ಧಾರವಾಡ: ಬೆಳ್ಳಂಬೆಳಗ್ಗೆಯೇ ವಿಧಿಯು ರಣಕೇಕೆ ಹಾಕಿದೆ. ಟೆಂಪೊ ಟ್ರಾವೆಲರ್ಗೆ ಟಿಪ್ಪರ್ ಡಿಕ್ಕಿಯಾಗಿ ಧಾರವಾಡ ತಾಲೂಕಿನ ಇಟ್ಟಿಗಟ್ಟಿ ಬಳಿಯ ರಾ. ಹೆ. 4ರಲ್ಲಿ ಅಪಘಾತ ಸಂಭವಿಸಿದ್ದು ಸಾವಿನ ಸಂಖ್ಯೆ 13ಕ್ಕೆ ಏರಿದೆ. ಸಂಕ್ರಾಂತಿ ಮುಗಿಸಿ ಇಂದು ಗೋವಾಗೆ ಹೊರಟಿದ್ದ ಸ್ನೇಹಿತರು ಬಾರದ ಲೋಕಕ್ಕೆ ಪ್ರಯಾಣಿಸಿದ್ದಾರೆ.
ಎಂಸಿಸಿ ಎ ಬ್ಲಾಕ್ ಮತ್ತು ಎಂಸಿಸಿ ಬಿ ಬ್ಲಾಕ್ ಅಪಾರ್ಟ್ಮೆಂಟ್ನ ಒಟ್ಟು 16 ಮಂದಿ ಟಿ.ಟಿ.ಯಲ್ಲಿ ಗೋವಾಗೆ ಹೊರಟ್ಟಿದ್ದರು. ಈ ಪೈಕಿ 14 ಮಂದಿ ಮಹಿಳೆಯರು ಮತ್ತು ಒಬ್ಬ ಡೈವರ್ ಹಾಗೂ ಕ್ಲೀನರ್ ಇದ್ರು. ಮಹಿಳೆಯರೆಲ್ಲರೂ ದಾವಣಗೆರೆ ಸೆಂಟ್ ಪೌಲ್ಸ್ ಕಾನ್ವೆಂಟ್ನ ಬಂದೇ ಬ್ಯಾಚ್ನ ಹಳೆ ವಿದ್ಯಾರ್ಥಿಗಳು. ಎಲ್ಲರೂ ಒಟ್ಟಿಗೆ ಸೇರಿ ಗೋವಾಗೆ ಹೋಗಿ ಎಂಜಾಯ್ ಮಾಡೋಣಾ ಎಂದು ಪ್ಲಾನ್ ಮಾಡಿಕೊಂಡಿದ್ರು. ಆದ್ರೆ ವಿಧಿಯಾಟ ಬೇರೆನೇ ಇತ್ತು. ಟೆಂಪೊ ಟ್ರಾವೆಲರ್ಗೆ ಟಿಪ್ಪರ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 13 ಜನ ಮೃತಪಟ್ಟಿದ್ದಾರೆ.
ಪೂರ್ಣಿಮಾ, ವೀಣಾ, ಆಶಾ ಜಗದೀಶ್, ಮಾನಸಿ, ಪರಂಜ್ಯೋತಿ, ರಾಜೇಶ್ವರಿ ಶಿವಕುಮಾರ್, ಶಕುಂತಲಾ, ಉಷಾ, ವೇದಾ, ನಿರ್ಮಲಾ, ಮಂಜುಳಾ ನಿಲೇಶ್, ಶ್ರೀನಿವಾಸ್, ಪ್ರೀತಿ ರವಿಕುಮಾರ್ ಸೇರಿ ಒಟ್ಟು 11 ಮಹಿಳೆಯರು ಹಾಗೂ ಇಬ್ಬರು ಪುರುಷರು ಮೃತಪಟ್ಟಿದ್ದಾರೆ. ಇನ್ನು ಈ ಅಪಘಾತದಲ್ಲಿ ತಾಯಿ ಪ್ರೀತಿಯವರ ಜೊತೆ ತೆರಳಿದ್ದ ಪುತ್ರಿಯೂ ಮೃತಪಟ್ಟಿದ್ದಾರೆ.
ರಸ್ತೆ ಅಪಘಾತದಲ್ಲಿ ಮಾಜಿ ಶಾಸಕರ ಸೊಸೆ ದುರ್ಮರಣ ಮಾಜಿ ಶಾಸಕ ಗುರುಸಿದ್ದನಗೌಡರ ಸೊಸೆ ಹಾಗೂ ಆರೈಕೆ ಆಸ್ಪತ್ರೆ ಡಾ. ರವಿಕುಮಾರ ಪತ್ನಿ ಪ್ರೀತಿ ರವಿಕುಮಾರ, ಸ್ತ್ರೀ ರೋಗ ತಜ್ಞ ಡಾ.ವೀಣಾ ಪ್ರಕಾಶ, ಎಸ್.ಎಸ್ ಬಡಾವಣೆಯ ಮಾನಸಿ ಹಾಗೂ ಅವರ ಪುತ್ರಿ ರಶ್ಮಿತಾ ಹಾಗೂ ಸಿದ್ದವೀರಪ್ಪ ಬಡಾವಣೆ ವರ್ಷಿತಾ, ದಾವಣಗೆರೆ ಬಾಲಾಜಿ ರೈಸ್ ಮಿಲ್ ಮಾಲೀಕರಾದ ರಜನಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅಪಘಾತಕ್ಕೆ ಮೋದಿ ಸಂತಾಪ ಇಟ್ಟಿಗಟ್ಟಿ ಬಳಿ ನಡೆದ ಅಪಘಾತಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಅಪಘಾತ ಅತ್ಯಂತ ದುರಂತವಾದ ಘಟನೆ. ಸಾವನ್ನಪ್ಪಿದವರಲ್ಲಿ ಬಹುತೇಕರು ಡಾಕ್ಟರ್ಗಳೇ ಇದ್ದಾರೆ. 13 ಜನರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ರು.
ಕರ್ನಾಟಕದ ಧಾರವಾಡ ಜಿಲ್ಲೆಯಲ್ಲಿ ಇಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತರಾದವರ ಬಗ್ಗೆ ಸಂತಾಪ ಸೂಚಿಸುವೆ. ಈ ಸಂದರ್ಭದಲ್ಲಿ ದುಃಖತಪ್ತ ಕುಟುಂಬಗಳ ನೋವಿನಲ್ಲಿ ನಾನೂ ಭಾಗಿ. ಅಪಘಾತದಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುವೆ: PM @narendramodi
— PMO India (@PMOIndia) January 15, 2021
ಟೆಂಪೋಗೆ ಟಿಪ್ಪರ್ ಡಿಕ್ಕಿ: ಗೋವಾ ಪ್ರವಾಸಕ್ಕೆ ತೆರಳ್ತಿದ್ದ 11 ಮಂದಿ ಹಳೆ ವಿದ್ಯಾರ್ಥಿಗಳ ದುರ್ಮರಣ