AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol Diesel Price: ಏರಿಕೆ ಇಲ್ಲದ ಪೆಟ್ರೋಲ್, ಡೀಸೆಲ್ ದರ! ಗ್ರಾಹಕರು ನಿರಾಳ

Petrol Diesel Rate in Bangalore: ತೈಲ ಕಂಪನಿಗಳಿಂದ ಇಂದು ಬುಧವಾರ ಇಂಧನ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಸತತವಾಗಿ 18ನೇ ದಿನ ಕೂಡಾ ಪೆಟ್ರೋಲ್​, ಡೀಸೆಲ್ ಸ್ಥಿರತೆ ಕಾಪಾಡಿಕೊಂಡಿದೆ.

Petrol Diesel Price: ಏರಿಕೆ ಇಲ್ಲದ ಪೆಟ್ರೋಲ್, ಡೀಸೆಲ್ ದರ! ಗ್ರಾಹಕರು ನಿರಾಳ
ಪ್ರಾತಿನಿಧಿಕ ಚಿತ್ರ
shruti hegde
|

Updated on:Mar 17, 2021 | 9:15 AM

Share

ಬೆಂಗಳೂರು: ಕಳೆದ ತಿಂಗಳು ಫೆಬ್ರವರಿಯಲ್ಲಿ ಪೆಟ್ರೋಲ್​, ಡೀಸೆಲ್ ದರ ನಿರಂತರವಾಗಿ ಏರಿಕೆಯತ್ತ ಸಾಗಿತ್ತು. ನಂತರ ಮಾರ್ಚ್​ ತಿಂಗಳ ಪ್ರಾರಂಭದಿಂದಲೂ ಇಂಧನ ದರ ಸ್ಥಿರತೆ ಕಾಪಾಡಿಕೊಂಡಿದೆ. ಇನ್ನು, ಮೆಟ್ರೋ ನಗರಗಳಾದ ದೆಹಲಿ ಮತ್ತು ಮುಂಬೈನಲ್ಲಿ ಪೆಟ್ರೋಲ್​ ದರ ಗರಿಷ್ಠ ಮಟ್ಟದಲ್ಲಿದೆ. ಇನ್ನೂ ದರ ಹೆಚ್ಚಳವಾಗಿದ್ದೇ ಆದಲ್ಲಿ ಶತಕ ಬಾರಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಬೆಂಗಳೂರಿನಲ್ಲಿ ಇಂದು ಗ್ರಾಹಕರು ಪ್ರತಿ ಲೀಟರ್​ ಪೆಟ್ರೋಲ್​ಅನ್ನು 94.22 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ. ಡೀಸೆಲ್​ ದರ 86.37 ರೂಪಾಯಿಗೆ ಮಾರಾಟವಾಗುತ್ತಿದೆ.

ತೈಲ ಕಂಪನಿಗಳಿಂದ ಇಂದು ಬುಧವಾರ ಇಂಧನ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಸತತವಾಗಿ 18ನೇ ದಿನ ಕೂಡಾ ಪೆಟ್ರೋಲ್​, ಡೀಸೇಲ್ ಸ್ಥಿರತೆ ಕಾಪಾಡಿಕೊಂಡಿದೆ. ದೇಶದಲ್ಲಿ ಇಂಧನ ದರ ಏರಿಕೆಯಿಂದಾಗಿ ಬೇಡಿಕೆಯೂ ಸಹ ಕಡಿಮೆಯಾಗಿದೆ ಎಂದು ಬಲ್ಲವರು ಅಭಿಪ್ರಾಯ ಪಟ್ಟಿದ್ದಾರೆ. ಪೆಟ್ರೋಲ್​, ಡೀಸೆಲ್​ ದರ ಏರಿಕೆ ಖಂಡಿಸಿ ಅದೆಷ್ಟೋ ಪ್ರತಿಭಟನೆಗಳು, ಧರಣಿಗಳು ನಡೆದಿದ್ದರೂ ಸಹ ಯಾವುದೇ ಬದಲಾವಣೆಗಳು ಕಂಡು ಬಂದಿರಲಿಲ್ಲ. ಪೆಟ್ರೋಲ್​, ಡೀಸೆಲ್ ದರ ಏರಿಕೆಯತ್ತ ಸಾಗುತ್ತಲೇ ಇದ್ದುದನ್ನು ನೋಡುತ್ತಿದ್ದ ಗ್ರಾಹಕರು ಕಂಗಾಲಾಗಿದ್ದರು. ದರ ಇಳಿಕೆಯತ್ತ ಮುಖ ಮಾಡುವುದು ಯಾವಾಗ? ಎಂಬುದೊಂದೇ ಗ್ರಾಹಕರ ಪ್ರಶ್ನೆಯಾಗಿತ್ತು. ಹೀಗಿದ್ದಾಗ ಇಂಧನ ದರ ಇಳಿಕೆಯತ್ತ ಸಾಗದಿದ್ದರೂ ಸ್ಥಿರತೆ ಕಾಪಾಡಿಕೊಂಡಿದೆ ಎಂಬುದೊಂದೇ ಗ್ರಾಹಕರಿಗೆ ನಿರಾಳ ಸಂಗತಿ.

ಇನ್ನು, ದೆಹಲಿಯಲ್ಲಿ ಇಂದು ಪ್ರತಿ ಲೀಟರ್​ ಪೆಟ್ರೋಲ್​ ದರ 91.17 ರೂಪಾಯಿಗೆ ಮಾರಾಟವಾಗಿತ್ತಿದೆ. ಮುಂಬೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ಗರಿಷ್ಠ ಮಟ್ಟ ತಲುಪಿದ್ದು 97.57 ರೂಪಾಯಿಗೆ ಮಾರಾಟವಾಗುತ್ತಿದೆ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 91.35 ರೂಪಾಯಿಗೆ ಮಾರಾಟವಾಗುತ್ತಿದ್ದು, ಚೆನ್ನೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 93.11 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ. ನೋಯ್ಡಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 89.38 ರೂಪಾಯಿಗೆ ಮಾರಾಟವಾಗುತ್ತಿದೆ.

ಇನ್ನು, ಡೀಸೆಲ್​ ದರವನ್ನು ಪರಿಶೀಲಿಸಿದಾಗ, ದೆಹಲಿಯಲ್ಲಿ ಪ್ರತಿ ಲೀಟರ್​ ಡೀಸೆಲ್​ ಇಂದು 81.47 ರೂಪಾಯಿಗೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ ಪ್ರತಿ ಲೀಟರ್​ ಡೀಸೆಲ್​ ದರ 88.60 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್​ ಡೀಸೆಲ್​ ದರ 84.35 ರೂಪಾಯಿ ಹಾಗೂ ಚೆನ್ನೈನಲ್ಲಿ ಪ್ರತಿ ಲೀಟರ್​ ಡೀಸೆಲ್​ 86.45 ರೂಪಾಯಿಗೆ ಮಾರಾಟವಾಗುತ್ತಿದೆ. ನೋಯ್ಡಾದಲ್ಲಿ ಪ್ರತಿ ಲೀಟರ್​ ಡೀಸೆಲ್​ 81.91 ರೂಪಾಯಿಗೆ ಮಾರಾಟವಾಗುತ್ತಿದೆ.

ಇನ್ನು, ಹೈದರಾಬಾದ್​ನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 94.79 ರೂಪಾಯಿ ಹಾಗೂ ಡೀಸೆಲ್​ ಪ್ರತಿ ಲೀಟರಿಗೆ 88.86 ರೂಪಾಯಿಗೆ ಮಾರಾಟವಾಗುತ್ತಿದೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಪೆಟ್ರೋಲ್​ ದರ ಏರಿಕೆ ಕಂಡಿದೆ. ದರ ಏರಿಕೆಯ ನಂತರ ಪ್ರತಿ ಲೀಟರ್​ ಪೆಟ್ರೋಲ್​ 97.39 ರೂಪಾಯಿಗೆ ಜಿಗಿದಿದೆ. ಹಾಗೂ ಡೀಸೆಲ್​ ದರ ಪ್ರತಿ ಲೀಟರಿಗೆ 90.91 ರೂಪಾಯಿಗೆ ಜಿಗಿದಿದೆ.

ಇಂಧನ ದರದಲ್ಲಿ ಗರಿಷ್ಠ ಮಟ್ಟ ತಲುಪಿದ ರಾಜಸ್ಥಾನದ ಶ್ರೀಗಂಗನಗರದಲ್ಲಿ ಪೆಟ್ರೋಲ್ ದರ ಶತಕ ಬಾರಿಸಿದ್ದು, ಪ್ರತಿ ಲೀಟರ್ ಪೆಟ್ರೋಲ್​ ದರ 25 ಪೈಸೆ ಹೆಚ್ಚಳದೊಂದಿಗೆ ದರ 100.13 ರೂಪಾಯಿ ತಲುಪಿತ್ತು. ಡೀಸೆಲ್ ದರ 92.13 ರೂಪಾಯಿಗೆ ಮಾರಾಟವಾಗುತ್ತಿತ್ತು. ಡೀಸೆಲ್ ಕೂಡಾ ಶತಕ ಭಾರಿಸುವ ಹಾದಿಯಲ್ಲಿ ಸಾಗುತ್ತಿತ್ತು.

5 ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಬ್ರೇಕ್ ಚುನಾವಣೆ ನಡೆಯಲಿರುವ 5 ರಾಜ್ಯಗಳಲ್ಲಿ ಇಂಧನ ಬೆಲೆ ಏರಿಕೆ ಸ್ಥಗಿತಗೊಳಿಸಲಾಗಿದೆ. ಸತತವಾಗಿ 8 ದಿನಗಳ ಕಾಲ ಇಂಧನ ದರ ಸ್ಥಿರತೆ ಕಾಪಾಡಿಕೊಂಡಿದೆ. ಅಂದರೆ, ಚುನಾವಣೆ ದಿನಾಂಕ ಘೋಷಣೆಯಾದ ನಂತರ ಇಂಧನ ಬೆಲೆ ಏರಿಕೆ ಸ್ಥಗಿತಗೊಂಡಿದೆ. ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ಪುದುಚೆರಿಯಲ್ಲಿ ನಡೆಯಲಿರುವ ಚುನಾವಣೆಯ ನಿಟ್ಟಿನಲ್ಲಿ ದರ ಬದಲಾವಣೆಯಾಗಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

ಇದನ್ನೂ ಓದಿ: ಕರ್ನಾಟಕ ಬಜೆಟ್ 2021: ಪೆಟ್ರೋಲ್ ದರದಲ್ಲಿ ಯಾವ ಇಳಿಕೆಯೂ ಆಗಲಿಲ್ಲ; ಇಂದು ರಾಜ್ಯದಲ್ಲಿ ರೂ. 96ರ ಗಡಿಯಲ್ಲಿ ಪೆಟ್ರೋಲ್​ ಬೆಲೆ

ಇದನ್ನೂ ಓದಿ: Petrol Diesel Price: ಸತತ 11ನೇ ದಿನದವರೆಗೆ ಸ್ಥಿರತೆ ಕಾಪಾಡಿಕೊಂಡ ಪೆಟ್ರೊಲ್ ದರ! ವಿಧಾನಸಭಾ ಚುನಾವಣೆಯಿಂದಾಗಿ ತೈಲ ಬೆಲೆಗಳು ಹೆಚ್ಚಾಗುತ್ತಿಲ್ಲವೇ?

Published On - 9:14 am, Wed, 17 March 21

Follow Us
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಮನೆಯ ಮುಂದೆ ಪಾರ್ಕ್ ಮಾಡಿದ್ದ ಆಟೋದ ಚಕ್ರ ಕಳವು
ಮನೆಯ ಮುಂದೆ ಪಾರ್ಕ್ ಮಾಡಿದ್ದ ಆಟೋದ ಚಕ್ರ ಕಳವು