ಬೆಂಗಳೂರು: ಮನೆಯಲ್ಲಿ ವಿಶೇಷ ಆಚರಣೆಗಳಿದ್ದರೆ ಚಿನ್ನ, ಬೆಳ್ಳಿ ಖರೀದಿಗೆ ಬೇಡಿಕೆ ಹೆಚ್ಚಿರುತ್ತದೆ. ಮದುವೆ, ವಿಶೇಷಗಳಲ್ಲಿ ನಾವು ಅಲಂಕಾರಗೊಳ್ಳಲು ಚಿನ್ನವನ್ನು ಖರೀದಿಸಿದರೆ, ಪೂಜೆಯ ಸಮಯದಲ್ಲಿ ದೇವರನ್ನು ಅಲಂಕಾರಗೊಳಿಸಲು ಅಥವಾ ಪೂಜೆಯ ತಟ್ಟೆ, ಲೋಟಗಳು ಬೆಳ್ಳಿಯದಾಗಿದ್ದರೆ ಶ್ರೇಷ್ಠ ಎಂಬ ಕಾರಣಕ್ಕೋ ಬೆಳ್ಳಿಯನ್ನು ಖರೀದಿಸಲು ಮುಂದಾಗುತ್ತೇವೆ. ಚಿನ್ನದ ವಹಿವಾಟು ಹೇಗಿದೆ? ಎಷ್ಟಕ್ಕೆ ಚಿನ್ನ ಮಾರಾಟವಾಗುತ್ತಿದೆ ಎಂಬುದರ ಕುರಿತು ಕುತೂಹಲ ಮೂಡಿರಲೇ ಬೇಕಲ್ಲವೇ? ಇಲ್ಲಿದೆ ಸಂಪೂರ್ಣ ವಿವರ.
ದೈನಂದಿನ ದರ ಬದಲಾವಣೆಯನ್ನು ಗಮನಿಸಿದರೆ ಚಿನ್ನ ದರದಲ್ಲಿ ಇಂದು ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ನಿನ್ನೆಯ ದರವನ್ನೇ ಚಿನ್ನ ಕಾಪಾಡಿಕೊಂಡು ಬಂದಿದೆ ಎಂದು ಹೇಳಬಹುದು. 22 ಕ್ಯಾರೆಟ್ 10 ಗ್ರಾಂ ಚಿನ್ನ 43,840 ರೂಪಾಯಿಗೆ ಮಾರಾಟವಾಗುತ್ತಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನವನ್ನು 44,840 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ. ಹಾಗೆಯೇ ಬೆಳ್ಳಿ ದರದಲ್ಲಿ ಕೊಂಚ ಏರಿಕೆಯಾಗಿದ್ದು, 1ಕೆಜಿ ಬೆಳ್ಳಿ ದರ ನಿನ್ನೆ 67,400 ರೂಪಾಯಿಗೆ ಮಾರಾಟಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 200 ರೂಪಾಯಿಯಷ್ಟು ಏರಿಕೆ ಕಂಡಿದ್ದು, ಇಂದಿನ ದರ 67,600 ರೂಪಾಯಿ ಆಗಿದೆ.
ಮಹಿಳೆಯರಿಗಂತೂ ಚಿನ್ನ ಅಂದರೆ ಇಷ್ಟ. ಚಿನ್ನಕ್ಕೆ ಮುಗಿ ಬೀಳದರವಿದ್ದಾರೆಯೇ. ಚಿನ್ನ ದರ ಕಡಿಮೆಯಾದಂತೆ ಗ್ರಾಹಕರಿಗೆ ಖುಷಿಯೋ ಖುಷಿ. ಆಗ ಚಿನ್ನದ ಬೇಡಿಕೆಯೂ ಹೆಚ್ಚು. ದರ ಕಡಿಮೆ ಇದ್ದಾಗಲೇ ಚಿನ್ನದ ಮೇಲೆ ಹೂಡಿಕೆ ಮಾಡಲು ಸೂಕ್ತ ಸಮಯವಿದು ಎಂದು ತಜ್ಞರೂ ಸಲಹೆ ನೀಡುತ್ತಿದ್ದಾರೆ. ಹಿಂದಿನ ವಾರದಲ್ಲಿ ಇಳಿಕೆ ಕಂಡಿದ್ದ ಚಿನ್ನ ಇದೀಗ ಕೊಂಚ ಏರಿಕೆಯತ್ತ ಮುಖ ಮಾಡಿದೆ. ಕಳೆದ ವರ್ಷದ ಗರಿಷ್ಟ ಮಟ್ಟಕ್ಕೆ ಚಿನ್ನ ದರ ತಲುಪದಿದ್ದರೂ, ದೈನಂದಿನ ದರ ಬದಲಾವಣೆಯಲ್ಲಿ ಏರಿಳಿತ ಕಾಣುತ್ತಲೇ ಇದೆ. ಹಾಗಿದ್ದಲ್ಲಿ ದೈನಂದಿನ ದರ ಪರಿಶಿಲನೆಯನ್ನು ಗಮನಿಸಿದಾಗ ಎಷ್ಟಿರಬಹುದು ಚಿನ್ನದ ದರ ಎಂಬುದರ ಬಗ್ಗೆ ಇಲ್ಲಿದೆ ವಿವರ.
22 ಕ್ಯಾರೆಟ್ ಚಿನ್ನ ದರ ಮಾಹಿತಿ
1ಗ್ರಾಂ ಚಿನ್ನ ದರ ನಿನ್ನೆ 4,384 ರೂಪಾಯಿಗೆ ಮಾರಾಟವಾಗಿತ್ತು, ಹಾಗೆಯೇ ಇಂದು ದರದಲ್ಲಿ ಯಾವುದೇ ಬದಲಾವಣೆ ಇಲ್ಲದೇ, ಚಿನ್ನ ದರ ಸ್ಥಿರತೆಯನ್ನು ಕಾಪಾಡಿಕೊಂಡಿದೆ. 8 ಗ್ರಾಂ ಚಿನ್ನ ದರ 35,072 ರೂಪಾಯಿಗೆ ಮಾರಾಟವಾಗುತ್ತಿದೆ. 10 ಗ್ರಾಂ ಚಿನ್ನ 43,840 ರೂಪಾಯಿಗೆ ಮಾರಾಟವಾಗುತ್ತಿದೆ. ಹಾಗೆಯೇ 100 ಗ್ರಾಂ ಚಿನ್ನ 4,38,400 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ.
24 ಕ್ಯಾರೆಟ್ ಚಿನ್ನ ಮಾಹಿತಿ
ಇಂದು ಚಿನ್ನ ದರ ಸ್ಥಿರತೆಯನ್ನು ಕಾಪಾಡಿಕೊಂಡಿದೆ. ದೈನಂದಿನ ದರ ಬದಲಾವಣೆಯಲ್ಲಿ ಚಿನ್ನ ದರವನ್ನು ಪರಿಶೀಲಿಸಿದಾಗ ನಿನ್ನೆಯ ದರವನ್ನೇ ಚಿನ್ನ ಹೊಂದಿದೆ. 1ಗ್ರಾಂ ಚಿನ್ನ ದರ 4,484 ರೂಪಾಯಿ, 8 ಗ್ರಾಂ ಚಿನ್ನ 35,872 ರೂಪಾಯಿ, 10 ಗ್ರಾಂ ಚಿನ್ನ 44,840 ರೂಪಾಯಿ ಹಾಗೂ 100ಗ್ರಾಂ ಚಿನ್ನ 4,48,400 ರೂಪಾಯಿಗೆ ಮಾರಾಟವಾಗುತ್ತಿದೆ. ನಿನ್ನೆಯ ಚಿನ್ನ ದರಕ್ಕೂ ಇಂದಿಗೂ ದರದಲ್ಲಿ ಯಾವುದೇ ಬದಲಾವಣೆಗಳಿಲ್ಲ.
ಬೆಳ್ಳಿ ದರ ಮಾಹಿತಿ
ಪೂಜೆಗೆಂದು ಮನೆಯಲ್ಲಿ ಬೆಳ್ಳಿ ಕೊಳ್ಳಬೇಕು ಎಂದು ಯೋಚಿಸುತ್ತಿರುತ್ತೀರಿ. ದರ ಎಷ್ಟಿರಬಹುದು ಎಂಬುದರ ಗೊಂದಲವೂ ಇರಬಹುದು. ಬೆಳ್ಳಿ ದೇವರ ಮನೆಗೆ ಶ್ರೇಷ್ಠ ಎನ್ನುತ್ತಾರೆ ಹಿರಿಯರು. ದೇವರಿಗೆ ಬೆಳ್ಳಿಯ ಕವಚ, ಪೂಜೆಗೆಂದು ತಟ್ಟೆ ಜೊತೆಗೆ ಲೋಟ, ಮಹಿಳೆಯರಿಗೆ ಕಾಲುಂಗುರ, ಗೆಜ್ಜೆ ಅಂದದ ಜೊತೆಗೆ ಶ್ರೇಷ್ಠವೂ ಕೂಡಾ. ಹಾಗಿದ್ದಾಗ ಎಷ್ಟಿದೆ ಎಂಬುದನ್ನು ಒಮ್ಮೆ ಗಮನಿಸಿ ಇಂದೇ ಬೆಳ್ಳಿ ಖರೀದಿಸುವುದರ ಕುರಿತು ಯೋಚಿಸಿ.
ದೈನಂದಿನ ದರ ಬದಲಾವಣೆಗೆ ಹೋಲಿಸಿದರೆ ಬೆಳ್ಳಿ ಕೊಂಚ ಏರಿಕೆಯಾಗಿದೆ. 1ಗ್ರಾಂ ಬೆಳ್ಳಿ ನಿನ್ನೆ 67.40 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 67.60 ರೂಪಾಯಿ ಆಗಿದೆ. 8 ಗ್ರಾಂ ಬೆಳ್ಳಿಯನ್ನು ನಿನ್ನೆ 539.20 ರೂಪಾಯಿಗೆ ಗ್ರಾಹಕರು ಕೊಂಡಿದ್ದರು. ಇದೀಗ ದರ 540.80 ರೂಪಾಯಿ ಆಗಿದೆ. 10ಗ್ರಾಂ ಬೆಳ್ಳಿ ದರ ನಿನ್ನೆ 674 ರೂಪಾಯಿ ಆಗಿದ್ದು, ಇಂದಿನ ದರ 676 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 2 ರೂಪಾಯಿ ಏರಿಕೆ ಕಂಡಿದೆ. 100 ಗ್ರಾಂ ಬೆಳ್ಳಿ ನಿನ್ನೆ 6,740 ರೂಪಾಯಿಗೆ ಮಾರಾಟವಾಗಿದ್ದು, ಇಂದಿನ ದರ 6,760 ರೂಪಾಯಿಗೆ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 20 ರೂಪಾಯಿಯಷ್ಟು ಏರಿಕೆ ಕಂಡಿದೆ. ಹಾಗೆಯೇ 1ಕೆಜಿ ಬೆಳ್ಳಿ ದರ ನಿನ್ನೆ 67,400 ರೂಪಾಯಿಗೆ ಮಾರಾಟಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 200 ರೂಪಾಯಿಯಷ್ಟು ಏರಿಕೆ ಕಂಡಿದ್ದು, ಇಂದಿನ ದರ 67,600 ರೂಪಾಯಿ ಆಗಿದೆ.
ಇದನ್ನೂ ಓದಿ: Gold Silver Price: ಗ್ರಾಹಕರ ಬೇಡಿಕೆಯ ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ.. ಇಲ್ಲಿದೆ ನಿಖರ ಮಾಹಿತಿ
ಇದನ್ನೂ ಓದಿ: Gold Silver Price: ಚಿನ್ನ ದರ ಏರಿಕೆ, ಬೆಳ್ಳಿ ದರ ಇಳಿಕೆ.. ಎಷ್ಟಿದೆ ಗೊತ್ತಾ ಇಂದಿನ ದರ?
Published On - 8:33 am, Wed, 17 March 21