ ರಾಜಕೀಯವೂ ಇಲ್ಲ. ನಂಬಿಕೆ, ಸಂಪ್ರದಾಯಗಳಿಗೆ ರಾಜಕೀಯ ಬಣ್ಣ ನೀಡುವುದು ತಪ್ಪು” ಎಂದು ಹೇಳಿದ್ರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಫೆಬ್ರವರಿ 5ರವರೆಗೆ ದೇಣಿಗೆ ಸಂಗ್ರಹಿಸಲು ತೀರ್ಮಾನಿಸಲಾಗಿದೆ. ಹೀಗಾಗಿ ದೇಶದ 11 ಕೋಟಿ ಹಿಂದೂಗಳ ಮನೆಯಿಂದ ದೇಣಿಗೆ ಸಂಗ್ರಹ ಮಾಡಲಾಗುತ್ತಿದೆ. ರಾಮ ಜನ್ಮಭೂಮಿ‌ ತೀರ್ಥಕ್ಷೇತ್ರ ಟ್ರಸ್ಟ್​ನಿಂದ ದೇಶದ 4 ಲಕ್ಷ ಹಳ್ಳಿಗಳಲ್ಲಿ ದೇಣಿಗೆ ಸಂಗ್ರಹಕ್ಕೆ ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಮಂಡ್ಯದಲ್ಲೂ ದೇಣಿಗೆ ಸಂಗ್ರಹಿಸಲಾಗುತ್ತಿದೆ.

Ram Temple Construction Fund ರಾಮಮಂದಿರ ನಿರ್ಮಾಣ ನಿಧಿ ಅಭಿಯಾನಕ್ಕೆ ಆಂಜನೇಯ ದೇಗುಲದಲ್ಲಿ ನಟ ಅಭಿಷೇಕ್ ಚಾಲನೆ