ನೋಡ ನೋಡುತ್ತಿದ್ದಂತೆಯೇ ನಡು ರಸ್ತೆಯಲ್ಲಿ ಸ್ಫೋಟಗೊಂಡ ಗ್ಯಾಸ್ ಸಿಲಿಂಡರ್

|

Updated on: May 29, 2020 | 3:08 PM

ಮಂಗಳೂರು: ನೋಡ ನೋಡುತ್ತಿದ್ದಂತೆಯೇ ನಡು ರಸ್ತೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಜೆಪ್ಪು ಮಾರುಕಟ್ಟೆಯಲ್ಲಿ ನಡೆದಿದೆ. ಮಾರ್ಕೆಟ್​ನ ಗ್ಯಾಸ್ ಸಿಲಿಂಡರ್ ಏಜೆನ್ಸಿ ಅಂಗಡಿಯಲ್ಲಿ ಗ್ಯಾಸ್ ಲೀಕ್ ಆಗಿದೆ. ಹೀಗಾಗಿ ಸ್ಥಳೀಯರು ಅಂಗಡಿಯಿಂದ ಗ್ಯಾಸ್ ಸಿಲಿಂಡರನ್ನು ಹೊರಗೆ ತಂದಿದ್ದರು. ಅಷ್ಟರಲ್ಲೇ ಗ್ಯಾಸ್ ಸಿಲಿಂಡರ್​ಗೆ ಬೆಂಕಿ ಹತ್ತಿಕೊಂಡಿದೆ. ಸ್ಫೋಟದ ತೀವ್ರತೆಗೆ ಸಿಲಿಂಡರ್ 50 ಮೀಟರ್ ಎತ್ತರಕ್ಕೆ ಚಿಮ್ಮಿದೆ. ಸಿಲಿಂಡರ್ ಸ್ಫೋಟಗೊಂಡ ಪಕ್ಕದ ರಸ್ತೆಯಲ್ಲೇ ವಾಹನಗಳು ಸಂಚರಿಸುತ್ತಿದ್ದವು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ನೋಡ ನೋಡುತ್ತಿದ್ದಂತೆಯೇ ನಡು ರಸ್ತೆಯಲ್ಲಿ ಸ್ಫೋಟಗೊಂಡ ಗ್ಯಾಸ್ ಸಿಲಿಂಡರ್
Follow us on

ಮಂಗಳೂರು: ನೋಡ ನೋಡುತ್ತಿದ್ದಂತೆಯೇ ನಡು ರಸ್ತೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಜೆಪ್ಪು ಮಾರುಕಟ್ಟೆಯಲ್ಲಿ ನಡೆದಿದೆ. ಮಾರ್ಕೆಟ್​ನ ಗ್ಯಾಸ್ ಸಿಲಿಂಡರ್ ಏಜೆನ್ಸಿ ಅಂಗಡಿಯಲ್ಲಿ ಗ್ಯಾಸ್ ಲೀಕ್ ಆಗಿದೆ.

ಹೀಗಾಗಿ ಸ್ಥಳೀಯರು ಅಂಗಡಿಯಿಂದ ಗ್ಯಾಸ್ ಸಿಲಿಂಡರನ್ನು ಹೊರಗೆ ತಂದಿದ್ದರು. ಅಷ್ಟರಲ್ಲೇ ಗ್ಯಾಸ್ ಸಿಲಿಂಡರ್​ಗೆ ಬೆಂಕಿ ಹತ್ತಿಕೊಂಡಿದೆ. ಸ್ಫೋಟದ ತೀವ್ರತೆಗೆ ಸಿಲಿಂಡರ್ 50 ಮೀಟರ್ ಎತ್ತರಕ್ಕೆ ಚಿಮ್ಮಿದೆ. ಸಿಲಿಂಡರ್ ಸ್ಫೋಟಗೊಂಡ ಪಕ್ಕದ ರಸ್ತೆಯಲ್ಲೇ ವಾಹನಗಳು ಸಂಚರಿಸುತ್ತಿದ್ದವು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Published On - 10:05 am, Fri, 29 May 20