Gas tanker overturns ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ: ಸಮೀಪದಲ್ಲಿ ಬೆಂಕಿ ಬಳಸದಂತೆ ಸೂಚನೆ

| Updated By: ಸಾಧು ಶ್ರೀನಾಥ್​

Updated on: Feb 02, 2021 | 10:52 AM

ರಸ್ತೆ ಸಂಚಾರ ಬಹುತೇಕ ವ್ಯತ್ಯಯವಾಗಿದ್ದು, ಮಂಗಳೂರು-ಮಾಣಿ-ಪುತ್ತೂರು ಮಾರ್ಗವಾಗಿ ಸಂಚರಿಸುವವರು ಬದಲಿ ಮಾರ್ಗ ಪುತ್ತೂರು- ಕಬಕ—ವಿಟ್ಲ-ಕಲ್ಲಡ್ಕ ಮಾರ್ಗವಾಗಿ ಸಂಚರಿಸಬಹುದಾಗಿದೆ.

Gas tanker overturns ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ: ಸಮೀಪದಲ್ಲಿ ಬೆಂಕಿ ಬಳಸದಂತೆ ಸೂಚನೆ
ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ಪಲ್ಟಿ ಆದ ಟ್ಯಾಂಕರ್
Follow us on

ಮಂಗಳೂರು: ಜಿಲ್ಲೆಯಿಂದ ಬೆಂಗಳೂರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಂಟ್ವಾಳ ತಾಲೂಕಿನ ಸೂರಿಕುಮೇರುವಿನ ಮಸೀದಿ ಎದುರು ರಸ್ತೆ ಮಧ್ಯೆ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದ್ದು, ರಸ್ತೆ ಸಂಚಾರಕ್ಕೆ ತಡೆ ಉಂಟಾಗಿದೆ. ಅದೃಷ್ಟವಶಾತ್ ಟ್ಯಾಂಕರ್​ನಿಂದ ಗ್ಯಾಸ್ ಸೋರಿಕೆಯಾಗಿಲ್ಲ.

ಸುತ್ತಮುತ್ತಲಿನ ಮನೆಗಳಲ್ಲಿ ಬೆಂಕಿ ಬಳಸದಂತೆ ಮಸೀದಿಯ ಮೈಕ್​ನಲ್ಲಿ ಪೊಲೀಸರು ಸೂಚನೆ ನೀಡಿದ್ದಾರೆ. ರಸ್ತೆ ಸಂಚಾರ ಬಹುತೇಕ ವ್ಯತ್ಯಯವಾಗಿದ್ದು, ಮಂಗಳೂರು-ಮಾಣಿ-ಪುತ್ತೂರು ಮಾರ್ಗವಾಗಿ ಸಂಚರಿಸುವವರು ಬದಲಿ ಮಾರ್ಗ ಪುತ್ತೂರು- ಕಬಕ—ವಿಟ್ಲ-ಕಲ್ಲಡ್ಕ ಮಾರ್ಗವಾಗಿ ಸಂಚರಿಸಬಹುದಾಗಿದೆ.

 

Published On - 10:51 am, Tue, 2 February 21