Gold Silver Price: ಗ್ರಾಹಕರ ಬೇಡಿಕೆಯ ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ.. ಇಲ್ಲಿದೆ ನಿಖರ ಮಾಹಿತಿ

Gold Silver Rate in Bengaluru: ದೈನಂದಿನ ದರ ಪರಿಶೀಲನೆಯಲ್ಲಿ ಚಿನ್ನ ದರ ಇಂದು ಕೊಂಚ ಇಳಿಕೆ ಕಂಡಿದೆ. ಬೆಳ್ಳಿ ದರ ಏರಿಕೆಯತ್ತ ಸಾಗಿದೆ. ಎಷ್ಟಿರಬಹುದು ದರ ಎಂಬುದರ ಮಾಹಿತಿ ಇಲ್ಲಿದೆ.

Gold Silver Price: ಗ್ರಾಹಕರ ಬೇಡಿಕೆಯ ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ.. ಇಲ್ಲಿದೆ ನಿಖರ ಮಾಹಿತಿ
ಸಾಂದರ್ಭಿಕ ಚಿತ್ರ
Follow us
shruti hegde
|

Updated on: Mar 16, 2021 | 8:40 AM

ಬೆಂಗಳೂರು: ದೈನಂದಿನ ದರ ಬದಲಾವಣೆಯಲ್ಲಿ ಚಿನ್ನ ದರವನ್ನು ಪರಿಶೀಲಿಸಿದಾಗ ಇಂದು ದರ ಇಳಿಕೆ ಕಂಡಿದೆ. ಚಿನ್ನ ಕೊಳ್ಳುವಲ್ಲಿ ಗ್ರಾಹಕರು ಮುಗಿಬಿದ್ದಿದ್ದಾರೆ. ಬೆಳ್ಳಿ ದರವನ್ನು ನಿನ್ನೆ ದರಕ್ಕೆ ಹೋಲಿಸಿದರೆ ಕೊಂಚ ಏರಿಕೆ ಕಂಡಿದೆ. ಕಳೆದ ವರ್ಷ ಗರಿಷ್ಠ ಮಟ್ಟ ತಲುಪಿದ್ದ ಚಿನ್ನ ಇದೀಗ ಭಾರೀ ಪರಮಾಣದಲ್ಲಿ ಕುಸಿದಿದೆ. ಹಾಗಾಗಿ, ಹೂಡಿಕೆಗೆ ಸೂಕ್ತ ಸಮಯವಿದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಚಿನ್ನ ದರವನ್ನು ಪ್ರತಿ ದಿನ ಪರಿಶೀಲಿಸುವುದು ಅಗತ್ಯ. ಕೈಯ್ಯಲ್ಲಿ ಹಣವಿದ್ದಾಗ ಚಿನ್ನಾಭರಣ ಕೊಳ್ಳಬೇಕೆ ಅಥವಾ ಹೂಡಿಕೆ ಮಾಡಬಹುದೇ ಎಂಬೆಲ್ಲಾ ಸಂದೇಹ ಉಂಟಾಗುವುದು ಸಹಜ. ದೈನಂದಿನ ದರ ಪರಿಶೀಲನೆಯಲ್ಲಿ ಚಿನ್ನ ದರ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನ ನಿನ್ನೆ 43,870 ರೂಪಾಯಿ ಅಗಿದ್ದು, ಇಂದಿನ ದರ 43,840 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನ ದರ ನಿನ್ನೆ 44,870 ರೂಪಾಯಿ ಆಗಿದ್ದು, ಇಂದಿನ ದರ 44,840 ರೂಪಾಯಿಗೆ ಇಳಿಕೆ ಆಗಿದೆ. ದೈನಂದಿನ ದರ ಬದಲಾವಣೆಯನ್ನು ಪರಿಶೀಲಿಸಿದಾಗ 30 ರೂಪಾಯಿಯಷ್ಟು ಇಳಿಕೆ ಕಂಡಿದೆ. ಹಾಗಿದ್ದಲ್ಲಿ 1ಕೆಜಿ ಬೆಳ್ಳಿ ದರ ನಿನ್ನೆ 66,900 ರೂಪಾಯಿ ಆಗಿದ್ದು, ಇಂದಿನ ದರ 67,400 ರೂಪಾಯಿ ಅಗಿದೆ. ದೈನಂದಿನ ದರ ಬದಲಾವಣೆಯಲ್ಲಿ 500 ರೂಪಾಯಿ ಏರಿಕೆ ಕಂಡಿದೆ.

22ಕ್ಯಾರೆಟ್ ಚಿನ್ನ ದರ 1 ಗ್ರಾಂ ಚಿನ್ನ ದರ ನಿನ್ನೆ 4,387 ರೂಪಾಯಿಗೆ ಮಾರಾಟವಾಗಿದೆ. ಇಂದು ದರದಲ್ಲಿ 4,384 ವಹಿವಾಟು ನಡೆಯುತ್ತಿದೆ. ನಿನ್ನೆಗಿಂತ ಇಂದು ಚಿನ್ನ ದರ ಕೊಂಚ ಇಳಿಕೆಯತ್ತ ಸಾಗಿದೆ. 8 ಗ್ರಾಂ ಚಿನ್ನ ದರ ನಿನ್ನೆ 35,096 ರೂಪಾಯಿ ಆಗಿದ್ದು, ಇಂದು ದರ 35,072 ರೂಪಾಯಿ ಆಗಿದೆ. ದರ ಬದಲಾವಣೆಯಲ್ಲಿ 24 ರೂಪಾಯಿಯಷ್ಟು ಇಳಿಕೆ ಕಂಡಿದೆ. 10 ಗ್ರಾಂ ಚಿನ್ನ ದರ ನಿನ್ನೆ 43,870 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 43,840 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 30 ರೂಪಾಯಿಯಷ್ಟು ಇಳಿಕೆ ಕಂಡಿದೆ. 100 ಗ್ರಾಂ ಚಿನ್ನ ದರ ನಿನ್ನೆ 4,38,700 ರೂಪಾಯಿಗೆ ಗ್ರಾಹಕರು ಖರೀಸಿದ್ದು, ಇಂದು ದರ 4,38,400 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 300 ರೂಪಾಯಿ ಇಳಿಕೆ ಕಂಡಿದೆ.

24 ಕ್ಯಾರೆಟ್ ಚಿನ್ನ ದರ 1ಗ್ರಾಂ ಚಿನ್ನ ದರ ನಿನ್ನೆ 4,487 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 4,484ರೂಪಾಯಿಗೆ ವಹಿವಾಟು ನಡೆಯುತ್ತಿದೆ. 8 ಗ್ರಾಂ ಚಿನ್ನ ನಿನ್ನೆ 35,896 ರೂಪಾಯಿ ಇದ್ದು, ಇಂದಿನ ದರ 35,872 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 24 ರೂಪಾಯಿ ಇಳಿಕೆ ಕಂಡಿದೆ. 10 ಗ್ರಾಂ ಚಿನ್ನ ದರ ನಿನ್ನೆ 44,870 ರೂಪಾಯಿ ಆಗಿದ್ದು, ಇಂದಿನ ದರ 44,840 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 30 ರೂಪಾಯಿ ಇಳಿಕೆ ಕಂಡಿದೆ. 100 ಗ್ರಾಂ ಚಿನ್ನ ದರ ನಿನ್ನೆ 4,48,700 ರೂಪಾಯಿ ಆಗಿದ್ದು, ಇಂದಿನ ದರ 4,48,400 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 300 ರೂಪಾಯಿಯಷ್ಟು ಇಳಿಕೆ ಕಂಡಿದೆ.

ಬೆಳ್ಳಿ ದರ ಮಾಹಿತಿ 1 ಗ್ರಾಂ ಬೆಳ್ಳಿ ದರ ನಿನ್ನೆ 66.90 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ ಕೊಂಚ ಏರಿಕೆ ಕಂಡಿದೆ. ಇಂದಿನ ದರ ನಿಗದಿಯಾಗಿದೆ. 8 ಗ್ರಾಂ ಬೆಳ್ಳಿ ದರ ನಿನ್ನೆ 535 ರೂಪಾಯಿಗೆ ಮಾರಾಟವಾಗಿದ್ದು, ಇಂದಿನ ದರ 539 ರೂಪಾಯಿ ಆಗಿದೆ. 10 ಗ್ರಾಂ ಬೆಳ್ಳಿ ದರ ನಿನ್ನೆ 669 ರೂಪಾಯಿ ಆಗಿದ್ದು, ಇಂದಿನ ದರ 674 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 5 ರೂಪಾಯಿಯಷ್ಟು ಏರಿಕೆ ಕಂಡಿದೆ. 100 ಗ್ರಾಂ ಬೆಳ್ಳಿ ದರ ನಿನ್ನೆ 6,690 ರೂಪಾಯಿಗೆ ಮಾರಾಟವಾಗಿದ್ದು, ಇಂದಿನ ದರ 6,740 ರೂಪಾಯಿಗೆ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 50 ರೂಪಾಯಿ ಏರಿಕೆ ಕಂಡಿದೆ. 1ಕೆಜಿ ಬೆಳ್ಳಿ ದರ ನಿನ್ನೆ 66,900 ರೂಪಾಯಿಗೆ ಮಾರಾಟವಾಗಿದ್ದು, ಇಂದಿನ ದರ 67,400 ರೂಪಾಯಿಗೆ ಏರಿದೆ. ದೈನಂದಿನ ದರ ಬದಲಾವಣೆಯಲ್ಲಿ 500 ರೂಪಾಯಿ ಏರಿಕೆ ಕಂಡಿದೆ.

ಇದನ್ನೂ ಓದಿ: Gold Silver Price: ಚಿನ್ನ ದರ ಕೊಂಚ ಏರಿಕೆ, ಬೆಳ್ಳಿ ದರ ಇಳಿಕೆ! 1ಕೆಜಿ ಬೆಳ್ಳಿ ದರ 66,900 ರೂಪಾಯಿ

ಇದನ್ನೂ ಓದಿ: Gold Silver Price: ಚಿನ್ನ ದರ ಏರಿಕೆ, ಬೆಳ್ಳಿ ದರ ಇಳಿಕೆ.. ಎಷ್ಟಿದೆ ಗೊತ್ತಾ ಇಂದಿನ ದರ?